Advertisment

ಮಳೆ ಆರ್ಭಟ; ಮತ್ತೆ ಗುಡ್ಡ ಕುಸಿಯೋ ಆತಂಕ.. ಕೃಷ್ಣೆಗೆ ಭಾಗಿನ ಅರ್ಪಿಸಲು ಹೋಗಿ ಯುವಕ ನೀರು ಪಾಲು

author-image
Bheemappa
Updated On
ಮಳೆ ಆರ್ಭಟ; ಮತ್ತೆ ಗುಡ್ಡ ಕುಸಿಯೋ ಆತಂಕ.. ಕೃಷ್ಣೆಗೆ ಭಾಗಿನ ಅರ್ಪಿಸಲು ಹೋಗಿ ಯುವಕ ನೀರು ಪಾಲು
Advertisment
  • ಈ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಂಚಾರ ನಿಷೇಧ
  • ಸ್ಥಳೀಯರ ಸಹಾಯದಿಂದ ಬೋಟ್​ನಿಂದ ಮೃತದೇಹ ಹೊರಕ್ಕೆ
  • ಆರಾಧ್ಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದ ಭಕ್ತರಿಂದ ಗಂಗೆ ಪೂಜೆ

ಮಳೆ ಬಂದ್ರೆ ಇಳೆಗೆ ಜೀವ ಕಳೆ. ಅದೇ ಮಳೆ ರೌದ್ರನರ್ತನ ಮೆರೆದ್ರೆ ಸಾವು-ನೋವಿನ ಸೆಲೆ. ರಾಜ್ಯದ ಅಷ್ಟ ದಿಕ್ಕುಗಳಲ್ಲೂ ಅಬ್ಬಿರಿಸಿ ಬೊಬ್ಬರಿಯುತ್ತಿರೋ ವರುಣ ಸಾವು ನೋವಿನ ಸಂಕಷ್ಟಗಳ ಸರಮಾಲೆಗೆ ಸಾಕ್ಷಿಯಾಗಿದ್ದಾನೆ.

Advertisment

ಕೃಷ್ಣಾ ನದಿಗೆ ಭಾಗಿನ ಅರ್ಪಿಸಲು ಹೋದ ಯುವಕ ಸಾವು

ಕೃಷ್ಣಾ ನದಿಯ ಹಿನ್ನೀರಿನಲ್ಲಿ ಭಾಗಿನ ಅರ್ಪಿಸಲು ಹೋದ ಯುವಕ ನೀರುಪಾಲಾಗಿರೋ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ. ಈಜಲು ಬರದ ಹಿನ್ನಲೆ 28 ವರ್ಷದ ಯುವಕ ರೋಹಣ ಪಾಟೀಲ ಆಯತಪ್ಪಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಸ್ಥಳೀಯರ ಸಹಾಯದಿಂದ ಬೋಟ್ ಮೂಲಕ ರೋಹಣ ಪಾಟೀಲ ಮೃತದೇಹ ಹೊರ ತೆಗೆಯಲಾಗಿದೆ.

ಇದನ್ನೂ ಓದಿ:ಸಿನಿಮಾ ಹೀರೋ, ಹೀರೋಯಿನ್ ಥರಾ ನೀವು ಕಾಣಬೇಕಾ? ಅದು IV ಬ್ಯೂಟಿ ಥೆರಪಿಯಿಂದ ಮಾತ್ರ ಸಾಧ್ಯ!

publive-image

ಸ್ಥಳದಲ್ಲೇ ಮೊಕ್ಕಾಂ ಹೂಡಿದ ಕೇರಳ ಶಾಸಕ

ಭೀಕರ ಗುಡ್ಡಕುಸಿತಕ್ಕೆ ಸಾಕ್ಷಿಯಾದ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರೂರಿನಲ್ಲಿ ಮತ್ತೆ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಈ ಬಗ್ಗೆ ಜಿಎಸ್ಐ ತಜ್ಞರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ಭಾಗದಲ್ಲಿ ಸಂಚಾರ ನಿಷೇಧ ಹೇರಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ. ಇನ್ನೂ ಗುಡ್ಡಕುಸಿತದ ಪ್ರದೇಶದಲ್ಲೇ ಕೇರಳ ಮಂಜೇಶ್ವರ ಶಾಸಕ ಅಶ್ರಫ್ ಮೊಕ್ಕಾಂ ಹೂಡಿದ್ದು, ಅರ್ಜುನ್ ಹಾಗೂ ಉಳಿದ ಮೂವರು ಬದುಕಿ ಬರಬೇಕು ಅಂತ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

Advertisment

ಮಲೆನಾಡ ಮಹಾಮಳೆಗೆ ಮೈದುಂಬಿದ ತುಂಗಾಭದ್ರಾ ಜಲಾಶಯ

ಮಲೆನಾಡಿನಲ್ಲಿ ಮಳೆ ಅಬ್ಬರಿಸುತ್ತಿರುವ ಹಿನ್ನೆಲೆ ತುಂಗಾಭದ್ರ ಜಲಾಶಯ ಮೈದುಂಬಿದೆ. ಈ ಹಿನ್ನೆಲೆ ಜಲಾಶಯದ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರು ಜಲಾಶಯದತ್ತ ಮುಖ ಮಾಡುತ್ತಿದ್ದಾರೆ. ಇನ್ನೊಂದಡೆ ಕೊಪ್ಪಳದ ಆರಾಧ್ಯದೇವಿ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದ ಭಕ್ತರು ಗಂಗೆ ಪೂಜೆ ಮೂಲಕ ಪುಣ್ಯ ಸ್ನಾನ ಮಾಡಿ ದೇವಿ ದರ್ಶನ ಪಡೆಯುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಾಭದ್ರ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಈಗಾಗಲೇ 3 ಗೇಟ್ ಗಳನ್ನು ಓಪನ್ ಮಾಡುವ ಮೂಲಕ ನದಿಗೆ ನೀರು ಹರಿಸಲಾಗುತ್ತಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಡಂಗೂರ ಸಾರಿ ಎಚ್ಚರಿಕೆ ನೀಡ್ತಿದೆ.

ಇದನ್ನೂ ಓದಿ: ಗಂಭೀರ್​ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದ ಕನ್ನಡಿಗ ಯಾರು.. ಆ ಯುವ ಪ್ಲೇಯರ್ ಈಗ ಏನಾಗಿದ್ದಾರೆ?

publive-image

ಕಾಫಿನಾಡಿನ ಗಿರಿ ಪ್ರದೇಶಕ್ಕೆ ಪ್ರವಾಸಿಗರ ನಿಷೇಧ ಮುಂದುವರಿಕೆ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಾಗ್ತಿರೋ ಹಿನ್ನೆಲೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಮತ್ತೆ ಒಂದು ವಾರ ಪ್ರವಾಸಿ ವಾಹನಗಳನ್ನ ನಿಷೇಧಿಸಿಲಾಗಿದೆ.. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಮತ್ತು ದತ್ತಪೀಠ ರಸ್ತೆಯಲ್ಲಿ ಹಲವು ಕಡೆ ಭೂ ಕುಸಿತ ಉಂಟಾಗಿದ್ದು ಲೋಕೋಪಯೋಗಿ ಇಲಾಖೆ ಇನ್ನೂ ಒಂದು ವಾರ ರಸ್ತೆ ದುರಸ್ಥಿಗೆ ಕಾಲಾವಕಾಶ ಕೇಳಿರುವ ಹಿನ್ನೆಲೆಯಲ್ಲಿ ಮುಂದಿನ ವಾರದವರೆಗೂ ವಾಹನಗಳನ್ನ ನಿಷೇಧಿಸಿ ಜಿಲ್ಲಾಧಿಕಾರಿಗಳು ಮೀನಾ ನಾಗರಾಜ್ ಆದೇಶ ಮಾಡಿದ್ದಾರೆ.

Advertisment

ಹೊಸರಿತ್ತಿಯ ರಾಘವೇಂದ್ರ ಮಠಕ್ಕೆ ಜಲದಿಗ್ಬಂಧನ

ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗ್ತಿರೋ ಹಿನ್ನೆಲೆ ಹಾವೇರಿ ಹೊಸರಿತ್ತಿಯ ರಾಘವೇಂದ್ರ ಮಠಕ್ಕೆ ಜಲದಿಗ್ಬಂಧನವಾಗಿದೆ. ವರದಾ ನದಿಯಲ್ಲಿ ‌ನೀರಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆ ರಾಘವೇಂದ್ರ ಮಠ ಜಲಾವೃತವಾಗಿದೆ. ಈ ಹಿನ್ನೆಲೆ ಮಠಕ್ಕೆ ಹಾನಿಯಾಗದೇ ಇರಲಿ ಅಂತ ಈ ಬಾರಿಯಾದ್ರು ತಡೆಗೋಡೆ ಮಠಕ್ಕೆ ನಿರ್ಮಿಸಿ ಅಂತ ಸ್ಥಳೀಯರು ಸರ್ಕಾರಕ್ಕೆ ಮನವಿಮಾಡಿದ್ದಾರೆ. ರಾಜ್ಯದ ಹಲವೆಡೆ ಅಬ್ಬರಿಸಿ ಬೊಬ್ಬರಿಯುತ್ತಿರೋ ವರುಣಾ ಹಳ್ಳ-ಕೊಳ್ಳಗಳನ್ನ ಮೈದುಂಬಿಸಿ ರೈತರ ಮೊಗದಲ್ಲಿ ಮಂದಹಾಸ ತುಂಬಿದ್ದಾನೆ. ಅನಾಹುತ, ಅಪಘಾತಗಳಿಗೆ ಕಾರಣವಾಗದಂತೆ ಮಳೆರಾಯ ಎಲ್ಲೆಮೀರದೇ ಇರಲಿ ಅಂತ ರಾಜ್ಯದ ಜನತೆ ಪ್ರಾರ್ಥಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment