ಮಳೆಯೋ ಮಳೆ.. ಕರ್ನಾಟಕದಲ್ಲಿ ನಿನ್ನೆ ಮಳೆರಾಯ ಏನೆಲ್ಲ ಅನಾಹುತ ಮಾಡಿದ್ದಾನೆ..? Photos

author-image
Ganesh
Updated On
ಮಳೆಯೋ ಮಳೆ.. ಕರ್ನಾಟಕದಲ್ಲಿ ನಿನ್ನೆ ಮಳೆರಾಯ ಏನೆಲ್ಲ ಅನಾಹುತ ಮಾಡಿದ್ದಾನೆ..? Photos
Advertisment
  • ವರುಣಾರ್ಭಟ.. ಮೈಸೂರು, ಕೊಡಗು ಅಂಗನವಾಡಿಗೆ ರಜೆ
  • ಶಿರಾಡಿ ಘಾಟ್‌ನ ದೊಡ್ಡತಪ್ಲೆ ಬಳಿ ಮತ್ತೆ ರಸ್ತೆಗೆ ಕುಸಿದ ಮಣ್ಣು
  • ಕೃಷ್ಣಾ ಜಲಾನಯನಲ್ಲಿ ಮಳೆ.. ಆಲಮಟ್ಟಿಗೆ ಬಂತು ಜೀವ ಕಳೆ

ಮುಂಗಾರು ಆರಂಭದಲ್ಲೇ ಮಳೆರಾಯ ಕರುನಾಡ ಜನರನ್ನ ಕಾಡೋದಕ್ಕೆ ಶುರು ಮಾಡಿದ್ದಾನೆ. ವರ್ಷಾ ವರ್ಷಾ ಮಳೆ ಬರ್ತಾನೆ ಇದೆ.. ಮುಂಜಾಗ್ರತೆ ಕ್ರಮ ತಗೊಳ್ತಾನೇ ಇದ್ದಾರೆ.. ಆದ್ರೂ ಕೂಡ ಮಳೆಯಿಂದ ಪರದಾಡೋ ಜನರ ಸಂಕಷ್ಟ ಇನ್ನೂ ಬಗೆ ಹರಿದಿಲ್ಲ.

ವರುಣಾರ್ಭಟ.. ಮೈಸೂರು, ಕೊಡಗು ಅಂಗನವಾಡಿಗೆ ರಜೆ

ಕಳೆದ ಎರಡು ದಿನಗಳಿಂದ ನಿರಂತರ ವರುಣಾರ್ಭಟಕ್ಕೆ ಮೈಸೂರು, ಕೊಡಗು ಎರಡು ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಇನ್ನೂ ಈ ಎರಡು ಜಿಲ್ಲೆಗಳಲ್ಲಿ ಮಕ್ಕಳ ಆರೋಗ್ಯ ಮತ್ತು ಹಿತ ದೃಷ್ಟಿಯಿಂದ ಅಂಗನವಾಡಿ ಜೊತೆಗೆ ಇಂದು ಮತ್ತು ಮಾಳೆ ಕೊಡಗು ವಿವಿಗೂ ರಜೆ ಘೋಷಣೆ ಮಾಡಲಾಗಿದೆ. ಪರೀಕ್ಷೆಗಳನ್ನ ಮರು ನಿಗದಿಪಡಿಸಲು ಮಂಡಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಇದನ್ನೂ ಓದಿ: ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ SRH.. ಕೊನೆ ಪಂದ್ಯದಲ್ಲಿ ಕೆಕೆಆರ್​ಗೆ ಭಾರೀ ಮುಖಭಂಗ!

publive-image

ಶಿರಾಡಿ ಘಾಟ್‌ನ ದೊಡ್ಡತಪ್ಲೆ ಬಳಿ ಮತ್ತೆ ರಸ್ತೆಗೆ ಕುಸಿದ ಮಣ್ಣು

ಮಳೆಗಾಲ ಪ್ರಾರಂಭದಲ್ಲೇ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಂದ್ರೆ.. ಶಿರಾಡಿ ಘಾಟ್‌ನ ದೊಡ್ಡತಪ್ಲೆ ಬಳಿ ಮತ್ತೆ ರಸ್ತೆಗೆ ಮಣ್ಣು ಕುಸಿದಿದೆ. ರಸ್ತೆ ಹಾಳಾದ ಹಿನ್ನೆಲೆ ಕೆಲ ಕಾಲ ವಾಹನ ಸಂಚಾರವೂ ಸ್ಥಗಿತವಾಗಿತ್ತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ರೂ ಕೆಲಸ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಳೆದ ವರ್ಷವೂ ಈ ಜಾಗದಲ್ಲಿ ಭಾರೀ ಮಣ್ಣು ಕುಸಿದಿತ್ತು. ಈಗ ಮತ್ತೆ ಮಣ್ಣು ಕುಸಿತ ಜನರಲ್ಲಿ ಆತಂಕ ಹೆಚ್ಚಿಸಿದೆ. ಇತ್ತ ಸಕಲೇಶಪುರ ತಾಲೂಕಿನ ಬೊಮ್ಮನಕೆರೆ ಬಳಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನಿರ್ಮಾಣವಾದ ಕೆಸರಿನಲ್ಲಿ ಕೆಎಸ್ಆರ್ಟಿಸಿ ಬಸ್ ಸಿಲುಕಿಕೊಂಡು ಪರದಾಡುವಂತಾಗಿತ್ತು.

ಇದನ್ನೂ ಓದಿ: ಮಾವಿನ ಹಣ್ಣು ತಿಂದ್ಮೇಲೆ ಈ ತಪ್ಪನ್ನು ಮಾತ್ರ ಮಾಡ್ಬೇಡಿ.. ಹೀಗೆ ಮಾಡಿದ್ರೆ ಜೀವಕ್ಕೆ ಬರುತ್ತಾ ಆಪತ್ತು?

publive-image

ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ಆಟೋ ಮೇಲೆ ಮರ ಬಿದ್ದು ಚಾಲಕ ರತ್ನಕರ್ ಸಾವನ್ನಪ್ಪಿದ್ದ. ಕಣ್ಣೀರಲ್ಲಿ ಮುಳುಗಿರೋ ಕುಟುಂಬಕ್ಕೆ ಶೃಂಗೇರಿ ಶಾಸಕ ರಾಜೇಗೌಡ ದೈರ್ಯ ತುಂಬೋ ಕೆಲಸ ಮಾಡಿದ್ದಾರೆ. ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೃಷ್ಣಾ ಜಲಾನಯನಲ್ಲಿ ಮಳೆ.. ಆಲಮಟ್ಟಿಗೆ ಬಂತು ಜೀವ ಕಳೆ

ಕೃಷ್ಣಾ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಮಳೆ ಆಗ್ತಿರೋದ್ರಿಂದ ಬರಿದಾದ ವಿಜಯಪುರದ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು ಕೃಷ್ಣಾ ನದಿಯಲ್ಲಿ ಜೀವ ಕಳೆ ಬಂದಿದೆ. ಡೆಡ್ ಸ್ಟೋರೇಜ್​ ಅಂತಕ್ಕೆ ತಲುಪಿದ್ದ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಲ್ಲಿ.. ಸದ್ಯ 27 ಟಿಎಂಸಿ ನೀರು ಸಂಗ್ರಹವಾಗಿದೆ.

publive-image

ಸಮುದ್ರ ಅಲೆಗಳ ನಡುವೆ ಜೋಡಿಗಳ ರಿಸ್ಕೀ ಫೊಟೋ ಶೂಟ್

ಕೇರಳದಲ್ಲಿ ಮುಂಗಾರು ಮಳೆ ಎಫೆಕ್ಟ್​ನಿಂದಾಗಿ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಮಲ್ಪೆ ದಡಕ್ಕೆ ಬೃಹತ್ ಗಾತ್ರದ ಅಲೆಗಳು ಅಪ್ಪಳಿಸುತ್ತಿದೆ. ಹಾಗೆ ಅಬ್ಬರಿಸುತ್ತಿರುವ ಅಲೆಗಳ ನಡುವೆ ಮಲ್ಪೆ ಸೀ ವಾಕ್ ಎಂಡ್ ಪಾಯಿಂಟ್​ನಲ್ಲಿ ಬೀಚ್​ಗಳಿಗೆ ನಿರ್ಬಂಧ ಹೇರಿದ್ರೂ.. ಜೋಡಿಗಳ ರಿಸ್ಕೀ ಫೊಟೋ ಶೂಟ್ ಮಾಡಿ ಹುಚ್ಚಾಟ ಮೆರೆದಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ 47 ಕೊರೊನಾ ಕೇಸ್.. ಪಾಸಿಟಿವಿಟಿ ರೇಟ್‌ ಹೆಚ್ಚಾದ್ರೆ ಎಲ್ಲರಿಗೂ ಟೆನ್ಷನ್; ಯಾಕೆ ಗೊತ್ತಾ?

ಮಳೆ ಅಬ್ಬರಕ್ಕೆ ಪಕ್ಕೆ ಧರೆ ಕುಸಿತ.. ಪ್ರವಾಸಿ ಕಾರು ಪಲ್ಟಿ!

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರಕ್ಕೆ ಕಳಸ ತಾಲೂಕಿನ ಚನ್ನಡ್ಲು ಗ್ರಾಮದಲ್ಲಿ ರಸ್ತೆ ಪಕ್ಕೆ ಧರೆ ಕುಸಿದಿದೆ. ರಸ್ತೆ ತೆರವು ಕಾರ್ಯಚರಣೆಯನ್ನ ಸ್ಥಳೀಯರೇ ಮಾಡಿ ಮುಗಿಸಿದ್ದಾರೆ. ಇದೇ ಚನ್ನಡ್ಲುನಲ್ಲಿ 2019ರಲ್ಲಿ ಭೂಕುಸಿತ ಕಂಡಿತ್ತು. ಮತ್ತೇ ಭೂ‌ಕುಸಿತದ ಅತಂಕ ಹುಟ್ಟಿಸಿದ್ದಾನೆ ವರುಣ. ಇತ್ತ ಮಳೆಗೆ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಗ್ರಾಮದ ಹೇಮಾವತಿ ನದಿಯ ಉಪನದಿ ಹಳ್ಳಕ್ಕೆ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಕಾರೋಂದು ಬಿದ್ದಿದೆ. ಗಾಳಿ-ಮಳೆ ನಡುವೆ ಸ್ಥಳೀಯರು ಹಳ್ಳದಿಂದ ಕಾರು ಹೊರ ತೆಗೆದಿದ್ದಾರೆ.

publive-image

ನಿರ್ಮಾಣ ಹಂತದ ಮನೆಯ ಗೋಡೆ ಕುಸಿತ.. ಹೈರಾಣಾದ ಜನ

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗ್ತಿರೋ ಹಿನ್ನೆಲೆ ಜನ ಹೈರಾಣಾಗಿದ್ದಾರೆ. ಮಂಗಳೂರು ನಗರದ ಪಾಂಡೇಶ್ವರ ಎಂಬಲ್ಲಿ ರಸ್ತೆಗೆ ಬಿದ್ದ ಭಾರೀ ಗಾತ್ರದ ಗೋಡೆಯ ಕಲ್ಲುಗಳು.. ಕಡೇಶ್ವಾಲ್ಯ ಗ್ರಾಮದ ಕಲ್ಲಾಜೆ ಎಂಬಲ್ಲಿ ನಿರ್ಮಾಣ ಹಂತದ ಮನೆಯ ಗೋಡೆ ಧರೆಗುರುಳಿದೆ. ಒಟ್ನಲ್ಲಿ ಮುಂಗಾರು ಆರಂಭವೇ ಅದೆಷ್ಟೋ ಜನರ ನಿದ್ದೆಗೆಡಿಸಿದೆ.

ಇದನ್ನೂ ಓದಿ: NTPC ಅಲ್ಲಿ ಹಲವು ಉದ್ಯೋಗ ಅವಕಾಶಗಳು.. ಇಂದಿನಿಂದಲೇ ಅರ್ಜಿ ಆರಂಭ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment