/newsfirstlive-kannada/media/post_attachments/wp-content/uploads/2025/04/klb-rain5.jpg)
ಮಳೆ ಬಂದ್ರೆ ಒಂದು ಗೋಳು.. ಮಳೆ ಬಂದಿಲ್ಲ ಅಂದ್ರೆ ಒಂದು ಗೋಳು ಅನ್ನೋ ಪರಿಸ್ಥಿತಿ ಕರ್ನಾಟಕದ್ದು. ಬೇಸಿಗೆ ಬೇಸಿಗೆ ಅಂತಾ ಸುಸ್ತಾದವ್ರು, ಮಳೆ ಚಳಿಗೆ ಕಂಬಳಿ ಹೊದಿಸಿಕೊಂಡು ಮಲಗ್ತಿದ್ದಾರೆ.
ಬಿರುಗಾಳಿ ಮಳೆಗೆ ಹೆದ್ದಾರಿ ಮೇಲೆ ಬಿದ್ದ ಬೃಹತ್ ಮರಗಳು
ಕಲಬುರಗಿ ಜಿಲ್ಲೆ ವಿವಿಧೆಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಕಲಬುರಗಿ-ಚಿಂಚೋಳಿ ಹೆದ್ದಾರಿ ಮೇಲೆ ಬೃಹತ್ ನೀಲಗಿರಿ ಮರಗಳು ಬಿದ್ದ ಕಾರಣ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು. ಇತ್ತ ಗಡಿಲಿಂಗದಳ್ಳಿ ಗ್ರಾಮದದಲ್ಲಿ ಸಿಡಿಲಿಗೆ ಆಕಳು ಬಲಿಯಾಗಿದೆ. ಬೋದಾನ್ ಗ್ರಾಮದಲ್ಲಿ ಬಿರುಗಾಳಿಗೆ ಮನೆ ಮೇಲಿನ ಟಿನ್‌ಶೆಡ್ ಹಾರಿ ಹೋಗಿದ್ರೆ, ವಿದ್ಯುತ್ ವೈರ್ ತುಂಡಾಗಿ ಬಿದ್ದಿದೆ.
ರಾಯಚೂರಿನಲ್ಲಿ ಸಿಡಿಲು ಬಡಿತಕ್ಕೆ ಇಬ್ಬರು ಸಾವು
ರಾಯಚೂರಿನಲ್ಲಿ ಗುಡುಗು ಸಹಿತ ಮಳೆಯಾಗಿದೆ. ಪ್ರತ್ಯೇಕ ಘಟನೆಯಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಕುರಿಗಳನ್ನು ಮೇಯಿಸಲು ಹೊಲಕ್ಕೆ ಹೋಗಿದ್ದ ಖಾನಾಪುರದ ಉಡುಮಗಲ್ ಗ್ರಾಮದ ಮಲ್ಲಮ್ಮ ಮತ್ತು ಮರ್ಚಟಾಳ ಗ್ರಾಮದ ಹನುಮಂತ ಯಾದವ್ ಸಿಡಿಲಿಗೆ ಬಲಿ ಆಗಿದ್ದಾರೆ.
ಚಿಟಗುಪ್ಪಾ ಪಟ್ಟಣದಲ್ಲಿ ಬಿರುಗಾಳಿಗೆ ಧರೆಗುರುಳಿದ ಬೃಹತ್ ಮರ
ಬೀದರ್ನ ಚಿಟಗುಪ್ಪಾದ ಟಿಪ್ಪು ಸುಲ್ತಾನ್ ಬಡಾವಣೆಯಲ್ಲಿ ಬಿರುಗಾಳಿಗೆ 50 ವರ್ಷ ಹಳೆ ಬೇವಿನ ಮರ ಧರೆಗುರುಳಿದೆ. ಮನೆ ಮತ್ತು ಕಾರ್ ಮೇಲೆ ಮೇಲೆ ಮರ ಬಿದ್ದ ಪರಿಣಾಮ, ಗೋಡೆ ಕುಸಿದಿದೆ, ಕಾರ್ ಜಖಂ ಆಗಿದೆ. ಮರ ಬೀಳ್ತಿದ್ದಂತೆ ಮಹಿಳೆ ಮನೆಯಿಂದ ಹೊರ ಬಂದು, ಪ್ರಾಣ ಉಳಿಸಿದ್ದಾರೆ.
ಗುಡುಗು.. ಮಿಂಚು.. ಬಿರುಗಾಳಿ ಮಳೆಗೆ ಕುರಿಗಳು ಸಾವು
ಕೊಪ್ಪಳದ ಯಲಬುರ್ಗಾದ ಗಾಣದಾಳದಲ್ಲಿ ಗಾಳಿ, ಗುಡುಗು ಸಹಿತ ಮಳೆಗೆ 35 ಕುರಿಗಳು ಸಾವನ್ನಪ್ಪಿವೆ. ಕುರಿಗಳ ಸಾವಿನಿಂದ ಕುರಿಗಾಯಿ ಗವಿಸಿದ್ದಪ್ಪ ಕಣ್ಣೀರಿಟ್ಟಿದ್ದಾರೆ.
ಮಳೆ ಅಬ್ಬರಕ್ಕೆ ಧರೆಗುರುಳಿದ ಅಡಿಕೆ.. ತೆಂಗು ಮರ
ಕಳೆದ ಎರಡು ದಿನಗಳಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿತಿದೆ. ಕೊಡಗವಳ್ಳಿಹಟ್ಟಿ ಗ್ರಾಮದ 25ಕ್ಕೂ ಹೆಚ್ಚು ರೈತರ ಜಮೀನಲ್ಲಿ ನೂರಾರು ಅಡಿಕೆ, ತೆಂಗಿನ ಮರಗಳು ನೆಲಕ್ಕುರುಳಿವೆ.. ಕಳೆದ 30 ವರ್ಷಗಳಿಂದ ಪೋಷಿಸಿದ್ದ ಮರಗಳು ನಾಶವಾಗಿದ್ದು, ರೈತರು ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಬಿಸಿಲಿನ ತಾಪಕ್ಕೆ ಬಸವಳಿದಿದ್ದ ತುಮಕೂರು ಜನರಿಗೆ ವರುಣ ತಂಪೆರೆದಿದ್ದಾನೆ. ಇತ್ತ ಮೈಸೂರಿನಲ್ಲೂ ರಸ್ತೆಗಳು ಕೆರೆಯಂತಾಗಿದ್ವು. ಬೆಂಗಳೂರಲ್ಲೂ ಜಿಟಿಜಿಟಿ ಮಳೆಗೆ ಆರ್ಸಿಬಿ ತಂಡ ಮ್ಯಾಚ್ ಸೋಲೋ ಹಾಗಾಯ್ತು ಅಂತಾ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದುಂಟು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ