Advertisment

ಎಲ್ಲೆಲ್ಲೂ ಮಳೆಯ ಆರ್ಭಟ.. ಶಾಲಾ-ಕಾಲೇಜುಗಳಿಗೆ ಇವತ್ತೂ ರಜೆ.. ಮತ್ತೆ ಎಲ್ಲೆಲ್ಲಿ ಭಾರೀ ಅನಾಹುತ ಆಗಿದೆ..?

author-image
Ganesh
Updated On
ರಾಜ್ಯದಲ್ಲಿ ಇನ್ನೂ ಎಷ್ಟು ದಿನ ಭರ್ಜರಿ ಮಳೆ.. ಬೆಂಗಳೂರಿಗೆ ಬಿಸಿಲು ಬರೋದು ಯಾವಾಗ ಗೊತ್ತಾ..?
Advertisment
  • ಕುಸಿದ ಗುಡ್ಡ ತೆರವು ಮಾಡುತ್ತಿದ್ದ ವೇಳೆಯೇ ಮತ್ತೆ ಕುಸಿದ ಗುಡ್ಡ
  • ಗುಡ್ಡ ಕುಸಿತ ಭೀತಿ.. ಮಡಿಕೇರಿ-ಮಂಗಳೂರು ಹೆದ್ದಾರಿ ಬಂದ್
  • ಮೈಸೂರು ಜಿಲ್ಲಾದ್ಯಂತ ಪ್ರವಾಹ ಭೀತಿ, ಜನರಿಗೆ ಎಚ್ಚರಿಕೆ ಸಂದೇಶ‌

ಕರ್ನಾಟಕದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅದೆಷ್ಟೋ ಮನೆಗಳು ನೆಲಸಮವಾಗಿವೆ. ಒಂದು ಕಡೆ ಗುಡ್ಡ ಕುಸಿಯುತ್ತಿದ್ರೆ, ಇನ್ನೊಂದು ಕಡೆ ನದಿಗಳ ಆರ್ಭಟ ಜೋರಾಗಿದೆ.

Advertisment

ಕುಮಟಾ ಬರ್ಗಿ ಹೆದ್ದಾರಿಯಲ್ಲಿ ಗುಡ್ಡ ತೆರವು ಮಾಡುತ್ತಿದ್ದ ವೇಳೆಯೇ ಮತ್ತೆ ಎರಡು ಮೂರು ಬಾರಿ ಗುಡ್ಡದ ಮಣ್ಣು ಕುಸಿದೆ. ಇದರಿಂದಾಗಿ ಗುಡ್ಡ ತೆರವುಗೊಳಿಸುತ್ತಿದ್ದ ಐಆರ್‌ಬಿ ಸಿಬ್ಬಂದಿ ಕಂಗಾಲಾಗಿದ್ದಾರೆ. ಕಾರವಾರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರ ಬರ್ಗಿ ಬಳಿ ಹೆದ್ದಾರಿ ಬ್ಲಾಕ್ ಆಗಿದೆ. ನಿನ್ನೆ ಬೆಳಗ್ಗೆ ಹೆದ್ದಾರಿಯ ಒಂದು ಬದಿ ಗುಡ್ಡ ಕುಸಿದು ರಸ್ತೆ ಬಂದ್ ಆಗಿತ್ತು. ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇವತ್ತೂ ಸಹ ಮಳೆಯ ಅಬ್ಬರ ಜೋರಾಗಿರಲಿದ್ದು, ಜಿಲ್ಲೆಯಾದ್ಯಂತ ಎಲ್ಲಾ ಶಾಲಾ-ಕಾಲೆಜ್​ಗೆ ರಜೆ ಘೋಷಿಸಲಾಗಿದೆ.

ಇದನ್ನು ಓದಿ:ಜಿಯೋ-ಏರ್‌ಟೆಲ್​​ಗೆ ನೆಲ ಕಚ್ಚುವ ಆತಂಕ; ಸಂಚಲನ ಸೃಷ್ಟಿಸಿದ TATA-BSNL ಒಪ್ಪಂದ..!

publive-image

ಗುಡ್ಡ ಕುಸಿತ ಭೀತಿ.. ಮಡಿಕೇರಿ-ಮಂಗಳೂರು ಹೆದ್ದಾರಿ ಬಂದ್
ಕೊಡಗಿನಲ್ಲಿ ವರುಣನ ಆರ್ಭಟ ಕಾವೇರಿಯ ಉಪ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಭರ್ತಿ‌ಯಾಗಿದ್ದು, ಭಗಂಡೇಶ್ವರ ಸನ್ನಿದಿಯ ಮೆಟ್ಟಿಲವರೆಗೂ ನೀರು ಹರಿಯುತ್ತಿದೆ. ಕೊಡಗಿನಲ್ಲಿ ಗುಡ್ಡ ಕುಸಿತ ಭೀತಿ ಎದುರಾದ ಹಿನ್ನೆಲೆ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ 5 ದಿನ ಅಂದ್ರೆ ಜುಲೈ 22 ರವರೆಗೆ NH 275 ಬಂದ್ ಮಾಡಿ ಕೊಡಗು ಡಿಸಿ ವೆಂಕಟರಾಜಾ ಆದೇಶ ಹೊರಡಿಸಿದ್ದಾರೆ. ಪರಿಣಾಮ ವಾಹನಗಳು ಮಡಿಕೇರಿ ನಗರದಲ್ಲಿ ಸಾಲುಗಟ್ಟಿ ನಿಂತಿವೆ. ಇಂದು ಕೊಡಗಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆಯನ್ನ ಘೋಷಣೆ ಮಾಡಲಾಗಿದೆ.

Advertisment

ಮೈಸೂರು ಜಿಲ್ಲಾದ್ಯಂತ ಪ್ರವಾಹ ಭೀತಿ, ಜನರಿಗೆ ಎಚ್ಚರಿಕೆ ಸಂದೇಶ‌
ಮೈಸೂರು ಜಿಲ್ಲಾದ್ಯಂತ ಉತ್ತಮ ಮಳೆಯಾಗ್ತಿದೆ.. ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಳದಿಂದಾಗಿ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, ಇತಿಹಾಸ ಪ್ರಸಿದ್ಧ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಸ್ನಾನಘಟ್ಟ, ಅಯ್ಯಪ್ಪಸ್ವಾಮಿ ದೇವಾಲಯ, ಮಲ್ಲನಮೂಲೆ ಮಠ, ಪರಶುರಾಮ ದೇವಾಲಯ ಜಲಾವೃತವಾಗಿದೆ. ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಹೆಚ್‌.ಡಿ‌ ಕೋಟೆಯಲ್ಲಿರುವ ನುಗು ಜಲಾಶಯ ಭರ್ತಿಯಾಗಿದ್ದು, ನದಿ ಪಾತ್ರದ ಜನರಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ. ನಂಜನಗೂಡಿನ ಮೇದರಗೇರಿ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪ್ರವಾಹದ ಭೀತಿ ಎದುರಿಸುತ್ತಿದ್ದು, ಶಿಥಿಲಗೊಂಡ ಕಟ್ಟಡದಲ್ಲಿಯೇ ಪಾಠ-ಪ್ರವಚನ ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ:ಬಯಲಾಯ್ತು ಗಂಗೂಲಿ ಅಸಲಿ ಮುಖವಾಡ.. ಕ್ರೆಡಿಟ್ ಆಸೆಗಾಗಿ ಸತ್ಯ ಒಪ್ಪಿಕೊಂಡ ದಾದಾ..!

publive-image

ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್, ಶಾಲೆಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮತ್ಸ್ಯ ತೀರ್ಥ ಎಂದೇ ಪ್ರಸಿದ್ದ ಪಡೆದಿರುವ ಶಿಶಿಲೇಶ್ವರ ದೇವಾಲಯದ ಪ್ರಾಂಗಣ ನದಿ ನೀರು ಪಾಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಇಂದೂ ಸಹ ರೆಡ್​ ಅಲರ್ಟ್​ ಘೋಷಿಸಿದ್ದು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಹಾಗೂ ಕಡಬ ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

Advertisment

publive-image

ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಾದ್ಯಂತ ನಿರಂತರ ಮಳೆಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಣ್ಣಿನ ರಾಶಿ ಕುಸಿದು ಹೊರನಾಡು-ಶೃಂಗೇರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಳಸ ಸಮೀಪದ ಭದ್ರಾ ನದಿಯ ಹರಿವಿನಲ್ಲಿ ಗಣನೀಯ ಏರಿಕೆ ಕಂಡಿದ್ದು, ಆಪಾಯ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಬಾಳೆಹೊನ್ನೂರು ಕಳಸ ರಸ್ತೆ ಸಂಚಾರ ತಾತ್ಕಲಿಕ ಬಂದ್ ಮಾಡಲಾಗಿದೆ. ಇಂದು ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ ಶಾಲೆಗಳಿಗೆ ರಜೆ ಸೂಚಿಸಲಾಗಿದೆ.

publive-image

ಮಳೆಯ ಅಬ್ಬರಕ್ಕೆ ಮೂರು ಜಿಲ್ಲೆಗಳ ಶಿಕ್ಷಣಗಳಿಗೆ ರಜೆ ಫಿಕ್ಸ್​
ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಹಾಸನದ ಸಕಲೇಶಪುರ, ಆಲೂರು, ಬೇಲೂರು, ಹಾಸನ, ಹೊಳೆನರಸೀಪುರ ಮತ್ತು ಅರಕಲಗೂಡು.. ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment