/newsfirstlive-kannada/media/post_attachments/wp-content/uploads/2025/06/heavy-rain7.jpg)
ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ಮಲಪ್ರಭಾ ನದಿ ಭೋರ್ಗರೆಯುತ್ತಿದೆ. ಮಲಪ್ರಭಾ ನದಿ ಪಾತ್ರದಲ್ಲಿರುವ ಆಂಜನೇಯ ಹಾಗೂ ಶಿವನ ಮಂದಿರ ಮುಳುಗಡೆಯಾಗಿದೆ.
ಬೆಳಗಾವಿಯ ಘಟಪ್ರಭಾ ನದಿ ಅಬ್ಬರಕ್ಕೆ ಗೋಕಾಕ್ ಜಲಪಾತ ಮೈದುಂಬಿಕೊಂಡಿದೆ. ಭಾರತದ ನಯಾಗರ ಫಾಲ್ಸ್ ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಫಾಲ್ಸ್ಗೆ ಮತ್ತೆ ಜೀವಕಳೆ ಬಂದಿದೆ. 170 ಅಡಿ ಮೇಲಿಂದ ಧುಮುಕುವ ಗೋಕಾಕ್ ಫಾಲ್ಸ್ನಲ್ಲಿ ಜಲವೈಭವ ಸೃಷ್ಟಿಯಾಗಿದೆ.
ಇತ್ತ ಬೆಳಗಾವಿ ಜಿಲ್ಲೆಯ ಖಾನಾಪುರ ಹೊರ ವಲಯದಲ್ಲಿ ತುಂಬಿ ಹರಿಯುತ್ತಿರುವ ಹಾಲಾತ್ರಿ ಹಳ್ಳದಲ್ಲಿ ಸವಾರರು ಹುಚ್ಚಾಟವಾಡ್ತಿದ್ದಾರೆ. ಖಾನಾಪುರ ಹೆಮ್ಮಡಗಾ ಅನಮೋಡ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ. ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದೆ. ಅಪಾಯವನ್ನ ಲೆಕ್ಕಿಸದೇ ಹಳ್ಳದ ಮೇಲೆ ಕೆಲವರು ಹುಚ್ಚಾಟ ಮೆರೆದಿದ್ದಾರೆ. ಇತ್ತ ಸೇತುವೆ ಜಲಾವೃತವಾಗಿದ್ದು, ಈಗಾಗಲೇ ಹೆಮ್ಮಡಗಾ, ಪಾಸ್ತೋಳಿ ಗವಾಳಿ ಸೇರಿ 15ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಟ್ ಆಗಿ ಪರ್ಯಾಯ ಮಾರ್ಗ ಇಲ್ಲದೇ ಹತ್ತು ಗ್ರಾಮದ ಜನರು ಪರದಾಡುವಂತಾಗಿದೆ.
ಇನ್ನೂ, ಬೆಳಗಾವಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಜಿಲ್ಲೆಯಾದ್ಯಂತ 384ರಷ್ಟು ಹೆಚ್ಚಿನ ಮಳೆಯಾಗಿದೆ. ವಾಡಿಕೆ ಮಳೆ 4.09ಮಿಲಿ ಮೀಟರ್ನಷ್ಟು, ಆದ್ರೆ 23.07 ಮಿಲಿ ಮೀಟರ್ನಷ್ಟು ಮಳೆ ಸುರಿದಿದೆ. ಬೆಳಗಾವಿ ತಾಲೂಕಿನಲ್ಲೂ 705ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆ ಆಗಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಇದನ್ನೂ ಓದಿ: ನ್ಯೂಯಾರ್ಕ್ ಮೇಯರ್ ಎಲೆಕ್ಷನ್ನಲ್ಲಿ ಭಾರತ ಮೂಲದ ಮಮ್ದಾನಿಗೆ ಗೆಲುವು.. ಕಂಗನಾ ಆಕ್ರೋಶ, ಹೇಳಿದ್ದೇನು..?
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ಅಬ್ಬರ ಮುಂದುವರೆದ ಹಿನ್ನಲ್ಲೇ ಗಡಿ ಭಾಗದಲ್ಲಿ ಹಲವು ಅವಾಂತರ ಸೃಷ್ಟಿಯಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ನರಸಿಂಹವಾಡಿ ದತ್ತ ಮಂದಿರಕ್ಕೆ ನದಿ ನೀರು ನುಗ್ಗಿದೆ. ನರಸಿಂಹವಾಡಿಯಲ್ಲಿ ಪಂಚಗಂಗಾ ಹಾಗೂ ಕೃಷ್ಣಾ ನದಿ ಸಂಗಮವಾಗುತ್ತೆ ಮಳೆಯಿಂದ ನೀರಿನ ಮಟ್ಟ ಏರಿಕೆಯಾಗಿ ದೇಗುಲಕ್ಕೆ ನುಗ್ಗಿದೆ. ಸದ್ಯ ಭಕ್ತರು ನೀರಿನ ಮಧ್ಯೆಯೇ ಪೂಜಾ ಕೈಂಕರ್ಯಗಳಲ್ಲಿ ತೊಡಗಿದ್ದಾರೆ. ಮಾತ್ರವಲ್ಲದೇ ದತ್ತ ಮಂದಿರದ ದಕ್ಷಿಣ ದ್ವಾರದ ಬಳಿ ಭಕ್ತರು ಪುಣ್ಯಸ್ನಾನ ಮಾಡ್ತಿರುವ ದೃಶ್ಯ ಕಂಡು ಬಂತು.
ಹಾವೇರಿ ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿರುವ ವರದಾ ನದಿಯಲ್ಲಿ ಇಬ್ಬರು ಯುವಕರು ಸಿಲುಕಿ ಪರದಾಡಿದ್ದಾರೆ. ಮಲೆನಾಡಿನಲ್ಲಿ ನಿರಂತರ ಮಳೆ ಹಿನ್ನಲೆ ಹಾವೇರಿ ಜಿಲ್ಲೆಯಲ್ಲಿ ವರದಾ ನದಿ ಉಕ್ಕಿ ಹರಿಯುತ್ತಿದೆ. ಹಾವೇರಿಯಿಂದ ಕಳಸೂರು ಗ್ರಾಮಕ್ಕೆ ಸಂಪರ್ಕ ಕಲ್ಲಿಸುವ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ವರದಾ ಉಕ್ಕಿ ಹರಿಯುತ್ತಿದೆ. ವರದಾ ನದಿ ನೀರಲ್ಲೇ ಯುವರು ದಾಟಲು ಹೋಗಿ ನಡು ನೀರಲ್ಲಿ ಸಿಲುಕಿ ಕೆಲ ಕಾಲ ಪರದಾಡಿದ್ದಾರೆ. ಸ್ವಲ್ಪ ಯಾಮಾರಿದ್ರೂ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದವರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ:ಅಂತಿಂಥ ಹೆಣ್ಣು ಇವಳಲ್ಲ..! ರೈಲು ಹಳಿ ಮೇಲೆ ಕಾರು ಓಡಿಸಿ ದಿಗಿಲು ಹುಟ್ಟಿಸಿದ ಲೇಡಿ -VIDEO
ಕೊಡಗು ಜಿಲ್ಲೆಯಾದ್ಯಂತ ಮಳೆಯಬ್ಬರ ಜೋರಾಗಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಮೂರ್ನಾಡು ರಸ್ತೆಗಳು ಜಲಾವೃತಗೊಂಡಿದೆ. ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಬೊಳಿಬಾಣೆ ಎಂಬಲ್ಲಿ ರಸ್ತೆ ಜಲಾವೃತವಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಇತ್ತ ನಾಪೋಕ್ಲು-ಪಾರಣೆ ರಸ್ತೆಯ ಮೇಲೂ ನೀರು ಹರಿದು ನಾಪೋಕ್ಲು ಸಮೀಪದ ಕೈಕಾಡು ಬಳಿ ಸಂಪರ್ಕ ಬಂದ್ ಆಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದ ಸೇತುವೆ ಮುಳುಗಿದೆ. ಸೇತುವೆ ಮುಳುಗಡೆಯಿಂದ ಎರಡು ಗ್ರಾಮದ ಸಂಪರ್ಕ ಕಡಿತಗೊಂಡು ಜನರು ಪರದಾಡ್ತಿದ್ದಾರೆ. ಮೂಡಿಗೆರೆ ತಾಲೂಕಿನ ಹೆಸಗೋಡುವಿನಲ್ಲಿ ಹೇಮಾವತಿ ಮೈದುಂಬಿ ಹರಿಯುತ್ತಿದ್ದು ತೋಟಗಳಿಗೆ ನುಗ್ಗಿ ಜಲಾವೃತಗೊಂಡಿದೆ. ಇತ್ತ ಮೂಡಿಗೆರೆ ತಾಲೂಕಿನ ಕೆಸವಳಲು ಕೂಡಿಗೆ ಸಂಗಮ ಕೂಡ ಭರ್ತಿಯಾಗಿದ್ದು,ಜನರಲ್ಲಿ ಆತಂಕ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ