ಎಲ್ಲೆಲ್ಲೂ ಮಳೆ.. ರುದ್ರಪ್ರಯಾಗ, ಕೇದಾರನಾಥದಲ್ಲಿ ಅನಾಹುತ.. ಯಾವೆಲ್ಲ ರಾಜ್ಯದಲ್ಲಿ ಮಳೆ ಜೋರಾಗಿದೆ..?

author-image
Ganesh
Updated On
ಎಲ್ಲೆಲ್ಲೂ ಮಳೆ.. ರುದ್ರಪ್ರಯಾಗ, ಕೇದಾರನಾಥದಲ್ಲಿ ಅನಾಹುತ.. ಯಾವೆಲ್ಲ ರಾಜ್ಯದಲ್ಲಿ ಮಳೆ ಜೋರಾಗಿದೆ..?
Advertisment
  • ಭಾರೀ ಮಳೆಯಿಂದಾಗಿ ಕೇದಾರನಾಥ ಧಾಮ ಯಾತ್ರೆ ಸ್ಥಗಿತ
  • ಮಂದಾಕಿನಿ ನದಿಯಲ್ಲಿ ಕಾಲು ಜಾರಿ ಬಿದ್ದವರ ರಕ್ಷಣೆ
  • ಕೇರಳದಲ್ಲಿ ಮಳೆ ಅಬ್ಬರ.. ಕೆಲವೆಡೆ ರಡ್​ ಅಲರ್ಟ್​ ಘೋಷಣೆ

ಕೇವಲ ಕರ್ನಾಟಕ ಮಾತ್ರವಲ್ಲ ದೇಶದ ಹಲವು ರಾಜ್ಯಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಉತ್ತರ ಭಾರತದಲ್ಲಿ ಮಳೆರಾಯ ಬಲಿಗಳನ್ನ ಪಡೆಯೋದಕ್ಕೆ ಶುರು ಮಾಡಿದ್ದಾನೆ. ಇತ್ತ ದಕ್ಷಿಣ ಭಾರತದಲ್ಲೂ ಧೋ ಅಂತ ಸುರಿತಿರೋ ವರುಣ ಜನರನ್ನ ಹಿಂಡಿ ಹಿಪ್ಪೆ ಮಾಡ್ತಿದ್ದಾನೆ.

ಉತ್ತರಾಖಂಡದಲ್ಲಿ ಮಳೆಯಿಂದ ನಡೆದ ದರಂತಗಳು ಜನರನ್ನ ಬೆಚ್ಚಿಬೀಳಿಸಿದೆ. ಕೇದಾರನಾಥದಲ್ಲಿ ಧಾರಾಕಾರ ಮಳೆಯಿಂದಾಗಿ ಗಡೇರಾ ಹೊಳೆ ಉಕ್ಕಿ ಹರಿಯುತ್ತಿದೆ.. ಭಾರೀ ಮಳೆಯಿಂದ ಹಲವೆಡೆ ಭೂ ಕುಸಿತ ಸಂಭವಿಸಿದೆ. ಕೇದಾರನಾಥ ಯಾತ್ರೆಗೆಂದು ತೆಳಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದು, ಅವ್ರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಉಕ್ಕಿ ಹರಿಯುತ್ತಿರುವ ಹೊಳೆಯತ್ತ ಜನರು ಪ್ರವೇಶಿಸದಂತೆ ನಿಗಾ ವಹಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಪ್ರಯಾಣಿಕರೇ ಎಚ್ಚರ.. ಇಂದಿನಿಂದ ನಗರದಾದ್ಯಂತ ಬೈಕ್ ಟ್ಯಾಕ್ಸಿಗಳು ಬ್ಯಾನ್!

ಮಳೆಯಿಂದಾಗಿ, ಇಡೀ ಮಾರ್ಗದಲ್ಲಿ ಅನೇಕ ಸ್ಥಳಗಳು ಭೂಕುಸಿತ ಪೀಡಿತ ಪ್ರದೇಶಗಳಾಗಿವೆ. ಭಾರೀ ಅವಶೇಷಗಳು ಮತ್ತು ದೊಡ್ಡ ಕಲ್ಲುಗಳು ಹರಿದು ಬಂದು ಪಾದಚಾರಿ ಮಾರ್ಗದ ಅಡ್ಡಲಾಗಿ ಬಿದ್ದಿದೆ. ರಸ್ತೆ ಅಡಚಣೆಯಿಂದಾಗಿ ಪ್ರಯಾಣಿಕರು ಮುಂದೆ ಸಾಗಲು ಸಾಧ್ಯವಾಗುತ್ತಿಲ್ಲ. ಯಾತ್ರೆಗೆಂದು ಬರ್ತಿರೋ ಜನರನ್ನ ಅಧಿಕಾರಿಗಳು ಹಿಂದೆ ಕಳುಹಿಸುತ್ತಿದ್ದಾರೆ.

ಭಾರೀ ಮಳೆಯಿಂದಾಗಿ ಕೇದಾರನಾಥ ಧಾಮ ಯಾತ್ರೆ ಸ್ಥಗಿತ

ಭಾರೀ ಮಳೆ ಮತ್ತು ಭಕ್ತರ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು, ಕೇದಾರನಾಥ ಧಾಮಕ್ಕೆ ಪ್ರಯಾಣವನ್ನ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ. ಜಂಗಲ್‌ಚಟ್ಟಿ ಪ್ರದೇಶದಲ್ಲಿ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಪೊಲೀಸ್ ರಕ್ಷಣೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಕೇದಾರನಾಥ ಧಾಮಕ್ಕೆ ಪ್ರಯಾಣ ಬೆಳೆಸುವ ಭಕ್ತರು ತಾವು ಇರುವ ಸ್ಥಳದಲ್ಲಿ ಸುರಕ್ಷಿತವಾಗಿ ಉಳಿಯುವಂತೆ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಇಂದು ಆದಾಯಕ್ಕಿಂತ ಖರ್ಚು ಹೆಚ್ಚು.. ಈ ರಾಶಿಯವರಿಗೆ ಅದೃಷ್ಟದ ಯೋಗ; ಇಲ್ಲಿದೆ ಇಂದಿನ ಭವಿಷ್ಯ!

publive-image

ಮಂದಾಕಿನಿ ನದಿಯಲ್ಲಿ ಕಾಲು ಜಾರಿ ಬಿದ್ದವರ ರಕ್ಷಣೆ

ರುದ್ರಪ್ರಯಾಗದ ಮಂದಾಕಿನಿ ನದಿಯಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾಗಿದೆ. ಪರಿಣಾಮ ಹಲವರು ನೀರಲ್ಲಿ ಸಿಲುಕಿದ್ರು. ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ರಕ್ಷಣಾ ತಂಡ.. ಪ್ರಯಾಣಿಕರ ಜೀವ ಉಳಿಸಿದೆ.

ಕೇರಳದಲ್ಲಿ ಮಳೆ ಅಬ್ಬರ.. ಕೆಲವೆಡೆ ರಡ್​ ಅಲರ್ಟ್​ ಘೋಷಣೆ

ಭಾರೀ ಮಳೆಯಿಂದಾಗಿ ಕೇರಳದ ವಯನಾಡು, ಮಲಪ್ಪುರಂ, ತಿರುವನಂತಪುರಂ, ಕಾಸರಗೋಡು, ಭಾಗಗಳಲ್ಲಿ ವ್ಯಾಪಕ ಅವಾಂತರ ಉಂಟಾಗಿದೆ, ಕೆಲವೆಡೆ ಮರಗಳು ಬುಡಮೇಲಾಗಿವೆ.. ಗುಡ್ಡಗಾಡು ಪ್ರದೇಶಗಳಲ್ಲಿ ಮಣ್ಣು ಕುಸಿದಿದೆ.. ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿರೋ ಹಿನ್ನೆಲೆ ಇಂದು ಕಣ್ಣೂರು ಜಿಲ್ಲೆಯ ಅಂಗನವಾಡಿ.. ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಇದನ್ನೂ ಓದಿ: ಭಾರೀ ಮಳೆ; ರಾಜ್ಯದ ಈ ಜಿಲ್ಲೆಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ

ಸಿಡಿಲು ಬಡಿದು ಉತ್ತರ ಪ್ರದೇಶದ ಪ್ರಯಾಗ್​ರಾಜ್​.. ಸಂಭಲ್​.. ಗೋರಖ್​ಪುರ್.. ಬಿದ್ನೌರ್​.. ಜಿಲ್ಲೆಯಲ್ಲಿ ಸುಮಾರು 11 ಮಂದಿ ಸಾವನ್ನಪ್ಪಿರೋ ಬಗ್ಗೆ ಅಧಿಕಾರಿಗಳು ಮಾಡಿದ್ದಾರೆ. ಒಟ್ಟಾರೆ ದೇಶದ ಎಲ್ಲಾ ದಿಕ್ಕಿನಲ್ಲೂ ಮಳೆರಾಯನ ಹವಾ ಜೋರಾಗಿದೆ. ಮನೆಯಿಂದ ಹೊರಕ್ಕೆ ಕಾಲಿಡುವ ಮುನ್ನ ಮೈಯಲ್ಲಾ ಕಣ್ಣಾಗಿದ್ದು, ಜೀವ ಉಳಿಸಿಕೊಳ್ಳಬೇಕಿದೆ.

ಇದನ್ನೂ ಓದಿ: UPI ಬಳಕೆದಾರರಿಗೆ ಗುಡ್​ನ್ಯೂಸ್​; ಇಂದಿನಿಂದ ಫೋನ್​ ಪೇ, ಗೂಗಲ್​ ಪೇ, ಪೇಟಿಎಂ ಮತ್ತಷ್ಟು ಸ್ಪೀಡ್​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment