/newsfirstlive-kannada/media/post_attachments/wp-content/uploads/2025/05/Bangalore-rain-Car.jpg)
ಬೆಂಗಳೂರಲ್ಲಿ ಕಳೆದ 2 ದಿನಗಳಿಂದ ವರುಣನ ಅಬ್ಬರ ಮುಂದುವರಿದಿದೆ. ಬೆಳಗ್ಗೆಯಿಂದ 2-3 ಗಂಟೆಗಳ ಕಾಲ ಬ್ರೇಕ್ ಕೊಟ್ಟಿದ್ದ ಮಳೆರಾಯ ಮತ್ತೆ ಎಂಟ್ರಿ ಕೊಟ್ಟಿದ್ದಾನೆ. ನಗರದ ಹಲವು ಕಡೆ ಗಾಳಿ ಸಹಿತ ಭರ್ಜರಿ ಮಳೆಯಾಗಿದೆ.
ವಿಧಾನಸೌಧ, ವಸಂತನಗರ, ಶಿವಾಜಿನಗರ, ವಿಲ್ಸನ್ ಗಾರ್ಡನ್, ಶಾಂತಿನಗರ, ಲಾಲ್‌ಭಾಗ್, ರಿಚ್ಮಂಡ್ ಟೌನ್, ಲಕ್ಕಸಂದ್ರ, ಜೆ.ಸಿ ರಸ್ತೆ ಸುತ್ತಾಮುತ್ತಾ ಮತ್ತೆ ಧಾರಾಕಾರ ಮಳೆಯಾಗಿದೆ. ಸಂಜೆ ವೇಳೆಗೆ ಮಳೆರಾಯನ ಅಬ್ಬರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಕೆಂಗೇರಿಯ ಗುರುಕುಲ ಅನಾಥಾಶ್ರಮಕ್ಕೆ ಜಲದಿಗ್ಭಂಧನವೇ ಸೃಷ್ಟಿಯಾಗಿದೆ. ಮಕ್ಕಳು ಮಲಗಿದ್ದ ವೇಳೆ ಭಾರೀ ಮಳೆಯಾಗಿದ್ದು, ಗುರುಕುಲ ಆಶ್ರಮಕ್ಕೆ ನೀರು ನುಗಿದೆ. ತಕ್ಷಣವೇ ಆಶ್ರಮದ ಸಿಬ್ಬಂದಿ ಸ್ಥಳೀಯ ಕಟ್ಟಡಕ್ಕೆ ಸುಮಾರು 40ಕ್ಕೂ ಹೆಚ್ಚು ಮಕ್ಕಳನ್ನು ಸ್ಥಳಾಂತರ ಮಾಡಿದ್ದಾರೆ.
ಇದನ್ನೂ ಓದಿ: ಕುಡಿಯಲು ನೀರಿಲ್ಲ, ಗ್ಯಾಸ್ ಹಚ್ಚಲು ಭಯ, ಹಾವುಗಳ ಹಾವಳಿ; ಸಾಯಿ ಲೇಔಟ್ ಸ್ಥಿತಿ ಯಾರಿಗೂ ಬೇಡ!
ಗಿರಿನಗರದ 80 ಅಡಿ ರಸ್ತೆಯಲ್ಲಿ ಮರವೊಂದು ಧರೆಗುರುಳಿದೆ. ಕಾರಿನ ಮೇಲೆ ಮರ ಬಿದ್ದು ಕಾರು ಸಂಪೂರ್ಣ ಜಖಂ ಆಗಿದೆ. ಕಾರು ಇಳಿದು ಹೋದ ಅರ್ಧ ಗಂಟೆಯಲ್ಲೇ ಮರ ನೆಲಕ್ಕುರುಳಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ.
ಇಂದಿರಾನಗರದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದೆ. ನಿನ್ನೆಯಿಂದಲೂ ರಸ್ತೆ ಮೇಲೆ ಮಳೆ ನೀರು ನಿಂತಿದೆ. ಸರಿಯಾದ ಕಾಮಗಾರಿ ನಡೆಸದ ಹಿನ್ನೆಲೆ ಈ ಪರಿಸ್ಥಿತಿ ಎದುರಾಗಿದೆ ಎಂದು ಬಿಬಿಎಂಪಿ, BWSSB ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ