newsfirstkannada.com

ಉತ್ತರ ಭಾರತದಲ್ಲಿ ನಿಲ್ಲದ ವರುಣನ ಆರ್ಭಟ; ಅಸ್ಸಾಂ ಒಂದರಲ್ಲೇ 27,000 ಜನರಿಗೆ ಜಲಕಂಟಕ..!

Share :

Published August 13, 2023 at 7:05am

    ಜಮ್ಮುವಿನ ವೈಷ್ಣೋದೇವಿ ಮಾರ್ಗದಲ್ಲಿ ಮಳೆ ಅಬ್ಬರ!

    ಹಿಮಾಚಲದಲ್ಲಿ ಕಡಿಮೆಯಾಗ್ತಿಲ್ಲ ಭೂಕುಸಿತದ ಭೀತಿ

    ರಷ್ಯಾದಲ್ಲೂ ಮಳೆ ಅಬ್ಬರ.. ಭೀಕರ ಪ್ರವಾಹ

ಉತ್ತರ ಭಾರತದಲ್ಲಿ ರಕ್ಕಸ ರೂಪ ತಾಳಿ ಅಬ್ಬರಿಸುತ್ತಿರೋ ವರುಣ ಜನರನ್ನ ಆತಂಕಕ್ಕೆ ತಳ್ಳಿದ್ದಾನೆ. ಇತ್ತ ಮಳೆ ಅಬ್ಬರಕ್ಕೆ ಉತ್ತರ ತತ್ತರವಾಗ್ತಿದ್ರೆ ಅತ್ತ ನೆರೆಯ ನರ್ತನಕ್ಕೆ ನೆರೆ ರಾಷ್ಟ್ರ ಚೀನ ಸಹ ನಲುಗಿ ಹೋಗ್ತಿದೆ. ರಷ್ಯಾದಲ್ಲೂ ವರುಣನ ರಾದ್ಧಾಂತ ಜೋರಾಗಿದೆ.

27,000 ಜನರಿಗೆ ಜಲಕಂಟಕ

ಅಸ್ಸಾಂ ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ಮಳೆರಾಯ ಜನ ಜೀವನವನ್ನ ಅಸ್ತವ್ಯಸ್ತ ಮಾಡಿದ್ದಾನೆ. ಮಳೆ ಆರ್ಭಟಕ್ಕೆ ಅಸ್ಸಾಂ ಜನರ ಬದಕು ಕೊಚ್ಚಿಹೋಗ್ತಿದೆ. ಅಸ್ಸಾಂನಾದ್ಯಂತ ಮಳೆಯಿಂದ ಉಂಟಾದ ಅವಾಂತರಗಳಿಂದ ಸುಮಾರು 27,000 ಮಂದಿ ಸಮಸ್ಯೆಗೆ ಸಿಲುಕಿದ್ದಾರೆ. ಇನ್ನೂ ಅಸ್ಸಾಂನ 18 ಜಿಲ್ಲೆಗಳ 175 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಜನ ಹೈರಾಣಾಗಿದ್ದಾರೆ. ರಾಜ್ಯದ ಧೀಮಾಜಿ, ದಿಬ್ರುಘರ್​, ದರಂಗ್​, ಜೊರಾತ್​, ಗೊಲ್ಗಾಟ್​ ಹಾಗೂ ಶಿವಸಾಗರ್​ ಜಿಲ್ಲೆಗಳ ಪರಿಸ್ಥಿತಿ ಹೇಳತೀರದ್ದಾಗಿದೆ.

ಅಸ್ಸಾಂನಲ್ಲಿ ಮಳೆಯಿಂದ ಜಲಾವೃತಗೊಂಡ ರಸ್ತೆ

ಜಮ್ಮುವಿನ ವೈಷ್ಣೋದೇವಿ ಮಾರ್ಗದಲ್ಲೂ ಮಳೆ ಅಬ್ಬರ ಜೋರಾಗಿದೆ. ಎಡೆಬಿಡದೇ ಸುರಿಯುತ್ತಿರೋ ಮಳೆಯಿಂದ ರಸ್ತೆಗಳ ಮೇಲೆ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ಹಲವು ಅಂಗಡಿ ಮುಂಗಟ್ಟುಗಳಿಗೆ ಸಹ ನೀರು ನುಗ್ಗಿ ಜನ ಪರದಾಟ ನಡೆಸಿದ್ದಾರೆ.

ಹಿಮಾಚಲ ಪ್ರದೇಶಲ್ಲಿ ಒಂದ್ಕಡೆ ವರುಣಾರ್ಭಟ ಮುಂದುವರೆದ್ರೆ ಮತ್ತೊಂದು ಕಡೆ ಭಾರೀ ಭೂಕುಸಿತ ಸಂಭವಿಸುತ್ತಿದೆ.. ಮಂಡಿ ಜಿಲ್ಲೆಯ ತಾಚಿವಾಲೆಯ ಗೆರುನಲ್ಲಾ ಬಳಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿದ್ದು ಬೃಹದಾಕಾರದ ಬಂಡೆಗಳು ರಸ್ತೆಗುರುಳಿವೆ.

ಬಿಯಾಸ್​ ನದಿಯ ಭೋರ್ಗರೆತ ಮತ್ತಷ್ಟು ಹೆಚ್ಚಳ

ಹಿಮಾಚಲದ ಮಂಡಿ ಜಿಲ್ಲೆಯಲ್ಲಿ ಜಲ ಪ್ರವಾಹ ಭಾರೀ ಅವಾಂತರವನ್ನೇ ಸೃಷ್ಟಿಸಿದೆ.. ಬಿಯಾಸ್​ ನದಿಯ ಭೋರ್ಗರೆತ ನದಿ ತೀರದ ಜನರನ್ನ ಬೆಚ್ಚಿಬೀಳಿಸಿದೆ.. ಜಿಲ್ಲೆಯ ಹಲವು ಭಾಗಗಳಲ್ಲಿ ನದಿಯ ನೀರು ಜನವತಿ ಪ್ರದೇಶಗಳಿಗೂ ನುಗ್ಗಿ ಅವಾಂತರನ್ನ ಸೃಷ್ಟಿಸಿದೆ.

ಅಸ್ಸಾಂನಲ್ಲಿ ಮಳೆಯಿಂದ ಜಲಾವೃತಗೊಂಡ ರಸ್ತೆ
ಅಸ್ಸಾಂನಲ್ಲಿ ಮಳೆಯಿಂದ ಜಲಾವೃತಗೊಂಡ ರಸ್ತೆ

ರಷ್ಯಾದಲ್ಲೂ ಮಳೆ ಅಬ್ಬರ.. ಭೀಕರ ಪ್ರವಾಹ

ರಷ್ಯಾದಲ್ಲೂ ಮಳೆ ಅಬ್ಬರ ಜೋರಾಗಿದ್ದು ಎಡೆಬಿಡದೇ ಸುರಿಯುತ್ತಿರೋ ಮಳೆ ಪ್ರವಾಹದ ರೂಪ ತಾಳಿದೆ.. ರಷ್ಯಾದ ಉಸ್ರಿಯಾಸ್ಕ್​ ನಗರ ಪ್ರವಾಹದಲ್ಲಿ ಮುಳುಗಿಹೋಗಿದ್ದು ರಸ್ತೆಗಳು ನದಿಗಳಂತಾಗಿವೆ.. ಪ್ರವಾಹದ ನೀರು ಸಿಕ್ಕ ಸಿಕ್ಕ ವಸ್ತುಗಳನ್ನ ಕೊಚ್ಚಿಕೊಂಡು ಹೋಗ್ತಿದ್ದು, ಹಲವು ಮನೆ ಹಾಗೂ ವಾಹನಗಳು ಮುಳುಗಿ ಹೋಗಿವೆ.. ಇನ್ನೂ ಪ್ರವಾಹದ ಅಬ್ಬರಕ್ಕೆ ಜನರು ಮನೆಯಿಂದ ಹೊರಬಾರದಂತ ಸ್ಥಿತಿ ನಿರ್ಮಾಣವಾಗಿದ್ದು, ಬೋಟ್​ಗಳ ಮೊರೆಹೋಗಿದ್ದಾರೆ.

ಚೀನಾದಲ್ಲಿ ಮಳೆ ಅಬ್ಬರಕ್ಕೆ 2 ಬಲಿ.. 16 ಮಂದಿ ನಾಪತ್ತೆ

ನೆರೆಯ ರಾಷ್ಟ್ರ ಚೀನಾದಲ್ಲೂ ಅಬ್ಬರಿಸಿ ಬೊಬ್ಬರಿಯುತ್ತಿರೂ ವರುಣ ಸಾವಿನ ಸರಮಾಲೆಯನ್ನ ಸೃಷ್ಟಿಸುತ್ತಿದ್ದಾನೆ.. ಚೀನಾದ ಟೈಪೋನ್​ ಡಾಕ್ಸುರಿಯಲ್ಲಿ ಉಂಟಾದ ಪ್ರವಾಹಕ್ಕೆ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ.. ಅಲ್ಲದೇ 16 ಮಂದಿ ನಾಪತ್ತೆಯಾಗಿದ್ದು, ನಾಪತ್ತೆಯಾದವರ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಒಟ್ನಲ್ಲಿ ಉತ್ತರ ಭಾರತ ಸೇರಿ ನೆರೆಯ ರಾಷ್ಟ್ರದಲ್ಲಿ ನೆರೆ ಅಬ್ಬರ ಜೋರಾಗಿದ್ದು ಜನರ ಬದುಕು ಮುರಾಬಟ್ಟೆಯಾಗಿದೆ.. ಮಿತಿ ಮೀರಿ ರೌದ್ರನರ್ತನ ಮೆರೆಯುತ್ತಿರೋ ವರುಣ ತನ್ನ ಅಬ್ಬರವನ್ನ ತಗ್ಗಿಸಿಕೊಳ್ಳದಿದ್ರೆ ಮತ್ತಷ್ಟು ಅವಾಂತರಗಳು ಸೃಷ್ಟಿಯಾಗುವ ಸಾಧ್ಯತೆಯೂ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರ ಭಾರತದಲ್ಲಿ ನಿಲ್ಲದ ವರುಣನ ಆರ್ಭಟ; ಅಸ್ಸಾಂ ಒಂದರಲ್ಲೇ 27,000 ಜನರಿಗೆ ಜಲಕಂಟಕ..!

https://newsfirstlive.com/wp-content/uploads/2023/08/RAIN-1.jpg

Load More