newsfirstkannada.com

VIDEO: ಕೊನೆಗೂ ಕೃಪೆ ತೋರಿದ ಮಳೆರಾಯ; ಇಂದಿನಿಂದ ಮೂರು ದಿನ ರಾಜ್ಯದ ಹಲವೆಡೆ ವರ್ಷಧಾರೆ; ಎಲ್ಲೆಲ್ಲಿ?

Share :

Published April 29, 2024 at 4:40pm

    ಇಂದು ಉತ್ತರ ಕರ್ನಾಟಕದ ಹಲವೆಡೆ ಗುಡುಗು ಸಹಿತ ಭರ್ಜರಿ ಮಳೆ

    ಬೇಸಿಗೆಯಲ್ಲಿ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ತಂಪೆರೆದ ಮಳೆರಾಯ

    ಮುಂಗಾರು ಪೂರ್ವ ಮಳೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಏನು?

ಅಬ್ಬಾ.. ದಿನದಿಂದ ದಿನಕ್ಕೆ ಬಿರು ಬಿಸಿಲಿನ ತಾಪಮಾನ ಹೆಚ್ಚುತ್ತಲೇ ಇದೆ. ಇಂತಹ ರಣ ಭೀಕರ ಬಿಸಿಲಿಗೆ ಜನ ರೋಸಿ ಹೋಗಿದ್ದಾರೆ. ಮನೆಯಿಂದ ಹೊರ ಬರಬೇಕಾದರೂ ಯೋಚನೆ ಮಾಡುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಇಂದು ಬೆಳಗಾವಿಯಲ್ಲಿ ವರುಣನ ಅಬ್ಬರ ಜೋರಾಗಿದೆ.

ಇದನ್ನೂ ಓದಿ: ಬಿಸಿಲಲ್ಲಿ ತಿರುಗಾಡೋ ಜನರೇ ಎಚ್ಚರ! ಚೂರು ಯಾಮಾರಿದ್ರೂ ಈ ರೋಗಗಳು ಗ್ಯಾರಂಟಿ!

ಹೌದು, ಬಿಸಿಲಿನಿಂದ ಕಂಗೆಟ್ಟಿದ್ದ ಬೆಳಗಾವಿ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಬೆಳಗಾವಿಯ ಹಲವು ಭಾಗಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆಯಾಗಿದೆ. ಇನ್ನು, ಬಿಸಿಲಿನ ಧಗೆಯಲ್ಲಿದ್ದ ಜನರಿಗೆ ಫುಲ್​​ ಸಂತೋಷ ಆಗಿದೆ. ಮಳೆಯಿಂದ ಫುಲ್​ ಖುಷ್​ ಆಗಿರೋ ಜನ ವಿಡಿಯೋ ಮಾಡುವ ಮೂಲಕ ಖುಷಿಪಟ್ಟಿದ್ದಾರೆ.

ಇನ್ನು, ಇಂದಿನಿಂದ ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಗಾವಿ, ಬಾಗಲಕೋಟೆ ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದ್ದು, ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕೊನೆಗೂ ಕೃಪೆ ತೋರಿದ ಮಳೆರಾಯ; ಇಂದಿನಿಂದ ಮೂರು ದಿನ ರಾಜ್ಯದ ಹಲವೆಡೆ ವರ್ಷಧಾರೆ; ಎಲ್ಲೆಲ್ಲಿ?

https://newsfirstlive.com/wp-content/uploads/2024/04/rain21.jpg

Load More