/newsfirstlive-kannada/media/post_attachments/wp-content/uploads/2025/05/BNG_RAIN_3.jpg)
ಬೆಂಗಳೂರು: ಬೇಸಿಗೆ ಆದರೂ ಗಾರ್ಡನ್​ ಸಿಟಿಯಲ್ಲಿ ಮಳೆಗೇನೂ ಕಡಿಮೆ ಇಲ್ಲ. ಸಂಜೆ ಆಗುತ್ತಲೇ ವರುಣ ಎಂಟ್ರಿಕೊಡುತ್ತಿದ್ದು ನಗರವಾಸಿಗಳನ್ನು ಬೇಗ ಮನೆ ಸೇರುವಂತೆ ಮಾಡುತ್ತಿದ್ದಾನೆ. ನಿನ್ನೆಯೂ ಸಂಜೆ ಸಮಯಕ್ಕೆ ಬಂದಿದ್ದ ಮಳೆ ಇಂದು ಕೂಡ ಅದೇ ವೇಳೆಗೆ ಆರಂಭವಾಗಿದೆ.
/newsfirstlive-kannada/media/post_attachments/wp-content/uploads/2025/05/BNG_RAIN-2.jpg)
ಬೆಂಗಳೂರಿನ ಹಲವೆಡೆ ಮಳೆ ಶುರುವಾಗಿದ್ದು ಬೈಕ್ ಸವಾರರು, ವಾಹನ ಚಾಲಕರು ಕೊಂಚ ಸಮಸ್ಯೆ ಎದುರಿಸುವಂತೆ ಆಗಿದೆ. ಎಲ್ಲರೂ ಕೆಲಸದಿಂದ ಮನೆಗೆ ಹೋಗುವ ಸಮಯಕ್ಕೆ ಮಳೆ ಬರುತ್ತಿದ್ದರಿಂದ ನಗರದ ರಸ್ತೆಗಳಲ್ಲಿ ಟ್ರಾಫಿಕ್ ಹೆಚ್ಚಾಗಿ ಆಗುತ್ತಿದ್ದು ಗಂಟೆಗಟ್ಟಲೇ ನಿಲ್ಲುವಂತೆ ಆಗುತ್ತಿದೆ.
ಉದ್ಯಾನನಗರಿಯ ಹೆಬ್ಬಾಳ, ಸಂಜಯನಗರ, ಆರ್.ಟಿ ನಗರ, ಗಂಗಾನಗರ, ಮೇಖ್ರಿ ಸರ್ಕಲ್, ಶಿವಾನಂದ ಸರ್ಕಲ್, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಗಾಂಧಿನಗರ, ಕೆ.ಆರ್ ಸರ್ಕಲ್, ಕಾರ್ಪೋರೇಶನ್ ಹಾಗೂ ಮಾರ್ಕೆಟ್​ ಸೇರಿದಂತೆ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ.
ಇದನ್ನೂ ಓದಿ: ರೋಹಿತ್ ಪತ್ನಿಗೆ ಕೈಜೋಡಿಸಿ ನಮಸ್ಕರಿಸಿದ IPL ಸ್ಟಾರ್.. ಆಕಾಶ್ ಮಧ್ವಾಲ್ ಸರಳತೆಗೆ ಜನ ಸೆಲ್ಯೂಟ್..!
/newsfirstlive-kannada/media/post_attachments/wp-content/uploads/2025/05/BNG_RAIN_2.jpg)
ಬೆಂಗಳೂರಲ್ಲಿ ನಿನ್ನೆ ಸುರಿದ ಮಳೆಯಿಂದ ಕೆಲ ಅವಾಂತರಗಳು ನಡೆದಿವೆ. ಮಳೆಯಿಂದ ನಗರದ ಬೇರೆ ಬೇರೆ ಕಡೆ 23 ಮರಗಳು ಬಿದ್ದಿದ್ದು 52 ಮರಗಳ ರೆಂಬೆಗಳು ಧರೆಗುರಳಿವೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಮುಂಜಾಗ್ರತೆ ಕ್ರಮ ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಗಾಳಿ, ಮಳೆ ಜೋರಾದ ಸಂದರ್ಭದಲ್ಲಿ ರಸ್ತೆಗಳಲ್ಲಿ ಓಡಾಡಬೇಡಿ. ದೊಡ್ಡ ದೊಡ್ಡ ಮರದ ಕೆಳಗೆ ನಿಲ್ಲಬೇಡಿ. ಎಲ್ಲಿಗಾದರೂ ಪ್ರಯಾಣ ಮಾಡಬೇಕಿದ್ದರೆ ನಿಲ್ಲಿಸಿಬಿಡಿ. ಮನೆಗಳ ಕಿಟಕಿ, ಬಾಗಿಲು ಮುಚ್ಚಿಕೊಂಡು ಇರಬೇಕು. ವಿದ್ಯುತ್ ಉಪಕರಣಗಳನ್ನು​ ತಕ್ಷಣ ಹಾಫ್ ಮಾಡಿ ಇರಬೇಕು ಎಂದು ಸೂಚನೆ ನೀಡಿದ್ದಾರೆ. ಇನ್ನು ಮೇ 6ರವರೆಗೆ ಮಳೆ ಬರುತ್ತದೆ ಎಂದು ಭಾರತದ ಹವಾಮಾನ ಇಲಾಖೆ ಹೇಳಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us