Advertisment

ಬೆಂಗಳೂರು ರಸ್ತೆಗಳಲ್ಲಿ ಮೀನುಗಳು! ಬಲೆ ಹಾಕಿದ ಜನ; ರಣ ಮಳೆಯ ಅನಾಹುತದ 10 ಫೋಟೋಗಳು..!

author-image
Ganesh
Updated On
ಬೆಂಗಳೂರು ರಸ್ತೆಗಳಲ್ಲಿ ಮೀನುಗಳು! ಬಲೆ ಹಾಕಿದ ಜನ; ರಣ ಮಳೆಯ ಅನಾಹುತದ 10 ಫೋಟೋಗಳು..!
Advertisment
  • ರಾತ್ರಿ ಮಳೆಗೆ ರಸ್ತೆ ಜಲಾವೃತ.. ಸವಾರರ ಪರದಾಟ
  • ಬ್ಯಾಟರಾಯನಪುರದ ನಾಗದೇವನಹಳ್ಳಿ ಬಡಾವಣೆ
  • ಮಳೆ ನೀರಿನಿಂದಾಗಿ ಕೆರೆಯಂತಾದ ಬಡಾವಣೆಯ ರಸ್ತೆ

ಬೆಂಗಳೂರಲ್ಲಿ ಇಂದು ಬೆಳಗ್ಗೆ ರಣ ಭಯಂಕರ ಮಳೆಯಾಗಿದೆ. ಅಬ್ಬರಿಸಿ ಬೊಬ್ಬಿರಿದ ಹೊಡೆತಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರವಾಗಿ ಸಿಲಿಕಾನ್ ಸಿಟಿಯಲ್ಲಿ ಸಂಚಾರ ಮಾಡ್ತಿರೋ ವರುಣ ಸಾಕಷ್ಟು ಅವಾಂತರಕ್ಕೂ ಕಾರಣವಾಗಿದ್ದಾನೆ.

Advertisment

publive-image

ಎಲ್ಲೆಲ್ಲಿ ಏನೇನು ಆಗಿದೆ..?
ಬ್ಯಾಟರಾಯನಪುರದ ನಾಗದೇವನಹಳ್ಳಿ ಬಡಾವಣೆಯಲ್ಲಿ ಮಳೆ ನೀರಿನಿಂದಾಗಿ ಕೆರೆಯಂತಾಗಿದೆ. ಮನೆಗಳಿಗೆ ಹೋಗೋದಕ್ಕೂ ನಿವಾಸಿಗಳು ಹರಸಾಹಸ ಪಟ್ಟಿದ್ದಾರೆ. ಮಳೆ ನೀರು ಹೊರ ಹೋಗುವುದಕ್ಕೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಪ್ರತಿ ಬಾರಿ ಮಳೆಯಾದಾಗ್ಲೂ ನಿವಾಸಿಗಳಿಗೆ ಸಂಕಷ್ಟ ತಪ್ಪುತ್ತಿಲ್ಲ.

publive-image


ನೀರಿನ ಜೊತೆಗೆ ಮೀನು

ಮಳೆ ನೀರಿನ ಜೊತೆಗೆ ಬೆಂಗಳೂರಿಗರಿಗೆ ಮೀನುಗಳು ಕೂಡ ರಸ್ತೆಯಲ್ಲಿ ಸಿಗುತ್ತಿವೆ. RR ನಗರದ ಗಟ್ಟಿಗೆರೆ ಮೈನ್ ರೋಡಲ್ಲಿ ಮೀನು ಪ್ರತ್ಯಕ್ಷವಾಗಿದೆ. ನಗರದ ರಸ್ತೆಯಲ್ಲಿಯೇ ಮೀನು ಜನರು ಮೀನು ಹಿಡಿದಿದ್ದಾರೆ.

publive-image

ಓಕಳಿಪುರಂ ಅಂಡರ್​ಪಾಸ್​ನಲ್ಲಿ ಭಯಾನಕ ರೀತಿಯಲ್ಲಿ ನೀರು ನಿಂತಿದೆ. ಕೆರೆಯಂತಾದ ರಸ್ತೆಯಲ್ಲಿ ಸವಾರರ ಪರದಾಟ ನಡೆಸ್ತಿದ್ದಾರೆ. ಮಳೆಯಿಂದಾಗಿ ಅರ್ಧ ದಾರಿಯಲ್ಲೇ ಆಟೋ, ಕಾರುಗಳು ಕೆಟ್ಟು ನಿಂತಿವೆ.

Advertisment

publive-image

ಅಷ್ಟೇ ಅಲ್ಲ ಕೆಆರ್​ ಮಾರುಕಟ್ಟೆ, ಡಬಲ್ ರೋಡ್, ಟೌನ್ ಹಾಲ್, ಹನುಮಂತನಗರ, ಜೆಸಿ ರೋಡ್, ಶಾಂತಿನಗರ, ಸಿದ್ದಾಪುರ, ಲಾಲ್​ಬಾಗ್, ಸುಂಕದ ಕಟ್ಟೆ, ಯಶವಂತಪುರ, ಮೆಜೆಸ್ಟಿಕ್, ಚಿಕ್ಕಪೇಟೆ, ರಾಜಾಜಿನಗರ, ಆರ್​​ಆರ್​ ನಗರ ಸೇರಿಂದಂತೆ ನಗರದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗಿದೆ.

publive-imagepublive-imagepublive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment