/newsfirstlive-kannada/media/post_attachments/wp-content/uploads/2025/05/bng-rain12.jpg)
ಬೆಂಗಳೂರು: ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ನಿವಾಸಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಧಾರಾಕಾರವಾಗಿ ಸುರಿದ ಭಾರೀ ಮಳೆಯಿಂದ ಮನೆಗಳಿಗೆ ನೀರು ನುಗಿದ ಪರಿಣಾಮ ಸಾಕಷ್ಟು ಬಡಾವಣೆ ಜನರ ಜೀವನ ಅಸ್ತವ್ಯಸ್ತವಾಗಿತ್ತು.
ಇದನ್ನೂ ಓದಿ:ಇಡೀ ರಾತ್ರಿ ಸುರಿದ ಮಳೆಗೆ ಬೆಂಗಳೂರಲ್ಲಿ ಸಮಸ್ಯೆಗಳ ಸರಮಾಲೆ.. ಜನ ಪರದಾಟ
ಅದರಲ್ಲೂ ವಿಪರೀತವಾಗಿ ಮಳೆ ಬಂತು ಅಂದ್ರೆ ಸಾಕು ಸಾಯಿಲೇಔಟ್ ಪೂರ್ತಿ ಜಲಾವೃತ ಆಗಿಬಿಡುತ್ತೆ. ಮಳೆ ಬಂದರೆ ಸಾಯಿಲೇಔಟ್ ಜನರಿಗೆ ಜಲಬವಣೆ ತಪ್ಪಿದ್ದಲ್ಲ. ಹೀಗೆ ನಿನ್ನೆ ಇಡೀ ರಾತ್ರಿ ಸುರಿದ ಭಾರೀ ಮಳೆಯಿಂದ ಸಾಯಿ ಲೇಔಟ್ನಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದರಿಂದ ತಾಯಿ ಹಾಗೂ ಮಗು ಸಿಕ್ಕಿಹಾಕಿಕೊಂಡಿದ್ದರು.
ಆ ಕೂಡಲೇ ಸಿವಿಲ್ ಡಿಫೆನ್ಸ್ ಸಿಬ್ಬಂದಿ ದೌಡಾಯಿಸಿ ಬೋಟಿಂಗ್ ಮೂಲಕ ರಕ್ಷಣಾ ಕಾರ್ಯಚರಣೆ ನಡೆಸಿ ಐದು ತಿಂಗಳ ಮಗುವನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ಸ್ಥಳಕ್ಕೆ ಅಗ್ನಿಶಾಮಕ ದಳದ ಡಿಐಜಿ ರವಿ ಚನ್ನಣನವರ್ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಅಗ್ನಿ ಶಾಮಕದಳ, SDRF ಅಧಿಕಾರಿಗಳು, ಸಿಬ್ಬಂದಿಗಳು ಸಾಯಿ ಲೇಔಟ್ ಜನರಿಗೆ ಮೈಕ್ ಮೂಲಕ ಅನೌನ್ಸ್ ಮಾಡಿ ಧೈರ್ಯ ತುಂಬಿದ್ದಾರೆ. ಯಾರೂ ಆತಂಕ ಪಡಬೇಡಿ,
ಎಲ್ಲರನ್ನೂ ರಕ್ಷಣೆ ಮಾಡ್ತೀವಿ. ಊಟದ ವ್ಯವಸ್ಥೆ ಮಾಡ್ತೀವೆಂದು ಅನೌನ್ಸ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ