ವಯನಾಡಿನಲ್ಲಿ ಮತ್ತೆ ಮಹಾಮಳೆ ಭಯ.. ಕೇರಳಕ್ಕೆ ಭಾರತೀಯ ಹವಾಮಾನ ಇಲಾಖೆ ಭಾರೀ ಎಚ್ಚರಿಕೆ!

author-image
admin
Updated On
ವಯನಾಡಿನಲ್ಲಿ ಮತ್ತೆ ಮಹಾಮಳೆ ಭಯ.. ಕೇರಳಕ್ಕೆ ಭಾರತೀಯ ಹವಾಮಾನ ಇಲಾಖೆ ಭಾರೀ ಎಚ್ಚರಿಕೆ!
Advertisment
  • ಭೂಕುಸಿತದ ಬಳಿಕ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಕೇರಳ!
  • ಕರಾಳ ದಿನ ಕಣ್ ಮುಂದೆ ಇರುವಾಗಲೇ ಮತ್ತೆ ಮಳೆಯ ಭಯ
  • ಭಾರತೀಯ ಹವಾಮಾನ ಇಲಾಖೆಯು (IMD) ಎಚ್ಚರಿಕೆ ಏನು?

ತಿರುವನಂತಪುರಂ: ವಯನಾಡು ಭೂಕುಸಿತಕ್ಕೆ ನಲುಗಿದ ಕೇರಳ ಇನ್ನೂ ಘೋರ ದುರಂತದಿಂದ ಹೊರ ಬಂದಿಲ್ಲ. ಗುಡ್ಡ ಕುಸಿತದಿಂದ 400ಕ್ಕೂ ಹೆಚ್ಚು ಸಾವನ್ನಪ್ಪಿದ್ದರೆ ಲೆಕ್ಕ ಸಿಗದ ಒಂದಷ್ಟು ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ. ಮುಂಡಕೈ, ಚೂರ್‌ಲಮಲಾ ಜನ ಈಗಲೂ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಇದನ್ನೂ ಓದಿ: ವಯನಾಡು ಭೂಕುಸಿತದಲ್ಲಿ ಕಂದಮ್ಮ ಅನಾಥ.. ಮಗುವನ್ನು ದತ್ತು ಸ್ವೀಕರಿಸಲು ಮುಂದಾದ ದಂಪತಿ

ಕಳೆದ ಎರಡು ದಿನದ ಹಿಂದಷ್ಟೇ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ವಯನಾಡಿನ ಭೂಕುಸಿತದ ಜಾಗಕ್ಕೆ ಭೇಟಿ ನೀಡಿದ್ದರು. ನೈಸರ್ಗಿಕ ವಿಕೋಪದ ಬಗ್ಗೆ ಮಾಹಿತಿ ಪಡೆದ ಮೋದಿ ನಿರಾಶ್ರಿತರ ಕಷ್ಟಗಳನ್ನು ಆಲಿಸಿದ್ದಾರೆ. ಭೂಕುಸಿತದ ಬಳಿಕ ಕೇರಳ ಈಗಷ್ಟೇ ಚೇತರಿಸಿಕೊಳ್ಳುವ ಚಿಂತನೆಯಲ್ಲಿದೆ.

publive-image

ವಯನಾಡಿನಲ್ಲಿ ಮತ್ತೆ ಮಳೆ ಅಲರ್ಟ್‌!
ಗುಡ್ಡ ಕುಸಿತದ ಕರಾಳ ದಿನ ಕಣ್ ಮುಂದೆ ಇರುವಾಗಲೇ ಕೇರಳಕ್ಕೆ ಮತ್ತೊಂದು ಎಚ್ಚರಿಕೆಯ ಸಂದೇಶ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆಯು (IMD) ಆಗಸ್ಟ್ 15ರವರೆಗೂ ಕೇರಳದ ವಯನಾಡಿನಲ್ಲಿ ಮತ್ತೆ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ವಯನಾಡು ದುರಂತದ ಬಗ್ಗೆ ಗಿಣಿ ಎಚ್ಚರಿಕೆ.. ಮಾಲೀಕನ ಕುಟುಂಬ, ಅವರ ಸ್ನೇಹಿತರ ಬಚಾವ್ ಮಾಡಿದ ಕಿಂಗಿಣಿ

IMD ಮಾಹಿತಿಯ ಪ್ರಕಾರ ಕೇರಳದ ಹಲವೆಡೆ 24 ಗಂಟೆಯಲ್ಲಿ 7 ರಿಂದ 11 ಸೆಂಟಿ ಮೀಟರ್ ಮಳೆಯಾಗುವ ಸಾಧ್ಯತೆ ಇದೆ. ಪ್ರಮುಖವಾಗಿ ಇನ್ನೆರಡು ದಿನಗಳ ಕಾಲ ಇಡುಕ್ಕಿ, ಮಲಪ್ಪುರಂ, ತಿರುವನಂತಪುರಂ, ಕೊಲ್ಲಂ, ಪಟ್ಟನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ಪಾಲಕ್ಕಾಡ್, ಕೋಯಿಕ್ಕೋಡ್ ಮತ್ತು ವಯನಾಡ್‌ನಲ್ಲಿ ಭಾರೀ ಮಳೆಯಾಗಲಿದೆ. ಜೊತೆಗೆ ಗುಡುಗು, ಸಿಡಿಲು ಹಾಗೂ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಎಚ್ಚರಿಕೆ ನೀಡಲಾಗಿದೆ.


">August 12, 2024

ಕೇರಳದ ವಯನಾಡು ಸೇರಿದಂತೆ ಹಲವು ಜಿಲ್ಲೆಯ ಜನ ಹೀಗಷ್ಟೇ ಒಂದು ಜಲಾಘಾತವನ್ನು ಎದುರಿಸಿದ್ದಾರೆ. ಭೀಕರ ಅಪಾಯದಿಂದ ಪಾರಾಗಿರುವ ಮಧ್ಯೆ ಹಲವು ಜಿಲ್ಲೆಯಲ್ಲಿ ಇನ್ನೂ 2-3 ದಿನಗಳ ಕಾಲ ಧಾರಾಕಾರ ಮಳೆಯಾಗುವ ಸೂಚನೆಯನ್ನು ನೀಡಿರೋದು ಆತಂಕ ಹೆಚ್ಚಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment