/newsfirstlive-kannada/media/post_attachments/wp-content/uploads/2024/05/BNG-RAIN.jpg)
ಬೆಂಗಳೂರು: ರಾತ್ರಿಯಾದರೆ ಸಾಕು ವರುಣರಾಯ ಆಗಮಿಸುತ್ತಿದ್ದು ಎಲ್ಲರನ್ನು ಬೇಗನೇ ಮನೆ ಸೇರುವಂತೆ ಮಾಡುತ್ತಿದ್ದಾನೆ. ಏಪ್ರಿಲ್ 13, 14 ಅದರೆ ನಿನ್ನೆ, ಮೊನ್ನೆ ಸಿಲಿಕಾನ್​ ಸಿಟಿ ಸೇರಿದಂತೆ ರಾಜ್ಯದ ಕೆಲವೆಡೆ ಭರ್ಜರಿ ಮಳೆಯಾಗಿದೆ. ಗುಡುಗು, ಸಿಡಿಲಿಗೆ 7 ಜನರು ಉಸಿರು ಚೆಲ್ಲಿದ್ದಾರೆ. ಇದರ ಬೆನ್ನಲ್ಲೇ ಮುಂದಿನ 3 ಗಂಟೆಗಳಲ್ಲಿ ಈ ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯ ಹವಾಮಾನ ಇಲಾಖೆಯ ಪ್ರಕಾರ ಮುಂದಿನ ಮೂರು ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಸಾರ್ವಜನಿಕರು ಆದಷ್ಟು ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕು. ಭಾರೀ ಮಳೆಯಾಗುವ ರಾಜ್ಯದ ಜಿಲ್ಲೆಗಳು ಎಂದರೆ ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಬೀದರ್, ರಾಯಚೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆಯಾಗಲಿದೆ.
ಇದನ್ನೂ ಓದಿ: ಇದು ಸಿನಿಮಾ ಅಲ್ಲ, ಸತ್ಯ.. ವಿಶ್ವದ ದೈತ್ಯ ಯಕುಮಾಮಾ ಅನಕೊಂಡ
ಇನ್ನು ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಮಳೆಯ ಅಲರ್ಟ್ ಇದೆ. ವರುಣ ಆರ್ಭಟ ಮಾಡುವ ಸಂದರ್ಭ ಇರುವುದರಿಂದ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ ಆಗಲಿದೆ. ಹೀಗಾಗಿ ಮೊದಲೇ ವಿದ್ಯುತ್​​ಗೆ ಸಂಬಂಧಿಸಿದ ಕೆಲಸಗಳು ಇದ್ದರೇ ಮುಗಿಸಿಕೊಳ್ಳುವುದು ಉತ್ತಮ.
ಉದ್ಯಾನ ನಗರಿಯಲ್ಲಿ ರಾತ್ರಿ ಗಾಳಿ ಸಮೇತ ಜೋರು ಮಳೆ ಸುರಿದಿದೆ. ಇದರಿಂದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ನೀರು ನಿಂತಿದ್ದರಿಂದ ಸವಾರರು, ಚಾಲಕರು ಸಮಸ್ಯೆ ಅನುಭವಿಸುವಂತೆ ಆಗಿತ್ತು. ಮಳೆಯ ಕಾರಣದಿಂದ ಟ್ರಾಫಿಕ್ ಕೂಡ ಕಂಡು ಬಂದಿದೆ. ಇನ್ನೇನು ಮನೆ ಸೇರಿಕೊಳ್ಳಬೇಕು ಎನ್ನುವಷ್ಟರಲ್ಲಿ ಮಳೆ ಬಂದಿದ್ದರಿಂದ ಸಾರ್ವಜನಿಕರು ಕೊಂಚ ತೊಂದರೆ ಅನುಭವಿಸಿದರು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ