Advertisment

ಮಳೆ ಮಾಡಿದ ಅನಾಹುತಕ್ಕೆ ನಾಲ್ವರು ಸಾವು.. ಇಂದು ಮುಂಜಾನೆ ನಡೆಯಿತು ಘೋರ ದುರಂತ.. Photos

author-image
Ganesh
Updated On
ಮಳೆ ಮಾಡಿದ ಅನಾಹುತಕ್ಕೆ ನಾಲ್ವರು ಸಾವು.. ಇಂದು ಮುಂಜಾನೆ ನಡೆಯಿತು ಘೋರ ದುರಂತ.. Photos
Advertisment
  • ಮಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ
  • ಮಳೆಗೆ ಗೋಡೆ ಕುಸಿದು ಗಂಡ, ಹೆಂಡತಿ, ಮಕ್ಕಳಿಬ್ಬರು ಸಾವು
  • ಸ್ಥಳೀಯರು, ಅಧಿಕಾರಿಗಳು ದುರ್ಘನಾ ಸ್ಥಳಕ್ಕೆ ದೌಡು

ಮಂಗಳೂರು: ನಿರಂತರ ಮಳೆಗೆ ಮನೆ ಗೋಡೆ ಕುಸಿದು ನಾಲ್ವರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುತ್ತಾರು ಮದನಿ ನಗರದಲ್ಲಿ ನಡೆದಿದೆ.

Advertisment

publive-image

ಇಂದು ಮುಂಜಾನೆ ದುರ್ಘಟನೆ ನಡೆದಿದೆ. ಮನೆಯೊಳಗಿದ್ದ ಯಾಸಿರ್(45), ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಮೃತ ದುರ್ದೈವಿಗಳು. ಅಬೂಬಕ್ಕರ್ ಎಂಬವವರಿಗೆ ಸಂಬಂಧಿಸಿದ ಮನೆ ಇದಾಗಿದೆ.

ಇದನ್ನೂ ಓದಿ:ಮಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ.. ಮಳೆಗೆ ಗೋಡೆ ಕುಸಿದು ಗಂಡ, ಹೆಂಡತಿ, ಇಬ್ಬರು ಮಕ್ಕಳು ಸಾವು

publive-image

ನಿನ್ನೆ ರಾತ್ರಿ ಯಾಸೀರ್ ಕುಟುಂಬ ಊಟ ಮಾಡಿ ನಿದ್ರೆಗೆ ಜಾರಿತ್ತು. ಬೆಳಗ್ಗೆ ಎಳುವಷ್ಟರಲ್ಲಿ ಕುಟುಂಬ ಜೀವಂತ ಸಮಾಧಿ ಆಗಿದೆ. ಸದ್ಯ ಮೂವರ ಮೃತದೇಹವನ್ನು ಸ್ಥಳೀಯರು, ಅಧಿಕಾರಿಗಳು ಹೊರತೆಗೆದಿದ್ದಾರೆ. ಮತ್ತೊಬ್ಬ ಬಾಲಕಿ ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆಯುತ್ತಿದೆ. ರಾತ್ರಿ ಸುರಿದ ಭಾರೀ ಮಳೆಗೆ ದುರಂತ ಸಂಭವಿಸಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisment

publive-image

ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದಾರೆ. ಸದ್ಯ ಘಟನೆ ಹೇಗೆ ಆಗಿದೆ ಎಂದು ಪರಿಶೀಲನೆ ನಡೆಸ್ತಿದ್ದಾರೆ. ವರದಿಗಳ ಪ್ರಕಾರ.. ಇಂದು ಮುಂಜಾನೆ ವೇಳೆ ಮಳೆಗೆ ಗೋಡೆ ನೆನೆದು ಕಸಿದು ಬಿದ್ದಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಆಗುತ್ತಿದೆ. ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ.

publive-image

ಇದನ್ನೂ ಓದಿ:ಪೇಪರ್​ ವರ್ಕ್​ ಶುರು ಮಾಡಿದ ಮತ್ತೊಂದು ಟೀಂ.. ದರ್ಶನ್ ಗ್ಯಾಂಗ್​ನ ಮತ್ತಷ್ಟು ಕ್ರೂರತ್ವ ಬಯಲಾದ್ರೂ ಅಚ್ಚರಿ ಇಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment