newsfirstkannada.com

Karnataka Rain: ಮುಂಗಾರು ಮಳೆ ಚುರುಕು.. ಪ್ರಾಣಕ್ಕೂ ತರ್ತಿದೆ ಕುತ್ತು.. ರಾಜ್ಯದಲ್ಲಿ ಒಟ್ಟು ಐವರು ಸಾವು

Share :

Published July 5, 2023 at 6:01pm

Update July 5, 2023 at 6:12pm

    ದೇವರ ಪೂಜೆಗೆ ಹೊರಟವನಿಗೆ ಯಮನಾದ ಕುಬ್ಜಾ ನದಿ

    ಮನೆಯ ಅಂಗಳದಲ್ಲೇ ಜೀವ ತೆಗೆದ ಮಳೆನೀರು

    ಕರಾವಳಿಯಲ್ಲಿ ಮುಂಗಾರು ಬಿರುಸು, ಏನೆಲ್ಲ ಅನಾಹುತ ಆಗಿದೆ..?

ಕಾರವಾರ/ಮಂಗಳೂರು: ರಾಜ್ಯದ ಕರಾವಳಿ ಭಾಗಗಳಲ್ಲಿ ಮುಂಗಾರು ಮಳೆ ಬಿರುಸು ಪಡೆದುಕೊಂಡಿದ್ದು ಭಾರೀ ಅನಾಹುತ ಸೃಷ್ಟಿಮಾಡುವ ಸೂಚನೆ ಸಿಕ್ಕಿದೆ. ನಿನ್ನೆ ಮತ್ತು ಇವತ್ತು ಸೃಷ್ಟಿಯಾದ ಅನಾಹುತಕ್ಕೆ ಕರಾವಳಿ ಭಾಗವೊಂದರಲ್ಲೇ ಒಟ್ಟು 5 ಮಂದಿ ಜೀವ ಬಿಟ್ಟಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಇಬ್ಬರು ಸಾವು

ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಒಟ್ಟು ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ದಿವಾಕರ್ ಶೆಟ್ಟಿ, ಶೇಷಾದ್ರಿ ಐತಾಳ್ ಅನ್ನೋರು ಮಳೆಯಿಂದ ಉಸಿರು ಚೆಲ್ಲಿದ್ದಾರೆ. ದಿವಾಕರ್ ಶೆಟ್ಟಿ, ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾರೆ. ರಾತ್ರಿ ಹೋಟೆಲ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಸ್ಕೂಟರ್​ನಿಂದ ಆಯತಪ್ಪಿಬಿದ್ದು ಸಾವನ್ನಪ್ಪಿದ್ದಾರೆ.

ದೇವರ ಪೂಜೆಗೆ ಹೊರಟಿದ್ದ ವೇಳೆ ನದಿಪಾಲು

ಜೋರಾದ ಮಳೆ ಹಿನ್ನೆಲೆಯಲ್ಲಿ ಆಯತಪ್ಪಿ ಕೆರೆಗೆ ಉರುಳಿ ಬಿದ್ದಿದ್ದರು. ತಡರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿದ್ದ ಮುಳುಗುತಜ್ಞರು ಮೃತದೇಹವನ್ನು ಮೇಲಕ್ಕೆ ಎತ್ತಿದ್ದರು. ಕೋಟಾ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕಮಲಶಿಲೆಯಲ್ಲಿ ಶೇಷಾದ್ರಿ ಐತಾಳ್ ( 75) ಎಂಬ ವೃದ್ಧರು ಸಾವನ್ನಪ್ಪಿದ್ದಾರೆ. ಕಮಲಶಿಲೆ ಸಮೀಪದ ತಪ್ಪಲು ನಿವಾಸಿಯಾಗಿದ್ದ ಇವರು, ದೇವಳಕ್ಕೆ ಪೂಜೆಗೆ ಆಗಮಿಸುತ್ತಿದ್ದಾಗ ನದಿ ಪಾಲಾಗಿದ್ದಾರೆ. ಕುಬ್ಜಾ ನದಿಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದು, ಕೊಲ್ಲೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮನೆಯ ಅಂಗಳದಲ್ಲೇ ಜೀವ ತೆಗೆದ ಮಳೆನೀರು

ಮಳೆಯಿಂದಾಗಿ ನೀರಿನಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ತಾರಮತಿ ನಾಯ್ಕ್ ಸಾವನ್ನಪ್ಪಿದ್ದಾರೆ. ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮನೆಯ ಅಂಗಳದಲ್ಲಿ ನೀರು ತುಂಬಿತ್ತು. ಈ ನೀರಿನಲ್ಲಿ ನಡೆದುಕೊಂಡು ಹೋಗ್ತಿದ್ದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಕಾಲು ಜಾರಿಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆ. ನಿರಂತರವಾಗಿ ಮಳೆ‌ ಸುರಿಯತ್ತಿರೋದ್ರಿಂದ ಮನೆ ಅಂಗಳಕ್ಕೆ ನೀರು ನುಗ್ಗಿತ್ತು.

ಮಂಗಳೂರಲ್ಲಿ ಎರಡು ಸಾವು

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಬಳಿಯ ಕುಳಾಯಿಯಲ್ಲಿ ನಡೆದಿದೆ. ಕುಷ್ಟಗಿ ಮೂಲದ ಸಂತೋಷ್ (28) ಮೃತ ಯುವಕ. ರಾತ್ರಿ ವೇಳೆ ಬಿರುಗಾಳಿಗೆ ವಿದ್ಯುತ್ ತಂತಿ ತುಂಡಾಗಿ ರಸ್ತೆಗೆ ಬಿದ್ದಿತ್ತು. ಇಂದು ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ ಅರಿವಿಗೆ ಬಾರದೇ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ್ದಾರೆ. ಮಂಗಳೂರಲ್ಲಿ ನಿನ್ನೆ ಕೂಡ ಒಂದು ಬಲಿಯಾಗಿತ್ತು. ಪಿಲಾರು ಬಳಿಯ ನಿವಾಸಿ ಸುರೇಶ್ ಗಟ್ಟಿ (52) ಮೃತ ವ್ಯಕ್ತಿ. ಸುರೇಶ್ ಗಟ್ಟಿ ಅವರು ಪೈಂಟಿಂಗ್ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸುರೇಶ್ ಗಟ್ಟಿ ಮನೆ ಸಮೀಪ ಕಾಲು ಸಂಕ ದಾಟುವ ವೇಳೆ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ಜೀವಹಾನಿ ಮಾತ್ರವಲ್ಲ ಅನೇಕ ಕಡೆ ಭಾರೀ ಅನಾಹುತ ಸೃಷ್ಟಿಯಾಗುತ್ತಿದೆ. ಹೊರ್ಡಿಂಗ್ ಬಿದ್ದು 12 ವಾಹನಗಳು ಜಖಂ ಆಗಿರುವ ಘಟನೆ ಮಂಗಳೂರಿನ ನಂತೂರು ಎಂಬಲ್ಲಿ ನಡೆದಿದೆ. ಇನ್ನೂ ರೆಡ್ ಅಲರ್ಟ್ ನಡುವೆಯೂ ಅಪಾಯ ಲೆಕ್ಕಿಸದೇ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದಾರೆ. ಇದು ಜಿಲ್ಲಾಡಳಿತವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಭಾಸ್ಕೇರಿ ಭಾಗದಲ್ಲಿ ಮನೆಗಳಿಗೆ, ತೋಟಕ್ಕೆ ಮಳೆಯ ನೀರು ನುಗ್ಗಿದೆ. ಗುಂಡಬಾಳ ನದಿ ಪ್ರವಾಕ್ಕೆ ತೋಟ, ಮನೆಗಳು ಜಲಾವೃತಗೊಂಡಿದೆ. ಜಿಲ್ಲೆಯ ಪೋಸ್ಟ್ ಚೆಂಡಿಯಾದಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಈ ಗುಡ್ಡ ಕುಸಿದ ಹಿನ್ನೆಲೆಯಲ್ಲಿ 7 ಮನೆಗಳು ನೆಲಸಮವಾಗುವ ಆತಂಕ ಎದುರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Karnataka Rain: ಮುಂಗಾರು ಮಳೆ ಚುರುಕು.. ಪ್ರಾಣಕ್ಕೂ ತರ್ತಿದೆ ಕುತ್ತು.. ರಾಜ್ಯದಲ್ಲಿ ಒಟ್ಟು ಐವರು ಸಾವು

https://newsfirstlive.com/wp-content/uploads/2023/07/RAIN-5.jpg

Load More