Advertisment

ಕೊಚ್ಚಿ ಹೋದ ಯುವಕ.. 2 ದಿನದ ಮಳೆಗೆ 8 ಸಾವು.. ವರುಣದೇವ ಕರುಣೆ ತೋರು ಅಂತಿದ್ದಾರೆ ಜನ..!

author-image
Ganesh
Updated On
ಕೊಚ್ಚಿ ಹೋದ ಯುವಕ.. 2 ದಿನದ ಮಳೆಗೆ 8 ಸಾವು.. ವರುಣದೇವ ಕರುಣೆ ತೋರು ಅಂತಿದ್ದಾರೆ ಜನ..!
Advertisment
  • ಮಹಾರಾಷ್ಟ್ರದಲ್ಲಿ ಮಳೆ.. ರತ್ನಗಿರಿಯಲ್ಲಿ ಕೊಚ್ಚಿಹೋದ ಯುವಕ
  • ಪಾಲ್ಸ್‌ ನೋಡಲು ಪ್ರವಾಸಕ್ಕೆ ಬಂದು ಸಿಲುಕಿದ್ದ ಆರು ಜನರ ರಕ್ಷಣೆ
  • ಭರೂಚ್​​ನಲ್ಲಿ ಪ್ರವಾಹದಿಂದಾಗಿ ಮರ ಹತ್ತಿದ ವ್ಯಕ್ತಿ

ಕರ್ನಾಟಕ ಅಷ್ಟೇ ಅಲ್ಲ.. ಮಹಾರಾಷ್ಟ್ರ ಸೇರಿ ಉತ್ತರ ಭಾರತದಲ್ಲೂ ವರುಣನ ಅಬ್ಬರ ಜೋರಾಗಿದೆ.. ಅಲ್ಲಲ್ಲಿ ಕೆಲವು ಹಾನಿಗಳು ಸಂಭವಿಸಿವೆ.

Advertisment

ರತ್ನಗಿರಿ, ಮಹಾರಾಷ್ಟ
ಕಳೆದ ಎರಡ್ಮೂರು ದಿನಗಳಿಂದ ಮಹಾರಾಷ್ಟ್ರದಲ್ಲಿ ಭಾರೀ ಮಳೆ‌ ಸುರಿಯುತ್ತಿದೆ. ರತ್ನಾಗಿರಿ ಸೇರಿ ಸುತ್ತಮುತ್ತಲೂ ಮುಂದುವರೆದ ಮಳೆಯಿಂದ ಅವಾಂತರವೇ ಸೃಷ್ಟಿ ಆಗಿದೆ. ಪ್ರವಾಹದ ನೀರಿನಲ್ಲಿ ಯುವಕನೋರ್ವ ಕೊಚ್ಚಿ ಹೋಗಿದ್ದಾನೆ. ಸ್ಥಳದಲ್ಲಿ ಎನ್‌ಡಿಆರ್‌ಎಫ್ ಬೀಡುಬಿಟ್ಟು ಶೋಧ ನಡೆಸ್ತಿದೆ. ಖೇಡ ತಾಲೂಕಿನ ಸಾಖರೋಲಿ ಗ್ರಾಮದ ಬಳಿ ಗುಡ್ಡ ಕುಸಿದಿದೆ.

ಇದನ್ನೂ ಓದಿ:ದೇಗುಲದ ದ್ವಾರ ಬಾಗಿಲಲ್ಲೇ ಪ್ರಾಣಬಿಟ್ಟ ಮಹಿಳೆ; ಸಾವಿಗೆ ಕಾರಣ ಒಂದು ಮಂಗ..

publive-image

ಪಾಲ್ಸ್‌ಗೆ ಪ್ರವಾಸಕ್ಕೆ ಬಂದು ಸಿಲುಕಿದ್ದ ಆರು ಜನರ ರಕ್ಷಣೆ
ನಾಶಿಕ್​ನಲ್ಲೂ ಭಾರೀ ಮಳೆ ಆಗ್ತಿದೆ.. ಅಂಜನೇರಿ ವಾಟರ್ ಪಾಲ್ಸ್ ಬಳಿ ಪ್ರವಾಸಕ್ಕೆಂದು ತೆರಳಿದ್ದ ಆರು ಜನ ಪರದಾಡಿದ್ದಾರೆ.. ಏಕಾಏಕಿ ಸುರಿದ ಮಳೆಗೆ ಅಂಜನೇರಿ ವಾಟರ್ ಪಾಲ್ಸ್‌ನಲ್ಲಿ ಸಿಲುಕಿದ್ದಾರೆ.. ಹಾಗೆ ಸಿಲುಕಿದ್ದ 6 ಜನ ಪ್ರವಾಸಿಗರನ್ನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದೆ.

Advertisment

ಭರೂಚ್​​ನಲ್ಲಿ ಪ್ರವಾಹದಿಂದಾಗಿ ಮರ ಹತ್ತಿದ ವ್ಯಕ್ತಿ
ಗುಜರಾತ್‌ನ ಭರೂಚ್‌ನಲ್ಲಿ ಭಾರೀ ಮಳೆ ಆಗ್ತಿದೆ.. ಪ್ರವಾಹದಿಂದಾಗಿ ವ್ಯಕ್ತಿಯೊಬ್ಬ ಮರ ಹತ್ತಿ ಜೀವ ಉಳಿಸಿಕೊಂಡಿದ್ದಾರೆ.. ಬಳಿಕ ಹಗ್ಗದ ಸಹಾಯದಿಂದ ರಕ್ಷಣಾ ತಂಡ ಬಚಾವ್​​ ಮಾಡಿದೆ..

ಷಹಜನ್​ಪುರ ಜಿಲ್ಲೆಯ ಹಲವು ಹಳ್ಳಿಗಳು ಮುಳುಗಡೆ
ಯುಪಿಯ ಷಹಜಹಾನ್‌ಪುರದಲ್ಲಿ ಭಾರೀ ಮಳೆಗೆ ಪ್ರವಾಹವೇ ಸೃಷ್ಟಿ ಆಗಿದೆ.. ರಸ್ತೆಗಳಲ್ಲಿ ಐದು ಅಡಿ ನೀರು ತುಂಬಿದೆ.. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಪರಿಸ್ಥಿತಿ ಇನ್ನೂ ಹದಗೆಟ್ಟಿದೆ..

ಇದನ್ನೂ ಓದಿ:ರೋಹಿತ್, ರಾಹುಲ್​ರನ್ನೇ ಸೈಡಿಗೆ ನಿಲ್ಲಿಸಿದ ಜೈಸ್ವಾಲ್.. ಈ ಯಂಗ್​​ಗನ್​​ನ​​​ ಸ್ಪೆಷಲ್ಲೇ ಬೇರೆ..!

Advertisment

publive-image

ಉಕ್ಕಿದ ಬಾಗ್ಮತಿ ನದಿ.. ನೀರಿನಲ್ಲಿ ತೇಲ್ತಿದೆ ಮುಜಾಫರ್‌ಪುರ!
ಎಲ್ಲಿ ನೋಡಿದ್ರು ನೀರೇ ನೀರು.. ಇದು ಬಿಹಾರದ ಸ್ಥಿತಿ.. ಮುಜಾಫರ್‌ಪುರದಲ್ಲಿ ಪ್ರವಾಹ ಉಕ್ಕುತ್ತಿದೆ.. ಬಾಗ್ಮತಿ ನದಿಯ ಪ್ರವಾಹದಿಂದಾಗಿ ಬಕುಚಿ ಸೇತುವೆ ಮುಳುಗಡೆ ಆಗಿದೆ.. ಹಲವು ಶಾಲೆಗಳಿಗೆ ನೀರು ನುಗ್ಗಿದ್ದು, ಶಾಲೆಗೆ ಬಂದಿದ್ದ ಮಕ್ಕಳು, ಪ್ರಯಾಸದಿಂದ ಮನೆಗೆ ಮರಳಿದ್ದಾರೆ..

ಉತ್ತರ ಪ್ರದೇಶದಲ್ಲಿ ಎರಡು ದಿನದ ಮಳೆಗೆ 8 ಮಂದಿ ಬಲಿ
ಉತ್ತರ ಪ್ರದೇಶದಲ್ಲಿ ಕಳೆದ ಎರಡು ದಿನಗಳಲ್ಲಿ ಮಳೆ ಆರ್ಭಟಕ್ಕೆ 8 ಜನ ಸಾವನ್ನಪ್ಪಿದ್ದಾರೆ. ಆಗ್ರಾ, ಕಾನ್ಪುರ್, ಬಹ್ರೈಚ್, ಚಿತ್ರಕೂಟ್, ಗಾಜಿಪುರ, ಹತ್ರಾಸ್, ಲಖಿಂಪುರ ಖೇರಿ, ಬರೇಲಿ, ಸೀತಾಪುರ್ ಸೇರಿ ಉತ್ತರ ಪ್ರದೇಶದ 17 ಜಿಲ್ಲೆಗಳು ಮಳೆಗೆ ನಲುಗಿವೆ.

publive-image

ಗೋವಾ, ಕೇರಳ, ಮಹಾರಾಷ್ಟ್ರದ ಹಲವೆಡೆ ರೆಡ್ ಅಲರ್ಟ್
ಮಾನ್ಸೂನ್ ಕೆಳಮುಖವಾಗಿ ಚಲಿಸಲು ಪ್ರಾರಂಭಿಸಿದೆ.. ಈ ವಾರ ಕರಾವಳಿ ಕೇರಳ, ಕರ್ನಾಟಕ ಮತ್ತು ಕೊಂಕಣ ಗೋವಾಕ್ಕೆ ವರುಣ ತಿರುಗಿ ಬೀಳಲಿದ್ದಾನೆ. ಹೀಗಾಗಿ ಗೋವಾ, ಕೇರಳ, ಮಹಾರಾಷ್ಟ್ರದ ಹಲವು ಭಾಗಕ್ಕೆ ರೆಡ್​​ ಅಲರ್ಟ್​​ ನೀಡಲಾಗಿದೆ. ಭಾರೀ ಮಳೆ ಮುನ್ಸೂಚನೆ ಕಾರಣ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ..

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment