/newsfirstlive-kannada/media/post_attachments/wp-content/uploads/2024/08/Rain-In-Bengaluru.jpg)
ಬೆಂಗಳೂರಿನ ಹಲವೆಡೆ ಮಳೆರಾಯನ ಆರ್ಭಟ ಜೋರಾಗಿದೆ. ಮುಂದಿನ ಮೂರು ಗಂಟೆ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಿಸಿಲಾಗಿದೆ.
ರಾಜ್ಯ ಹವಾಮಾನ ಇಲಾಖೆ ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಮಳೆಯಿಂದ ಕೊಂಚ ಎಚ್ಚರದಿಂದಿರಿ ಎಂದು ಸೂಚಿಸಿದೆ.
/newsfirstlive-kannada/media/post_attachments/wp-content/uploads/2024/08/Rain-In-Bengaluru-1.jpg)
ಸದಾಶಿವನಗರ, ಸ್ಯಾಂಕಿ ರೋಡ್, ವೈಯಾಲಿಕಾವಲ್, ಜಯನಗರ, ಹೆಬ್ಬಾಳ, ಬನಶಂಕರಿ​ ಸುತ್ತಮುತ್ತ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಪರದಾಡಿದ್ದಾರೆ.
ಇದನ್ನೂ ಓದಿ: ಪ್ರಶಸ್ತಿ ಸಿಕ್ಕ ಖುಷಿಯಲ್ಲಿ ಅಪ್ಪುವನ್ನು ನೆನೆದ ರಿಷಬ್​ ಶೆಟ್ಟಿ! ಏನಂದ್ರು ಗೊತ್ತಾ?
ವರಮಹಾಲಕ್ಷ್ಮೀ ಹಬ್ಬದ ಜೊತೆಗೆ ವೀಕೆಂಡ್​ ಮೂಡ್​ನಲ್ಲಿದ್ದ ಜನರಿಗೆ ಮಳೆಯಿಂದ ಕೊಂಚ ಕಿರಿಕಿರಿಯಾಗಿದೆ. ಆದರೆ ಹಗಲೆಲ್ಲಾ ಬಿಸಿಲು ಸೆಕೆಯಿಂದ ತಡವರಿಸುತ್ತಿದ್ದ ಬೆಂಗಳೂರನ್ನು ಮಳೆರಾಯ ತಂಪು ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us