/newsfirstlive-kannada/media/post_attachments/wp-content/uploads/2024/04/rain6.jpg)
ಶಿವಮೊಗ್ಗ: ಬಿರು ಬಿಸಿಲಿನ ಬೇಗೆಗೆ ಹೈರಾಣಾಗಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಇಂದು ಜಿಲ್ಲೆಯ ವಿವಿಧೆಡೆ ಗಾಳಿ ಸಮೇತ ಭಾರಿ ಮಳೆಯಾಗಿದೆ.
ಇದನ್ನೂ ಓದಿ:ಬಹುಭಾಷಾ ನಟ ಸಯ್ಯಾಜಿ ಶಿಂಧೆ ದಿಢೀರ್ ಆಸ್ಪತ್ರೆಗೆ ದಾಖಲು; ಆರೋಗ್ಯಕ್ಕೆ ಏನಾಯ್ತು?
ಏಪ್ರಿಲ್ 12ರಿಂದ 14ರವರಗೆ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ದಾವಣಗೆರೆ, ಶಿವಮೊಗ್ಗದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಇನ್ನು ಈ ಬಗ್ಗೆ ಡಿಪಿ ಸತೀಶ್ ಎಂಬುವವರು ಮಳೆಯ ಬಗ್ಗೆ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Raining in Shimoga city. Finally!! pic.twitter.com/FK9SK8HMjE
— DP SATISH (@dp_satish)
Raining in Shimoga city. Finally!! pic.twitter.com/FK9SK8HMjE
— DP SATISH (@dp_satish) April 13, 2024
">April 13, 2024
ಶಿವಮೊಗ್ಗದ ಸುತ್ತಮುತ್ತ ಭಾಗದಲ್ಲಿ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ವರ್ಷಧಾರೆ ಸುರಿದಿದೆ. ಬಿರು ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರು ಸುಮಾರು ಎರಡು ಗಂಟೆಗಳ ಕಾಲ ಸುರಿದ ವರುಣನ ಅಬ್ಬರದಿಂದ ಸಂತಸಗೊಂಡಿದ್ದಾರೆ. ಹೀಗಾಗಿ ವರ್ಷದ ಮೊದಲ ಮಳೆಯ ಆಗಮನಕ್ಕೆ ಜನರು ಫುಲ್ ಖುಷ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ