/newsfirstlive-kannada/media/post_attachments/wp-content/uploads/2025/05/Bangalore-rain-1.jpg)
ಬೆಂಗಳೂರಲ್ಲಿ ನಿನ್ನೆ ಒಂದೇ ದಿನ 132 ಮಿಲಿ ಮೀಟರ್ನಷ್ಟು ಮಳೆಯಾಗಿದೆ. ಗುಡುಗು, ಸಿಡಿಲಿನ ಆರ್ಭಟಕ್ಕೆ ನಗರದ ಹಲವೆಡೆ ಸಾಕಷ್ಟು ಅವಾಂತರಗಳು ಸಂಭವಿಸಿದೆ. ನಿನ್ನೆಯ ಮಳೆಗೆ ಬೆಂಗಳೂರು ಮುಳುಗಡೆ ಆಗಿರುವಾಗಲೇ ಮತ್ತೆ ಇಂದೂ ಕೂಡ ಮಳೆ ಆರಂಭವಾಗಿದೆ.
ನಗರದ ವಸಂತ ನಗರ, ವಿಧಾನ ಸೌಧ, ಶಿವಾಜಿನಗರ, ರಾಜಭವನ ಸೇರಿದಂತೆ ಹಲವೆಡೆ ಇಂದು ಮಳೆಯಾಗಿದೆ. ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಬಿಟಿಎಂ ಲೇಔಟ್, ಚಿಕ್ಕಪೇಟೆ, ಟೌನ್ಹಾಲ್, ರಾಜಭವನ, ಕಬ್ಬನ್ಪಾರ್ಕ್ ಸೇರಿ ಹಲವು ರಸ್ತೆಗಳಲ್ಲಿ ವಾಹನ ಸವಾರರ ಪರದಾಟ ಕಂಡು ಬಂದಿದೆ.
ಟಿವಿ ಟವರ್ ರಸ್ತೆ ಸಂಪೂರ್ಣ ಜಲಾವೃತ ಆಗಿದ್ದು, ಬೈಕ್ ಸವಾರರು ರಸ್ತೆಯಲ್ಲೇ ಬೀಳುತ್ತಿದ್ದಾರೆ. ಜಯಮಹಲ್ನ ಟಿ.ವಿ. ಟವರ್ ಬಳಿ ಕೆರೆಯಂತಾದ ರಸ್ತೆಯಲ್ಲಿ ಸುಮಾರು 2-3 ಅಡಿಯಷ್ಟು ನೀರು ರಸ್ತೆಯಲ್ಲಿ ನಿಂತಿದೆ. ಮಳೆ ನೀರಿನಲ್ಲೇ ವಾಹನ ಸವಾರರು ಸಂಚಾರಿಸುತ್ತಿದ್ದ ಬೈಕ್ ಸವಾರನೊಬ್ಬ ಸ್ವಲ್ಪದರಲ್ಲೇ ದೊಡ್ಡ ಅಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಮಳೆಯ ಆರ್ಭಟ; ಮೃತ ಮಹಿಳೆಗೆ ₹5 ಲಕ್ಷ ಪರಿಹಾರ ಘೋಷಣೆ
ಮಹದೇವಪುರ ವಲಯದ ಸುಮಾರು 10 ಪ್ರದೇಶ ಜಲಾವೃತ ಆಗಿದೆ. ಪ್ರಮುಖವಾಗಿ ಸಾಯಿ ಲೇಔಟ್ ಪ್ರದೇಶದಲ್ಲಿ 6 ಟ್ರ್ಯಾಕ್ಟರ್, 2 ಜೆ.ಸಿ.ಬಿ, 35 ಸಿಬ್ಬಂದಿ, 3 ಅಗ್ನಿಶಾಮಕ ವಾಹನ, SDRF ತಂಡದಿಂದ 2 ಬೋಟ್ ಮೂಲಕ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.
ಸಿಲ್ಕ್ ಬೋರ್ಡ್‌ನಲ್ಲಿ ಸಹ ನೀರು ತೆರವುಗೊಳಿಸಲು ಹರಸಾಹಸ ಪಡಲಾಗುತ್ತಿದೆ. ಅಗ್ನಿಶಾಮಕ ದಳದಿಂದ ಹೆಚ್ಚುವರಿ ಮೋಟಾರ್‌ಗಳ ಮೂಲಕ ನೀರು ತೆರವು ಮಾಡುವ ಕೆಲಸ ಮಾಡಲಾಗುತ್ತಿದೆ.
ಸುಬ್ಬಯ್ಯ ಸರ್ಕಲ್ನಲ್ಲೂ ಮಳೆರಾಯನ ಅವಾಂತರ ಜೋರಾಗಿದೆ. ಮಳೆಗೆ ಎರಡು ಕಟ್ಟಡಗಳ ಬೇಸ್ಮೆಂಟ್ ಜಲಾವೃತ ಆಗಿದೆ. ಮಳೆಯಿಂದ ಕಟ್ಟಡದ ಬೇಸ್ಮೆಂಟ್ ಮುಳುಗಡೆಯಾಗಿದ್ದು, ಎರಡು ಬಿಲ್ಡಿಂಗ್ನಲ್ಲಿ ಐದು ಕಾರು, 4 ಬೈಕ್ ಸಿಲುಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ