ಭೀಕರ ಮಳೆಗೆ ತತ್ತರಿಸಿದ ಮುಂಬೈ, ಪುಣೆ.. ಎರಡು ಮಹಾನಗರಕ್ಕೆ ರೆಡ್‌ ಅಲರ್ಟ್‌; ಭಾರೀ ಎಚ್ಚರಿಕೆ!

author-image
Gopal Kulkarni
Updated On
ಭೀಕರ ಮಳೆಗೆ ತತ್ತರಿಸಿದ ಮುಂಬೈ, ಪುಣೆ.. ಎರಡು ಮಹಾನಗರಕ್ಕೆ ರೆಡ್‌ ಅಲರ್ಟ್‌; ಭಾರೀ ಎಚ್ಚರಿಕೆ!
Advertisment
  • ಮಹಾರಾಷ್ಟ್ರದಲ್ಲಿ ಭೀಕರ ಮಳೆ ಮುಂಬೈ, ಪುಣೆಯಲ್ಲಿ ಪರದಾಟ
  • ಪುಣೆಯಲ್ಲಿ ನಾಲ್ವರ ದುರ್ಮರಣ, ಮುಂದಿನ 24 ಗಂಟೆ ಭೀಕರ ಮಳೆ
  • ಮುಂಬೈನಲ್ಲೂ ನಿಲ್ಲದ ಮಳೆರಾಯ, ವಿಮಾನ ಹಾರಾಟದಲ್ಲಿ ತೊಂದರೆ

ಮುಂಬೈ: ಮಹಾರಾಷ್ಟ್ರದಲ್ಲಿ ವರುಣ ಅಬ್ಬರ ಮುಂದುವರಿದಿದೆ. ಮುಂಬೈ, ಕೊಲ್ಹಾಪುರ ಹಾಗೂ ಪುಣೆ ಅಕ್ಷರಶಃ ನೀರಲ್ಲಿ ನಿಂತಿವೆ. ಬರುವ ದಿನಗಳಲ್ಲಿ ಇನ್ನೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್​ ಘೋಷಣೆ ಮಾಡಿದೆ. ಇದರ ಮಧ್ಯೆ ಮುಂಬೈನಲ್ಲಿ ಹಿಂದೆಂದೂ ಸುರಿಯದಷ್ಟು ಮಳೆ ಜುಲೈ ತಿಂಗಳಲ್ಲಿ ಸುರಿದಿದ್ದು. ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ಶಾಲಾ ಕಾಲೇಜುಗಳು ಸಂಪೂರ್ಣವಾಗಿ ಬಾಗಿಲು ಮುಚ್ಚಿಕೊಂಡಿವೆ. ಮುಂಬೈನಲ್ಲಿ ಸುಮಾರು 150 ಸೆಂಟಿ ಮೀಟರ್​ನಷ್ಟು ಮಳೆಯಾದ ಕಾರಣ ರಸ್ತೆಗಳೆಲ್ಲಾ ನೀರಲ್ಲಿ ನಿಂತಿದ್ದು. ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿವೆ. ವಿಮಾನ ಹಾಗೂ ರೇಲ್ವೆ ಸಂಚಾರಕ್ಕೂ ಕೂಡ ಮಳೆ ಅಡ್ಡಿಯಾಗಿ ನಿಂತಿದೆ.

publive-image

ಭೀಕರ ಮಳೆಗೆ ಪುಣೆಯಲ್ಲಿ ನಾಲ್ವರ ದುರ್ಮರಣ

ಮಹಾರಾಷ್ಟ್ರದಾದ್ಯಂತ ಸುರಿಯುತ್ತಿರುವ ಮಳೆ ಒಂದರ ಮೇಲೋಂದು ಅನಾಹುತಗಳನ್ನು ಜನಸಾಮಾನ್ಯರಿಗೆ ತಂದೊಡ್ಡುತ್ತಿದೆ. ಭೀಕರ ಮಳೆಯಿಂದಾಗಿ ರಸ್ತೆಗಳೆಲ್ಲಾ ನೀರಿನಲ್ಲಿ ನಿಂತಿದ್ದು, ಮರಗಳು ವಿದ್ಯುತ್ ತಂತಿಗಳು ಕಡಿದು ರಸ್ತೆಯಲ್ಲಿ ಬಿದ್ದಿದ್ದು, ಸಾರ್ವಜನಿಕರಿಗೆ ಮರಣ ಶಾಸನಗಳಾಗಿ ಪರಿಣಮಿಸುತ್ತಿವೆ. ಪುಣೆಯೊಂದರಲ್ಲಿಯೇ ವಿದ್ಯುತ್​​ ತಂತಿಯು ಕಡಿದು ಬಿದ್ದ ಕಾರಣ ವಿದ್ಯುತ್ ಶಾಕ್ ತಗುಲಿ ಮೂವರು ದುರ್ಮರಣಕ್ಕೆ ಈಡಾಗಿದ್ದಾರೆ. ಡೆಕ್ಕನ್ ಏರಿಯಾದಲ್ಲಿ ವ್ಯಕ್ತಿಯೊಬ್ಬ ತನ್ನ ತಳ್ಳುವ ಗಾಡಿಯಲ್ಲಿ ಮೊಟ್ಟೆಯನ್ನು ತೆಗೆದುಕೊಂಡು ಹೋಗುವಾಗ ನೀರಿನಲ್ಲಿ ಮುಳುಗಿ ಅಸುನೀಗಿದ್ದಾನೆ. ದುರಂತಗಳ ಸರಮಾಲೆಯನ್ನು ತಂದಿಟ್ಟುರುವ ಮಳೆಯಿಂದಾಗಿ ರಸ್ತೆಗಳು ನೀರಿನಲ್ಲಿ ನಿಂತಿವೆ. ಹೀಗಾಗಿ ಸ್ಥಳೀಯ ಅಧಿಕಾರಿಗಳು ರಸ್ತೆಯಲ್ಲಿನ ಅವಶೇಷಗಳನ್ನು ತೆಗೆದು ನೀರು ಹರಿದು ಹೋಗಲು ಸರಾಗ ಜಾಗ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದು ಅಲ್ಲದೇ ಕಡಕ್ವಾಸ್ಲಾ ಡ್ಯಾಮ್​ನಿಂದ ಸುಮಾರು 9400 ಕ್ಯೂಸೆಕ್ ನೀರು ಹೊರಗೆ ಬಿಟ್ಟಿರುವುದರಿಂದ ನದಿ ತೀರದಲ್ಲಿರುವ ಜನರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮುಂದಿನ 24 ಗಂಟೆಗಳಲ್ಲಿ ಪುಣೆಯಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದ್ದು ರೆಡ್ ಅಲರ್ಟ್​ ಘೋಷಣೆ ಮಾಡಿದೆ.

ಇದನ್ನೂ ಓದಿ:ಭಾರೀ ಮಳೆ.. ಪ್ರವಾಹ.. 24 ಗಂಟೆಯಲ್ಲಿ 8 ಮಂದಿ ದಾರುಣ ಸಾವು

publive-image

ಭೀಕರ ಮಳೆಗೆ ವಾಣಿಜ್ಯ ರಾಜಧಾನಿ ಅಸ್ತವ್ಯಸ್ಥ

ಇನ್ನು ಇತ್ತ ಮಹಾರಾಷ್ಟ್ರದ ರಾಜಧಾನಿ ಮುಂಬೈ ಪರಿಸ್ಥಿತಿ ಪುಣೆಗಿಂತಲೂ ಭೀಕರವಾಗಿದೆ. ರಸ್ತೆಗಳು ತುಂಬಿ ಹರಿಯುತ್ತಿರುವ ನದಿಯಂತೆ ಕಾಣುತ್ತಿವೆ. ಇನ್ನು ಭೀಕರವಾಗಿ ಬೀಳುತ್ತಿರುವ ಮಳೆಯಿಂದಾಗ ಹಲವು ಏರ್​ಲೈನ್ಸ್​​ನಗಳು ತಮ್ಮ ಸೇವೆಯಲ್ಲಿ ವಿಳಂಬವಾಗಲಿದೆ ಎಂದು ಘೋಷಿಸಿದ್ರೆ. ಮತ್ತಷ್ಟು ವಿಮಾನಗಳು ತಮ್ಮ ಮಾರ್ಗವನ್ನು ಬದಲಾಯಿಸಿದರೆ ಮತ್ತೊಂದಿಷ್ಟು ವಿಮಾನ ಕಂಪನಿಗಳು ಮುಂಬೈನತ್ತ ತಮ್ಮ ಸೇವೆಯನ್ನೇ ರದ್ದುಗೊಳಿಸಿವೆ.publive-image

ಇನ್ನು ಮುಂಬೈನಲ್ಲಿಯೂ ಕೂಡ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದ್ದು, ಶಾಲಾ ಕಾಲೇಜುಗಳಿಗೆ ರಜೆ ಮುಂದುವರಿದೆ, ರಸ್ತೆಗಳು ನೀರಿನಲ್ಲಿ ನಿಂತಿರುವ ಪರಿಣಾಮವಾಗಿ ಸಂಚಾರ ಅಸ್ತವ್ಯಸ್ಥವಾಗಿ ಜನರು ಪರದಾಡುತ್ತಿದ್ದಾರೆ. ಟ್ರಾಫಿಕ್​ ಜಾಮ್​ ಕ್ಲೀಯರ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪುಣೆ ಹಾಗೂ ಮುಂಬೈ ನಗರಗಳಿಗೆ ಮುಂದಿನ 24 ಗಂಟೆಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಿದೆ ಭಾರತೀಯ ಹವಾಮಾನ ಇಲಾಖೆ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲೂ ಭಾರೀ ಪ್ರಮಾಣದಲ್ಲಿ ಮಳೆ.. ಭಯಾನಕ ಪರಿಸ್ಥಿತಿ- ವಿಡಿಯೋ


">July 25, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment