/newsfirstlive-kannada/media/post_attachments/wp-content/uploads/2025/06/rain8.jpg)
ಕಲಬುರಗಿ: ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರಿದಿದೆ. ಇನ್ನು 3 ದಿನಗಳ ಕಾಲ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದರ ನಡುವೆ ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳಿಗೆ ನೀರು ನುಗ್ಗಿ, ಗುಡ್ಡ ಕುಸಿತದಿಂದ ಹಾನಿಯಾಗಿದೆ.
ಇದನ್ನೂ ಓದಿ:ನಾಪತ್ತೆ ಆಗಿದ್ದ ಹರಿಯಾಣ ಮಾಡೆಲ್ ಪ್ರಕರಣಕ್ಕೆ ಟ್ವಿಸ್ಟ್.. ಮಾಜಿ ಸ್ನೇಹಿತನ ಮೇಲೆ ಗುಮಾನಿ..
ಇದರ ಮಧ್ಯೆ ಮಹಾ ಮಳೆಯಿಂದ ಮನೆ ಕುಸಿದು ಕಲ್ಲು- ಮಣ್ಣಿನಿಂದ ನಿರ್ಮಿಸಿದ್ದ ಹಳೆ ಮನೆ ಸಂಪೂರ್ಣ ತೇವಗೊಂಡ ಪರಿಣಾಮ ಮನೆ ಕುಸಿದು ಬಿದ್ದಿದೆ. ಈ ಘಟನೆ ಜೇವರ್ಗಿ ತಾಲೂಕಿನ ಗುಡೂರ. ಎಸ್.ಎ ಗ್ರಾಮದಲ್ಲಿ ನಡೆದಿದೆ. ಮನೆ ಕುಸಿತಗೊಂಡ ಪರಿಣಾಮ 10 ವರ್ಷದ ಬಾಲಕ ಚಂದ್ರು ಹವಾಲ್ದಾರ ಸ್ಥಳದಲ್ಲೇ ಜೀವಬಿಟ್ಟಿದ್ದಾನೆ. ಇನ್ನೂ, 60 ವರ್ಷದ ಅಜ್ಜಿ ಭಾಗಮ್ಮ ಎಂಬುವವರ ಸ್ಥಿತಿ ಗಂಭೀರವಾಗಿದೆ. ಆ ಕೂಡಲೇ ಅಜ್ಜಿಯನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ