/newsfirstlive-kannada/media/post_attachments/wp-content/uploads/2024/04/RAIN-5-1.jpg)
ನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ಸುಮಾರು ಎಂಟರಿಂದ ಹತ್ತು ಮನೆಗಳು ಕುಸಿದು ಬಿದ್ದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನ ಮಂಡಿ ಪ್ರದೇಶದಲ್ಲಿ ಸಂಭವಿಸಿದೆ. ಭಾರೀ ಮಳೆಯಿಂದಾಗಿ 336 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ನಿರಂತರ ಮಳೆಗೆ ರಸ್ತೆಗಳೆಲ್ಲವೂ ನದಿಗಳಂತಾಗಿದ್ದು, ಜನಜೀವನ ಸಂಪೂರ್ಣ ಅಸ್ಥವ್ಯಸ್ಥವಾಗಿದೆ. ಇತ್ತ ಹಠಾತ್ ಮಳೆಯಿಂದಾಗಿ ಕುಪ್ವಾರ ಪ್ರದೇಶದಲ್ಲೂ ಕೂಡ ಹಲವು ರಸ್ತೆಗಳು ಮತ್ತು ಕಟ್ಟಡಗಳು ಹಾನಿಗೊಳಗಾಗಿವೆ. ಈ ಪ್ರದೇಶಗಳಲ್ಲಿ ನಿತ್ಯ ಮಳೆರಾಯ ಆರ್ಭಟಿಸುತ್ತಿದ್ದು, ಇನ್ನೂ ಸಾಕಷ್ಟು ಮನೆಗಳು ಶಿಥಿಲಾವಸ್ಥೆಯ ಹಂಚಿನಲ್ಲಿವೆ.
ಇದನ್ನೂ ಓದಿ:ಮಲಗಿದ್ದಲ್ಲೇ ನಾಲ್ವರ ನಿಗೂಢ ಹತ್ಯೆ ಕೇಸ್; ಆರೋಪಿಗೆ ಗುಂಡೇಟು.. ಅಸಲಿಗೆ ಆಗಿದ್ದೇನು?
ಜಮ್ಮು ಹಾಗೂ ಶ್ರೀನಗರ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಅನೇಕ ಸ್ಥಳಗಳಲ್ಲಿ ಭೂಕುಸಿತದಿಂದ ಉಂಟಾಗಿದೆ. ನಿರಂತರ ಮಳೆ ಮತ್ತು ಹಿಮಪಾತದಿಂದಾಗಿ ಹಲವಾರು ಪ್ರದೇಶಗಳಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹ ಉಂಟಾಗಿದೆ. ಇನ್ನೂ ಹೆದ್ದಾರಿಯುದ್ದಕ್ಕೂ ಈ ಭೂಕುಸಿತದಲ್ಲಿ ಹಲವು ವಾಹನಗಳು ಸಿಲುಕಿಕೊಂಡಿವೆ.
ಇದನ್ನೂ ಓದಿ:KL ರಾಹುಲ್ ಜೊತೆ ರೋಹಿತ್ ಮೀಟಿಂಗ್; ಕನ್ನಡಿಗನಿಗೆ ವಿಶ್ವಕಪ್ ತಂಡದಲ್ಲಿ ಸಿಗಲ್ವಾ ಚಾನ್ಸ್..!
ಬಂಡೆಗಳು ಮತ್ತು ಮಣ್ಣಿನ ರಾಶಿ ಪರ್ವತದ ಮೇಲಿಂದ ಕೆಳಗೆ ಜಾರಿಕೊಂಡು ಹೆದ್ದಾರಿಯಲ್ಲಿ ಬಿದ್ದಿದೆ. ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಹೆದ್ದಾರಿ ಇದಾಗಿದ್ದು, ಇಲ್ಲಿ ಉಂಟಾಗಿರುವ ಭೂಕುಸಿತದಿಂದ ಹೆದ್ದಾರಿ ನಿರ್ಬಂಧಿಸಲ್ಪಟ್ಟಿದೆ.
ಇದನ್ನೂ ಓದಿ:ಡ್ಯಾಮೇಜ್ ಕಂಟ್ರೋಲ್ಗೆ ದಳಪತಿಗಳು ದಿಟ್ಟ ಹೆಜ್ಜೆ.. ಐವರು ಸಂತ್ರಸ್ತೆಯರ ಮುಂದೆ SIT ಇಟ್ಟ ಪ್ರಶ್ನೆಗಳು ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ