Advertisment

ವೀಕೆಂಡ್ ರಿಲೀಫ್​​ನಲ್ಲಿದ್ದ ಜನಕ್ಕೆ ಮಳೆ ಆಘಾತ.. ಭಾರೀ ಅನಾಹುತ.. ಎಲ್ಲೆಲ್ಲಿ ಏನೆಲ್ಲ ಆಯ್ತು..? Photos

author-image
Ganesh
Updated On
ವೀಕೆಂಡ್ ರಿಲೀಫ್​​ನಲ್ಲಿದ್ದ ಜನಕ್ಕೆ ಮಳೆ ಆಘಾತ.. ಭಾರೀ ಅನಾಹುತ.. ಎಲ್ಲೆಲ್ಲಿ ಏನೆಲ್ಲ ಆಯ್ತು..? Photos
Advertisment
  • ಸಿಲಿಕಾನ್ ಸಿಟಿಗೆ ಮುಂಗಾರು ಆರ್ಭಟ... ಭಾರೀ ಆಘಾತ
  • ರಾಜಧಾನಿಯಲ್ಲಿ ಸುರಿದ ವರುಣನ ಆರ್ಭಟಕ್ಕೆ ಜನರು ತತ್ತರ
  • ಮೇಘರಾಜನ ನರ್ತನಕ್ಕೆ ನಗರದ ಬಹುತೇಕ ರಸ್ತೆ ಜಲಾವೃತ

ರಾಜಧಾನಿ ಬೆಂಗಳೂರು ವರುಣಾರ್ಭಟಕ್ಕೆ ತತ್ತರಿಸಿದೆ. ಹಲವೆಡೆ ಮೇಘರಾಜನ ನರ್ತನಕ್ಕೆ ಜಲಕಂಟ ಎದುರಾಗಿದ್ದು ಜನ ಜೀವನ ನೀರುಪಾಲಾಗಿದೆ. ಮನೆಯೊಳಗೆ ನೀರು ನುಗ್ಗಿದ್ದು, ರಾತ್ರಿಯಿಡೀ ಜಾಗರಣೆ ಕೂರುವಂತಾಗಿದೆ.. ವಾಹನ ಸವಾರರು ಸಂಪೂರ್ಣ ಹೈರಾಣಾಗ್ಬಿಟ್ಟಿದ್ದಾರೆ.

Advertisment

publive-image

ವೀಕೆಂಡ್ ಮೂಡ್ನಲ್ಲಿದ್ದ ಸಿಲಿಕಾನ್ ಸಿಟಿಗೆ ಮುಂಗಾರು ಆರ್ಭಟ ಭಾರೀ ಆಘಾತ ನೀಡಿದೆ. ಸಂಜೆಯಿಂದ ರಾತ್ರಿಯಿಡೀ ಸುರಿದ ವರ್ಷಧಾರೆಗೆ ಬೆಂಗಳೂರಿನ ಬಹುತೇಕ ಭಾಗ ಜಲಮಯವಾಗಿದ್ದು, ಸಾರ್ವಜನಿಕರು ಸುಸ್ತಾಗಿ ಹೋಗಿದ್ದಾರೆ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಶಾಕಿಂಗ್ ನ್ಯೂಸ್​.. ಇವತ್ತಿನಿಂದ ಹಾಲಿನ ದರ ಮತ್ತಷ್ಟು ಏರಿಕೆ

publive-image

ಜಲಾವೃತವಾದ ಅಂಡರ್ ಪಾಸ್​ನಲ್ಲಿ ಸಿಲುಕಿದ ಬಸ್
ಭಾರೀ ಮಳೆಯಿಂದಾಗಿ ಕೀನೋ ಥಿಯೇಟರ್ ಅಂಡರ್ ಪಾಸ್ ಜಲಾವೃತವಾಗಿತ್ತು. ಈ ವೇಳೆ ಮಲ್ಲೇಶ್ವರಂ ಲಿಂಕ್ ರೋಡ್ನಿಂದ ಮೆಜೆಸ್ಟಿಕ್ ಕಡೆ ಬರ್ತಿದ್ದ ಬಿಎಂಟಿಸಿ ಅಂಡರ್ ಪಾಸ್ನಲ್ಲಿ ಸಿಲುಕಿದ್ದು, ನೋಡ ನೋಡ್ತಿದ್ದಂತೆ ನೀರಿನ ಮಟ್ಟ ಹೆಚ್ಚಾಗಿ ಅರ್ಧ ಮುಳುಗಡೆಯಾಗಿದೆ. ತಕ್ಷಣ ಅಲರ್ಟ್ ಆದ ಡ್ರೈವರ್, ಕಂಡಕ್ಟರ್ ಪ್ರಯಾಣಿಕರನ್ನ ಕೆಳಗೆ ಇಳಿಸಿ ರಕ್ಷಿಸಿದ್ದಾರೆ. ಬಳಿಕ ಬಸ್ಅನ್ನು ನೀರಿನಿಂದ ತೆರವುಗೊಳಿಸಲಾಯ್ತು. ಇತ್ತ ಶೇಷಾದ್ರಿಪುರಂ ಅಂಡರ್ ಪಾಸ್ನಲ್ಲೂ ಕಸ ಸಿಲುಕಿ ಜಲಾವೃತವಾಗಿ ವಾಹನ ಸವಾರರು ಪರದಾಡಿದವು.

Advertisment

publive-image

ಅಂಡರ್ ಪಾಸ್ನಲ್ಲಿ ಬೈಕ್ ಸವಾರರ ಪರದಾಟ
ಕೆಆರ್ ಸರ್ಕಲ್ ಅಂಡರ್ ಪಾಸ್ನಲ್ಲಿ ಬೈಕ್ ಸವಾರರು ಪರದಾಡಿದ್ದಾರೆ. ನೀರು ತುಂಬಿಕೊಂಡಿದ್ದನ್ನು ನೋಡ್ತಿದ್ದಂತೆ ಸವಾರರು ಗಾಡಿಯನ್ನ ನಿಲ್ಲಿಸಿ ಹಿಂದಕ್ಕೆ ಬಂದಿದ್ದರಿಂದ ಭಾರೀ ಅಪಾಯದಿಂದ ಬಚಾವ್ ಆಗಿದ್ದಾರೆ.

ಇದನ್ನೂ ಓದಿ:ಈ ಮಹಿಳೆ ಸತ್ತ ನಂತರವೂ 14 ವರ್ಷಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡಿದಳು.. ಇದೆಲ್ಲ ಹೇಗೆ ಸಾಧ್ಯ..?

publive-image

ಮನೆಗಳಿಗೆ ನುಗ್ಗಿದ ಮಳೆ ನೀರು
ಗೋವಿಂದರಾಜ ನಗರದ ಪಟ್ಟೇಗಾರ ಪಾಳ್ಯದಲ್ಲಿ ಮಳೆಯಿಂದ ಭಾರೀ ಅವಾಂತರ ಸೃಷ್ಟಿಯಾಗಿದೆ. ಎಸ್.ಪಿ ಪೆಟ್ರೋಲ್ ಬಂಕ್ ಬಳಿಯ ಸುತ್ತಮುತ್ತಲೂ ಮನೆಗಳಿಗೆ ನೀರು ನುಗ್ಗಿದ್ದು, ಜನರು ಹೈರಾಣಾಗಿದ್ದಾರೆ. ರಾಜಾಜಿನಗರದ ಮಂಜುನಾಥನಗರದಲ್ಲಿ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಚರಂಡಿ ಹೂಳು ತೆಗೆದು ರಸ್ತೆಯಲ್ಲಿ ಬಿಟ್ಟ ಪರಿಣಾಮ ಮಳೆ ನೀರಿನಿಂದ ರಸ್ತೆ ಜಲಾವೃತವಾಗಿದೆ. ಅಷ್ಟೇ ಅಲ್ಲ ರಸ್ತೆ ಪಕ್ಕದ ಅಂಗಡಿ-ಬೇಕರಿ ಬಾಗಿಲಿಗೂ ಬಂದಿದ್ದು, ಜನರು ಪರದಾಡುವಂತಾಗಿತ್ತು. ಇನ್ನು ಮಹಾಲಕ್ಷ್ಮಿ ಲೇಔಟ್ನಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ, ಜನರು ಪರದಾಡಿದ್ದಾರೆ. ಬೈರತಿಯಲ್ಲಿ ಭಾರೀ ಮಳೆ ನೀರು ಮನೆಗಳಿಗೆ ನುಗ್ಗಿ ಸಾಕಷ್ಟು ಅವಾಂತರ ಆಗಿದೆ.. ರಾಜಕಾಲುವೆಯಲ್ಲಿ ನೀರು ಸರಿಯಾಗಿ ಹೋಗದ ಕಾರಣ ರಸ್ತೆ, ಮನೆಗಳಿಗೆ ನೀರು ಎಂಟ್ರಿ ಕೊಟ್ಟಿದ್ದು, ಜನರು ಪರದಾಡಿದ್ದಾರೆ.

Advertisment

ಇದನ್ನೂ ಓದಿ:ಚಹಾ ಹೀರುವ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ ಅಲ್ಲ.. ಯಾವ ದೇಶದಲ್ಲಿ ಹೆಚ್ಚು ಫೇಮಸ್​ ಗೊತ್ತಾ..?

publive-image

ಒಟ್ಟಾರೆ.. ಮಳೆಗಾಲದ ಅನಾಹುತದಿಂದ ಬೆಂಗಳೂರನ್ನು ಕಾಪಾಡ್ತೀವಿ ಅಂತಿದ್ದ ಸರ್ಕಾರಕ್ಕೆ, ಮುಂಗಾರು ಪ್ರವೇಶ, ದೊಡ್ಡ ಆಘಾತ ನೀಡಿದೆ. ಸಿಎಂ ಹಾಘೂ ಡಿಸಿಎಂ ಸಿಟಿ ರೌಂಡ್ಸ್ ಹೊಡೆದ್ರೂ, ಇನ್ನೂ ಮಳೆ ನೀರಿಂದ ರಾಜಧಾನಿಗೆ ಮುಕ್ತಿ ಸಿಗದೇ ಇರೋದು ನಿಜಕ್ಕೂ ವಿಪರ್ಯಾಸ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment