/newsfirstlive-kannada/media/post_attachments/wp-content/uploads/2025/06/hubli-Dharwad-heavy-rain.jpg)
ಹುಬ್ಬಳ್ಳಿ: ನಿನ್ನೆ ರಾತ್ರಿ ಸುರಿದ ಮಹಾಮಳೆಗೆ ಧಾರವಾಡ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ಥವಾಗಿದೆ. ಹುಬ್ಬಳ್ಳಿಯ ಬೀರಬಂದ ಓಣಿಯಲ್ಲಿ ಮಳೆ ನೀರಿಗೆ ಚರಂಡಿಯಲ್ಲಿ ವ್ಯಕ್ತಿಯೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ. ರಸ್ತೆ ದಾಟುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ರಾತ್ರಿಯಿಡೀ ಶೋಧ ಕಾರ್ಯಾಚರಣೆ ನಡೆಸಿದ್ರು ಪತ್ತೆಯಾಗಿಲ್ಲ.
ಕಳೆದ ರಾತ್ರಿ 3 ಗಂಟೆವರೆಗೆ ಮಹಾಮಳೆ ಸುರಿದಿದ್ದು, ಬೆಳಗ್ಗೆಯೂ ಮಳೆಯಿಂದ ಬಿಡುವ ಸಿಕ್ಕಿಲ್ಲ. ಭಾರಿ ಮಳೆಗೆ ಹುಬ್ಬಳ್ಳಿಯ ಉಣಕಲ್ ಸಂಪೂರ್ಣ ಜಲಾವೃತವಾಗಿದೆ. ಮಳೆ ಆರ್ಭಟಕ್ಕೆ ಯಮನೂರ ಗ್ರಾಮ ಕೆರೆಯಂತಾಗಿದೆ. ಮೊಣಕಾಲುದ್ದ ಮಳೆ ನೀರಿನಿಂದ ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳ ಜನರಲ್ಲಿ ಆತಂಕ ಸೃಷ್ಟಿಸಿದ್ದು, ಮಳೆ ನೀರು ಮನೆಗಳಿಗೆ ನುಗ್ಗಿದೆ ಜನರು ಕಂಗಾಲಾಗಿದ್ದಾರೆ.
/newsfirstlive-kannada/media/post_attachments/wp-content/uploads/2025/06/Dharwad-Heavy-Rain.jpg)
ನಿನ್ನೆ ರಾತ್ರಿ ಧಾರಾಕಾರ ಮಳೆಯಾಗಿದ್ದು, ರಸ್ತೆಯ ಪಕ್ಕದಲ್ಲಿರುವ ಚರಂಡಿ ನೀರಿನಲ್ಲಿ ವ್ಯಕ್ತಿಯೊಬ್ಬ ಆಯತಪ್ಪಿ ಜಾರಿ ಬಿದ್ದು ಕೊಚ್ಚಿ ಕೊಂಡು ಹೋಗಿದ್ದಾನೆ. ನೇಕಾರ ನಗರದ ಹುಸೇನ ಸಾಬ ಕಳಸದ ಕೊಚ್ಚಿ ಹೋದ ವ್ಯಕ್ತಿ.
ಇದನ್ನೂ ಓದಿ: ಇಂದಿನಿಂದ 5 ದಿನಗಳ ಕಾಲ ಭಾರೀ ಮಳೆ; ರಾಜ್ಯದ ಯಾವೆಲ್ಲಾ ಜಿಲ್ಲೆಗಳಿಗೆ ಅಲರ್ಟ್ ಘೋಷಣೆ
ಕಸಬಾಪೇಟ ಪೊಲೀಸ್ ಠಾಣೆ ವ್ಯಾಪ್ತಿ ಬೆಳಗಲಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಪಾಲಿಕೆ ಕಮಿಷನರ್ ರುದ್ರೇಶ ಘಾಳಿ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
/newsfirstlive-kannada/media/post_attachments/wp-content/uploads/2025/06/Dharwad-Heavy-Rain-2.jpg)
ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಧಾರವಾಡ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಇಂದು ಕೂಡ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us