RCB ಮ್ಯಾಚ್​​ಗೂ ಅಡ್ಡಿ.. ಬೆಂಗಳೂರಲ್ಲಿ 20ಕ್ಕೂ ಅಧಿಕ‌ ಮನೆಗಳಿಗೆ ನುಗ್ಗಿದ ನೀರು.. ಎಲ್ಲೆಲ್ಲಿ ಏನೇನು ಆಯ್ತು..?

author-image
Ganesh
Updated On
RCB ಮ್ಯಾಚ್​​ಗೂ ಅಡ್ಡಿ.. ಬೆಂಗಳೂರಲ್ಲಿ 20ಕ್ಕೂ ಅಧಿಕ‌ ಮನೆಗಳಿಗೆ ನುಗ್ಗಿದ ನೀರು.. ಎಲ್ಲೆಲ್ಲಿ ಏನೇನು ಆಯ್ತು..?
Advertisment
  • ಬೆಂಗಳೂರಲ್ಲಿ ಮಳೆ ಬಂದು ಭಾರೀ ಅನಾಹುತ
  • ಆಟೋ ಮೇಲೆ ಮರ ಬಿದ್ದು, ದೊಡ್ಡ ಅವಾಂತರ ಸೃಷ್ಟಿ
  • ಸಿಕ್ಕಾಪಟ್ಟೆ ಟ್ರಾಫಿಕ್, ಯಾವ ಏರಿಯಾದಲ್ಲಿ ಏನೆಲ್ಲ ಸಮಸ್ಯೆ?

ಬೆಂಗಳೂರಲ್ಲಿ ಮಳೆಯಿಂದ ಭಾರೀ ಅನಾಹುತ ಆಗುತ್ತಿದೆ. ಮಧ್ಯಾಹ್ನದಿಂದ ಸುರಿಯುತ್ತಿರುವ ಮಳೆಯು ನಿರಂತರವಾಗಿ ಹೊಯ್ಯುತ್ತಿದ್ದು, ಇದರಿಂದ ಅನೇಕರು ತೊಂದರೆಗೆ ಸಿಲುಕಿದ್ದಾರೆ.

publive-image

ಎಲ್ಲೆಲ್ಲಿ ಏನೇನು ಆಗಿದೆ..?

ಮಳೆಯಿಂದಾಗಿ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಆರ್​ಸಿಬಿ ನಡುವಿನ ಪಂದ್ಯಕ್ಕೆ ಅಡಚಣೆ ಆಗಿದೆ. ಸಂಜೆ 7.30 ರಿಂದ ಪಂದ್ಯ ಆರಂಭವಾಗಬೇಕಿತ್ತು. ಆದರೆ ಕೊಂಚವೂ ಬಿಡುವು ಕೊಡದೆ ಸುರಿದ ಮಳೆಯಿಂದಾಗಿ ಪಂದ್ಯ ಆರಂಭ ಇನ್ನೂ ವಿಳಂಬ ಆಗುತ್ತಲೇ ಇದೆ.

ಇದನ್ನೂ ಓದಿ: ಶಿವಣ್ಣ ಮನೆಯಲ್ಲಿ ಒಂದೂವರೆ ಗಂಟೆ ಸಿಕ್ರೇಟ್ ಮೀಟಿಂಗ್.. ಕನ್ನಡ ಸ್ಟಾರ್​ ನಟರಿಗೆ ಒಂದು ಸಂದೇಶ..!

publive-image

ಟ್ರಾಫಿಕ್ ಜಾಮ್..!

ನಗರದ ಬಹುತೇಕ ಕಡೆಗಳಲ್ಲಿ ಈ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಾಡಿದೆ. ಮಳೆಯಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿ ಆಗಿದೆ. ಇದರಿಂದ ರಸ್ತೆಯಲ್ಲಿ ವಾಹನಗಳು ಕಿಲೋ ಮೀಟರ್ ಗಟ್ಟಲೇ ಕ್ಯೂ ಹಚ್ಚಿ ನಿಂತಿವೆ. ವಾಹನ ಸಂಚಾರಕ್ಕೆ ಅಡಚಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ದಿನ ನಿತ್ಯದ ಕೆಲಸ ಕಾರ್ಯಗಳಿಗೂ ತೊಂದರೆ ಆಗಿದೆ. ಮೆಜೆಸ್ಟಿಕ್, ವಿಲ್ಸನ್ ಗಾರ್ಡನ್, ಎಲೆಕ್ಟ್ರಾನಿಕ್ ಸಿಟಿ, ಮೆಲ್ಲೇಶ್ವರಂ, ಯಶವಂತಪುರ, ಔಟರ್ ರಿಂಗ್ ರೋಡ್ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದೆ.

publive-image

ನೆಲಕ್ಕೆ ಬಿದ್ದ ಬೃಹತ್ ಮರ..!

ಈಸ್ಟ್ ಎಂಡ್ ರಸ್ತೆಯಲ್ಲಿ ಬೃಹತ್ ಮರವೊಂದು ಚಲಿಸುತ್ತಿದ್ದ ಆಟೋ ಮೇಲೆ ಬಿದ್ದಿದೆ. ಆಟೋ ಸಂಪೂರ್ಣ ಜಖಂ ಆಗಿದೆ. ಈಸ್ಟ್ ಎಂಡ್ ರಸ್ತೆಯಿಂದ ಮೌಂಟ್ ಕಾರ್ಮೆಲ್ ಸ್ಕೂಲ್ ಕಡೆಯ ರಸ್ತೆ ಬಂದ್ ಆಗಿದೆ. ಆಟೋ ಚಾಲಕನ ಸ್ಥಿತಿ ಬಗ್ಗೆ ಮಾಹಿತಿ ಇಲ್ಲ.

publive-image

ಮಹದೇವಪುರ ವಿಧಾನಸಭಾ ಕ್ಷೇತ್ರದ ಬೆಳೆಗೆರೆ ರಸ್ತೆಯಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ಓರ್ವ ಬೈಕ್ ಸವಾರ ಬೈಕನ್ನು ರಸ್ತೆಯಲ್ಲೇ ಬಿಟ್ಟು ಜೀವ ಉಳಿಸಿಕೊಂಡಿದ್ದಾರೆ. ಇನ್ನು ಹೊರಮಾವಿನ ಸಾಯಿ ಲೇಔಟ್​ ಸಂಪೂರ್ಣ ಜಲಾವೃತ ಆದಂತಹ ಸ್ಥಿತಿ ನಿರ್ಮಾಣ ಆಗಿದೆ. ಸುಮಾರು 20 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ಇದನ್ನೂ ಓದಿ: ಭಾರತೀಯ ಸೇನೆಗೆ ವಿದೇಶಿ ಕ್ರಿಕೆಟಿಗರಿಂದ ವಿಶೇಷ ಗೌರವ.. ದಿಗ್ಗಜ ಸ್ಟಾರ್​ಗಳಿಂದ ಸೆಲ್ಯೂಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment