/newsfirstlive-kannada/media/post_attachments/wp-content/uploads/2025/07/RIN-IN-kARNATAKA.jpg)
ಕರ್ನಾಟಕ ರಾಜ್ಯದಲ್ಲಿ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ತಿಂಗಳಾಂತ್ಯದವರೆಗೆ ಮುಂದುವರೆಯಲಿದೆ. ಮುಂದಿನ ಒಂದು ವಾರ ರಾಜ್ಯದಲ್ಲಿ ಮಳೆ ಮುಂದುವರೆಯಲಿದ್ದು, ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ರೆಡ್, ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ನೀಡಲಾಗಿದೆ. ರಾಜ್ಯದಲ್ಲಿ ಮಳೆ ಎಲ್ಲಿವರೆಗೆ ಮುಂದುರೆಯಲಿದೆ? ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಿಂದ ನಲುಗಲಿದೆ ಅನ್ನೋ ಡೀಟೇಲ್ಸ್ ಇಲ್ಲಿದೆ.
ಕರ್ನಾಟಕ ರಾಜ್ಯದಾದ್ಯಂತ ಮುಂದಿನ ಒಂದು ವಾರ ಮಳೆ!
ಕರ್ನಾಟಕದಲ್ಲಿ ಮುಂದಿನ ಒಂದು ವಾರ ಮಳೆ ಮುಂದುವರೆಯಲಿದ್ದು, ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಲೆನಾಡು ಜಿಲ್ಲೆಗಳಲ್ಲಿ ರೆಡ್, ಆರೆಂಜ್ ಅಲರ್ಟ್ ನೀಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಮಂಗಳೂರು ತಾಲೂಕು ಹಾಗೂ ಉಡುಪಿ ಜಿಲ್ಲೆಯಲ್ಲಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: 8 ತಿಂಗಳ ಮಗಳ ಜೊತೆ 3 ದೇಶ ಸುತ್ತಿದ ಸ್ಯಾಂಡಲ್ವುಡ್ ದಂಪತಿ.. ಯಾರು ಈ ಕ್ಯೂಟ್ ಬೇಬಿ?
ಬೈಕ್ ಮೇಲೆ ಉರುಳಿಬಿದ್ದ ಆಲದ ಮರ, ಪತಿ-ಪತ್ನಿ ಸಾ*ವು
ಮಳೆ ಕಾರಣಕ್ಕೆ ಮರ ಬಿದ್ದು, ಪತಿ, ಪತ್ನಿ ಸಾವನ್ನಪ್ಪಿರೋ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಲಿಂಗಸಗೂರು ತಾಲೂಕಿನ ನಾಗಲಾಪುರದ ನಿವಾಸಿಗಲಾದ ಪತಿ ರಮೇಶ್, ಪತ್ನಿ ಮಂಜುಳಾ ಮುದಗಲ್ ಪಟ್ಟಣದಿಂದ ನಾಗಲಾಪುರ ಗ್ರಾಮಕ್ಕೆ ಹೊರಟಿದ್ದರು. ಮೂರ್ನಾಲ್ಕು ದಿನದಿಂದ ಸುರಿದ ಜಿಟಿ ಜಿಟಿ ಮಳೆಗೆ ಆಲದ ಮರ ಬೇರಿನ ಬುಡ ತೊಯ್ದು ಸವಾರರ ಮೇಲೆ ಬಿದ್ದಿದೆ. ಪತಿ, ಪತ್ನಿ ಸ್ಥಳದಲ್ಲೇ ಸಾ*ವನ್ನಪ್ಪಿದ್ರೆ.. 3 ವರ್ಷದ ಸೌಜನ್ಯ ಎಂಬ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಘಟನಾ ಸ್ಥಳಕ್ಕೆ ಮುದಗಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಬ್ಬರ ಮಳೆ.. ಮಂಗಳೂರು ತಾಲೂಕಿನಾದ್ಯಂತ ರಜೆ!
ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳೂರು ತಾಲೂಕಿನ ಶಾಲೆ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿಯಿಂದ ಪದವಿಪೂರ್ವ ಕಾಲೇಜು ವರೆಗೆ ರಜೆ ಘೋಷಿಸಿ ಮಂಗಳೂರು ತಹಶೀಲ್ದಾರ್ ಆದೇಶ ಆದೇಶ ಹೊರಡಿಸಿದ್ದಾರೆ.
ಉಡುಪಿ ಜಿಲ್ಲೆಗೆ ರೆಡ್ ಅಲರ್ಟ್.. ಶಾಲಾ-ಕಾಲೇಜು ರಜೆ!
ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳು, ಪದವಿಪೂರ್ವ, ಐಟಿಐ ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಸ್ವರೂಪಾ.ಟಿ.ಕೆ ಆದೇಶಿಸಿದ್ದಾರೆ. ಪದವಿ ತರಗತಿಗಳು ಎಂದಿನಂತೆ ನಡೆಯಲಿವೆ ಎಂದು ಆದೇಶದಲ್ಲಿದೆ.
ಇದನ್ನೂ ಓದಿ: ಕರೆ ಸ್ವೀಕರಿಸೋ ಮುನ್ನ ಎಚ್ಚರ.. ಬರೋಬ್ಬರಿ 9 ಗಂಟೆ ಮಹಿಳೆ ಜತೆ ವಿಡಿಯೋ ಕಾಲ್ನಲ್ಲಿದ್ದ ವಂಚಕ.. ಮಾಡಿದ್ದೇನು?
ಕಾಡಿನಿಂದ ತೋಟಕ್ಕೆ ಉರುಳಿ ಬಂದ ಬಂಡೆಗಳು, ಜಲಾವೃತ!
ಕೆರೆ ಕೋಡಿ ಒಡೆದು ಕಾಫಿತೋಟ ಬಹುತೇಕ ಜಲಾವೃತವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಹೊನ್ನೇಕೊಪ್ಪ ಗ್ರಾಮದಲ್ಲಿ ನಡೆದಿದೆ. ತೋಟದ ಪಕ್ಕದಲ್ಲಿರೋ ಕಾಡಿನಿಂದ ದೊಡ್ಡ-ದೊಡ್ಡ ಕಲ್ಲಿನ ರಾಶಿ ಬಂದು ತೋಟದೊಳಗೆ ಬಿದ್ದಿದೆ. ತೋಟದ ಸ್ಥಿತಿ ಕಂಡು ಮಾಲೀಕ ಕೂಡ ಕಂಗಾಲಾಗಿದ್ದಾರೆ.
ಡ್ಯಾಂ ಗೇಟ್ ಮುಂದೆ ದೋಣಿಯಲ್ಲಿ ಓಡಾಟ.. ಹುಚ್ಚಾಟ!
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಹೊರಭಾಗದಲ್ಲಿರುವ ಡ್ಯಾಂನಿಂದ ಅಪಾರ ಪ್ರಮಾಣದ ನೀರನ್ನ ಕ್ರಸ್ಟ್ ಗೇಟ್ಗಳ ಮೂಲ ಹೊರಬಿಡಲಾಗುತ್ತಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರಾ ಡ್ಯಾಂನ ಗೇಟ್ ಮುಂದೆಯೇ ಮೀನುಗಾರರ ಹುಚ್ಚಾಟವಾಡ್ತಿದ್ದಾರೆ. ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಜನ ಡ್ಯಾಂ ನೀರಿಗೆ ಇಳಿಯದ ಹಾಗೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕಿದೆ.
ಇದನ್ನೂ ಓದಿ: ಕೊನೇ ಕ್ಷಣದಲ್ಲಿ ವಕೀಲರ ಬದಲಾವಣೆ.. ನಟ ದರ್ಶನ್ಗೆ ಢವಢವ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ