Advertisment

ಶಾಲಾ-ಕಾಲೇಜುಗಳಿಗೆ ರಜೆ.. ಧಾರಾಕಾರ ಮಳೆ, ಜಲಾಶಯಗಳಿಗೆ ಜೀವ ಕಳೆ, ಇನ್ನೂ 4 ದಿನ ವರುಣಾರ್ಭಟ..!

author-image
Bheemappa
Updated On
ಪ್ರವಾಸ ಪ್ರಿಯರೇ, ದಯವಿಟ್ಟು ಗಮನಿಸಿ: ಕೆಲವು ದಿನ ಈ ಕ್ಷೇತ್ರಗಳತ್ತ ಪ್ರವಾಸ ಹೋಗಬೇಡಿ; ತಪ್ಪದೇ ಸ್ಟೋರಿ ಓದಿ!
Advertisment
  • ಸುತ್ತಮುತ್ತ ವ್ಯಾಪಕ ಮಳೆ, ಹಾರಂಗಿ‌‌ ಜಲಾಶಯದ ಒಳಹರಿವು ಏರಿಕೆ
  • ಕಾವೇರಿಯಲ್ಲಿ ನೀರಿನ ಮಟ್ಟ ಏರಿಕೆ, ನದಿಪಾತ್ರದ ಜನರಿಗೆ ಎಚ್ಚರಿಕೆ
  • ರಾಜಾ, ರಾಣಿ, ರೋರರ್ ಮತ್ತು ರಾಕೆಟ್ ರಭಸ ಕಣ್ಣಿಗೆ ಹಬ್ಬ ನೀಡ್ತಿದೆ

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಅದರಲ್ಲೂ ಕರಾವಳಿ ಹಾಗೂ ಮಲೆನಾಡಿನಲ್ಲಿ ವರುಣನ ಆರ್ಭಟಕ್ಕೆ ತಡೆಯೇ ಇಲ್ಲ. ವಿಶ್ವವಿಖ್ಯಾತ ಜೋಗದಲ್ಲಿ ಜಲಪಾತದ ವೈಭವ ಕಣ್ಣಿಗೆ ಹಬ್ಬ ನೀಡ್ತಿದೆ. ಉತ್ತರ ಕನ್ನಡ ಮತ್ತು ಕೊಡಗಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Advertisment

ಉತ್ತರ ಕನ್ನಡದ 10 ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ

ಉಡುಪಿ, ದಕ್ಷಿಣ ಕನ್ನಡ ಬಳಿಕ ಈಗ ಉತ್ತರ ಕನ್ನಡದಲ್ಲೂ ಭಾರೀ ಮಳೆ ಆಗ್ತಿದೆ. ಜಿಲ್ಲೆಯಲ್ಲಿ ಮುಂದಿನ 4 ದಿನಗಳ ಕಾಲ ಮಳೆಯ ಪ್ರಮಾಣ ಹೆಚ್ಚಾಗಲಿದೆ ಅಂತ ಹವಾಮಾನ ಇಲಾಖೆ, ರೆಡ್​ ಅಲರ್ಟ್​ ನೀಡಿದೆ. ಈ ಕಾರಣಕ್ಕೆ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ, ಕಾರವಾರ, ಶಿರಸಿ, ಸಿದ್ದಾಪುರ, ಯಲ್ಲಾಪುರ, ದಾಂಡೇಲಿ, ಮತ್ತು ಜೋಯಿಡಾ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ಇವತ್ತು ರಜೆ ಘೋಷಿಸಲಾಗಿದೆ.

ಇದನ್ನೂ ಓದಿ:ಮಳೆ ನೀರಲ್ಲಿ ನಿಂತ ಇಡೀ ಗ್ರಾಮ.. ಭಾರತೀಯ ಕದಂಬ ನೌಕಾನೆಲೆ ಇದಕ್ಕೆ ಕಾರಣವಾಯ್ತಾ?

publive-image

ಕೊಡಗು ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ

ಕೊಡಗಿನಲ್ಲೂ ಮಳೆ ಅನಿಯಂತ್ರಿತವಾಗಿದೆ. ಬಿರುಗಾಳಿ ಸ್ನೇಹ ಬೆಸೆದ ವರುಣ, ಮಂಜಿನ ನಗರಿ ಮೇಲೆ ಉರಿದು ಬಿದ್ದಿದ್ದಾನೆ. ಹೀಗಾಗಿ ಕೊಡಗು ಜಿಲ್ಲೆಯ ಶಾಲೆಗಳಿಗೂ ಇವತ್ತು ರಜೆ ಘೋಷಣೆ ಆಗಿದೆ. ಜಿಲ್ಲಾಡಳಿತ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ..

Advertisment

ಕೊಡಗಿನ ಹಾರಂಗಿ‌‌ ಜಲಾಶಯಕ್ಕೆ ಒಳಹರಿವು ಹೆಚ್ಚಳ

ಕೊಡಗಿನಲ್ಲಿ ವ್ಯಾಪಕ ಮಳೆ ಆಗ್ತಿದ್ದು ಹಾರಂಗಿ‌‌ ಜಲಾಶಯಕ್ಕೆ ಭಾರೀ ಒಳ ಹರಿವು ಹೆಚ್ಚಿದೆ.. ಹೀಗಾಗಿ ನಾಲ್ಕು ಕ್ರೆಸ್ಟ್ ಗೇಟ್ ಮೂಲಕ 6 ಸಾವಿರದ 820 ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗ್ತಿದೆ.. ಇದರಿಂದ ಕಾವೇರಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ನದಿಪಾತ್ರದ ಜನತೆ ಎಚ್ಚರಿಕೆ ನೀಡಲಾಗಿದೆ..

ಧಾರಾಕಾರ ಮಳೆಗೆ ಮೈ ತುಂಬಿದ ವಿಶ್ವ ವಿಖ್ಯಾತ ಜೋಗ

ನಿರಂತರ ಮಳೆ ಮಲೆನಾಡಿನ ವೈಭವ ಹೆಚ್ಚಿಸಿದೆ.. ಜೋಗ್ ಫಾಲ್ಸ್​ ಅಂತು ಮೈತುಂಬಿ ಧುಮ್ಮುಕ್ತಿದೆ.. ರಾಜಾ, ರಾಣಿ, ರೋರರ್ ಮತ್ತು ರಾಕೆಟ್​ನ ರಭಸ ಕಣ್ಣಿಗೆ ಹಬ್ಬ ನೀಡ್ತಿದೆ.. ಮಳೆಯಲ್ಲೇ ಫಾಲ್ಸ್​ನ ವೈಭವ ಕಂಡು ಪ್ರವಾಸಿಗರು ಸಂಭ್ರಮಿಸ್ತಿದ್ದಾರೆ..

ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಿಂದ ಹೊರ ಹರಿವು ಏರಿಕೆ

ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆ ಆಗ್ತಿದ್ದು, ವಿಜಯಪುರದ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ. ಹೀಗಾಗಿ ಜಲಾಶಯದಿಂದ 3,500 ಕ್ಯೂಸೆಕ್​​ನಿಂದ 15,000 ಕ್ಯೂಸೆಕ್​ ನೀರು ಬಿಡುಗಡೆಗೆ ನಿರ್ಧರಿಸಲಾಗಿದೆ. ನದಿ ತೀರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

Advertisment

ಇದನ್ನೂ ಓದಿ: ವಿಶ್ವ ದರ್ಜೆ ಬೌಲರ್​​ಗೆ ಕಾಡಿತ್ತು ಕೊಹ್ಲಿಯಿಂದ ಕೀಳರಿಮೆ -ನಿವೃತ್ತಿ ವೇಳೆ ಸತ್ಯ ಬಿಚ್ಚಿಟ್ಟ ಲೆಜೆಂಡ್..!

publive-image

ತುಂಗಭದ್ರಾ ಡ್ಯಾಂ ಹಿನ್ನೀರಿನಲ್ಲಿ ಪ್ರವಾಸಿಗರ ಹುಚ್ಚಾಟ

ಇತ್ತ, ವಿಜಯನಗರದ ತುಂಗಭದ್ರಾ ಡ್ಯಾಮ್​ಗೂ ಜೀವಕಳೆ ಬಂದಿದೆ. ಆದ್ರೆ, ವೀಕೆಂಡ್ ಹಿನ್ನೆಲೆ ಡ್ಯಾಂ ಹಿನ್ನಿರಿಗೆ ಆಗಮಿಸ್ತಿರೊ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿದ್ದಾರೆ. ನೀರಿನ ಅಲೆಗಳ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಸಾಹಸಕ್ಕೆ ಬಿದ್ದು, ಜೀವದ ಜೊತೆ ಚೆಲ್ಲಾಟಕ್ಕಿಳಿದಿದ್ದಾರೆ.

ಇದನ್ನೂ ಓದಿ: ನೇಣು ಬಿಗಿದು ಸಾವಿಗೆ ಶರಣಾದ ನಿವೃತ್ತ ASI.. ಸಾವಿಗೆ 2 ಕಾರಣಗಳು..!

ಜುಲೈ 17ರ ವರೆಗೆ ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ನೂಚನೆ ಸಿಕ್ಕಿದೆ.. ಉತ್ತರ ಒಳನಾಡು ಪ್ರದೇಶಗಳಿಗೂ ಯೆಲ್ಲೋ ಅಲರ್ಟ್ ನೀಡಿರುವ ಹವಾಮಾನ ಇಲಾಖೆ, ದಕ್ಷಿಣ ಒಳನಾಡಿನ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಲ್ಲೂ ವರುಣಾರ್ಭಟದ ಎಚ್ಚರಿಕೆ ನೀಡಿದೆ..

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment