ಕಾರವಾರದಲ್ಲಿ ಮತ್ತೆ ಗುಡ್ಡ ಕುಸಿತ.. ರಾಜ್ಯದಲ್ಲಿ ಮಳೆಯಿಂದ ಏನೆಲ್ಲ ಆಗುತ್ತಿದೆ..? Photos

author-image
Ganesh
Updated On
ಕಾರವಾರದಲ್ಲಿ ಮತ್ತೆ ಗುಡ್ಡ ಕುಸಿತ.. ರಾಜ್ಯದಲ್ಲಿ ಮಳೆಯಿಂದ ಏನೆಲ್ಲ ಆಗುತ್ತಿದೆ..? Photos
Advertisment
  • ಕೊಡಗು ಜಿಲ್ಲೆಯಾದ್ಯಂತ ಇವತ್ತು ಆರೆಂಜ್ ಅಲರ್ಟ್
  • ಯಾವೆಲ್ಲ ಭಾಗದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
  • ತುಂಗಾಭದ್ರ ಜಲಾಶಯ ಭರ್ತಿ, ಹೆಚ್ಚುವರಿ ನೀರು ಹೊರಕ್ಕೆ

ಕರುನಾಡಿನ ಇಳೆಗೆ ಹೊಸ ಜೀವ ಕಳೆ ನೀಡಿರೋ ಮುಂಗಾರು ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಕರಾವಳಿ, ಮಲೆನಾಡು ಭಾಗದಲ್ಲಿ ರೆಸ್ಟ್​ ತೆಗೆದುಕೊಳ್ಳದೇ ಸುರಿಯುತ್ತಿರೋ ಮಳೆ ಶಾಲೆಗಳಿಗೆ ಇಂದು ಬೀಗ ಜಡಿಸಿದೆ.. ಹಲೆವೆಡೆ ಅವಾಂತರಗಳನ್ನೂ ಸೃಷ್ಟಿಸಿದೆ.

ಕೊಡಗು ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್

ಕೊಡಗು ಜಿಲ್ಲೆಯಲ್ಲಿ ಮತ್ತೆ ಭಾರಿ ಗಾಳಿ ಮಳೆಯಾಗುತ್ತಿದ್ದು ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.. ಜಿಲ್ಲೆಯಲ್ಲಿ ಮತ್ತೆ ಮಳೆ ಹೆಚ್ಚಾಗಿದ್ದು ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ.. ಶಾಲಾ-ಕಾಲೇಜುಗಳು ಬಿಡುವ ವೇಳೆಯೇ ಭಾರಿ ಗಾಳಿ-ಮಳೆಯಾಗಿದ್ದು ವಿದ್ಯಾರ್ಥಿಗಳು ಮಳೆಗೆ ಪರದಾಡಿದ್ರು.. ಇನ್ನು ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಯಶ್ ತೋಳಿನಲ್ಲಿ ಮಗುವಾದ ಸಿಂಡ್ರೆಲಾ ರಾಧಿಕಾ ಪಂಡಿತ್..! Cute Photo

publive-image

ಕೊಡಗಿನ ಅಂಗನವಾಡಿ, ಶಾಲಾ‌‌ ಕಾಲೇಜುಗಳಿಗೆ ರಜೆ

ನಿನ್ನೆಯಿಂದ ಕೊಡಗು ಜಿಲ್ಲೆಯಾದ್ಯಂತ ಅಬ್ಬರಿಸಿ ಬೊಬ್ಬರಿಯುತ್ತಿರೋ ವರುಣಾ ಇಡೀ ಜಿಲ್ಲೆಯನ್ನೇ ಜಲ್ಲೆನ್ನುವಂತೆ ಮಾಡಿದ್ದಾನೆ.. ಬಿರುಸಿನ ಮಳೆ ಜೊತೆಗೆ‌ ರಭಸದಿಂದ ಗಾಳಿ ಬೀಸುತ್ತಿರುವ ಹಿನ್ನಲೆ ಕೊಡಗಿನ ಅಂಗನವಾಡಿ, ಶಾಲಾ‌‌ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಇಂದು ಕೊಡಗು ಡಿಸಿ ರಜೆ ಘೋಷಿಸಿದ್ದಾರೆ.

ಕಾಫಿನಾಡಿನ 5 ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆ ಅಬ್ಬರ ಜೋರಾಗಿದೆ. ಭಾರೀ ಮಳೆ ಹಿನ್ನೆಲೆ 5 ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎನ್.ಆರ್ ಪುರ, ಕೊಪ್ಪ, ಶೃಂಗೇರಿ, ಕಳಸ, ಮೂಡಿಗೆರೆ ತಾಲೂಕಿನಾದ್ಯಂತ ರಜೆ ನೀಡಲಾಗಿದೆ. ಚಿಕ್ಕಮಗಳೂರು ತಾಲೂಕಿನ ಕೆಲ ಹೋಬಳಿ ಶಾಲೆಗಳಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಜೆ ಘೋಷಣೆ ಮಾಡಿದ್ದಾರೆ.

publive-image

ಶಿವಮೊಗ್ಗದಲ್ಲೂ ಮಳೆ..

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿ, ಶಾಲಾ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಹೊಸನಗರ ತಹಸೀಲ್ದಾರ್ ಅವರು ಮುಂಜಾಗ್ರತಾ ಕ್ರಮವಾಗಿ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.

ಕಾರವಾರದಲ್ಲಿ ಗುಡ್ಡ ಕುಸಿತ

ಕಾರವಾರ ತಾಲೂಕಿನ ಕದ್ರಾ ಸಮೀಪದ ಬಾಳೆಮನಿ ಬಳಿ ಗುಡ್ಡ ಕುಸಿತವಾಗಿದೆ. ಬೆಳಗಿನ ಜಾವ ಕೊಡಸಳ್ಳಿ ಅಣೆಕಟ್ಟಿಗೆ ಸಾಗುವ ರಸ್ತೆಯಲ್ಲಿ ಗುಡ್ಡ ಕುಸಿತವಾಗಿದೆ. ಕದ್ರಾದಿಂದ ಕೊಡಸಳ್ಳಿ ಹೋಗುವ ಮಾರ್ಗದ ಸಂಪರ್ಕ ಕಡಿತವಾಗಿದೆ. ಸ್ಥಳಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಜೆಸಿಬಿ ಮೂಲಕ ಮಣ್ಣು ತೆಗೆಯುವ ಕಾರ್ಯ ಪ್ರಾರಂಭವಾಗಿದೆ.

ಇದನ್ನೂ ಓದಿ: ಒಳ ಮೀಸಲಾತಿ ಸಮೀಕ್ಷೆಯಲ್ಲಿ ಕಳ್ಳಾಟ ಆರೋಪ; ಸಂಪುಟ ಸಭೆಯಲ್ಲಿ ಸಚಿವ ಬೇಸರ

publive-image

ಮಲೆನಾಡು ಭಾಗದಲ್ಲಿ ಸುರಿದ ನಿರಂತರ ಮುಂಗಾರು ಮಳೆ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಾಭದ್ರ ಜಲಾಶಯ ಭರ್ತಿಯಾಗಿದೆ. ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ. 105 ಟಿಎಂಸಿ ಸಾಮಾರ್ಥ್ಯ ಜಲಾಶಯದಲ್ಲಿ 80 ಟಿಎಂಸಿ ನೀರು ಭರ್ತಿಯಾಗಿದೆ. 1633 ಅಡಿ ಜಲಾಶಯದಲ್ಲಿಯ 128 ಅಡಿ ನೀರು ಭರ್ತಿಯಾಗಿದೆ. ಸುಮಾರು 34 ಸಾವಿರ ಕ್ಯುಸೆಕ್ಸ್ ಒಳಹರಿವು ಹೆಚ್ಚಳವಾಗಿದ್ದು, 80 ಟಿಎಂಸಿ ನೀರು ಭರ್ತಿ ಹಿನ್ನೆಲೆ ಆರು ಗೇಟ್​ಗಳ ಮೂಲಕ ನದಿಗೆ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಒಟ್ಟು 10 ಸಾವಿರ ಕ್ಯುಸೆಕ್ಸ್ ನೀರು ಹೊರಕ್ಕೆ ಬಿಡಲಾಗುತ್ತಿದೆ.

publive-image

ಒಟ್ನಲ್ಲಿ ಧೋ ಅಂತ ಸುರಿಯುತ್ತಿರೋ ಮಳೆರಾಯ ಇಂದು ಶಾಲಾ-ಕಾಲೇಜುಗಳಿಗೆ ಬೀಗ ಬೀಳುವಂತೆ ಮಾಡಿದ್ದಾನೆ.. ವಾಡಿಕೆಗಿಂತ ಈ ಬಾರಿ ಹೆಚ್ಚಿನ ಮಳೆಯಾಗ್ತಿದ್ದು ಅನ್ನದಾತರ ಮೊಗದಲ್ಲಿ ಮಂದಗಹಾಸ ಮೂಡಿದೆ.. ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಇದನ್ನೂ ಓದಿ: ಗಿಲ್, ಜೈಸ್ವಾಲ್ ಆಟಕ್ಕೆ ಬೌಲರ್ಸ್​ ಸುಸ್ತು.. ತಂಡಕ್ಕೆ ಆತ್ಮವಿಶ್ವಾಸ ತುಂಬಿದ ಜಡೇಜಾ.. ಹೇಗಿತ್ತು ನಿನ್ನೆಯ ಆಟ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment