/newsfirstlive-kannada/media/post_attachments/wp-content/uploads/2024/10/BNG_RAIN_5.jpg)
ಬೆಂಗಳೂರು: ಪೂರ್ವ ಮುಂಗಾರು ಮಳೆಯ ಆರ್ಭಟಕ್ಕೆ ಇಡೀ ಸಿಲಿಕಾನ್ ಸಿಟಿ ಕೂಲ್ ಕೂಲ್ ಆಗಿದೆ. ಇದರ ಜೊತೆಗೆ ಸಮಸ್ಯೆಗಳ ಸರಮಾಲೆಗಳು ಕೂಡ ತೆರೆದುಕೊಂಡಿವೆ. ಇದು ಈಗಿರುವಾಗಲೇ ಮುಂದಿನ ಕೆಲವು ಗಂಟೆಗಳಲ್ಲಿ ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ಅಷ್ಟೇ ಅಲ್ಲ, ರಾಜ್ಯದ ಜಿಲ್ಲೆಗಳಲ್ಲೂ ಪೂರ್ವ ಮುಂಗಾರು ಮತ್ತಷ್ಟು ಚುರುಕುಗೊಂಡಿದೆ. ಎರಡು ದಿನಗಳಿಂದ ಸುರಿದ ಮಳೆ ನಗರದಲ್ಲಿ ತಂಪೆರೆದಿದೆ ಎಂದು ಸಂತಸ ಪಟ್ಟರೂ ಮತ್ತೊಂದೆಡೆ ಅನಾಹುತಗಳನ್ನು ಸೃಷ್ಟಿ ಮಾಡಿದೆ. ನಗರದ ಸಾಯಿ ಲೇಔಟ್ ಅಂತೂ ಸಂಪೂರ್ಣವಾಗಿ ಮಳೆ ನೀರಿನಲ್ಲೇ ನಿಂತುಕೊಂಡಿದೆ. ಇದರಿಂದ ಸ್ಥಳೀಯರು ಹೊರ ಬರಲು ಆಗದೇ ಮನೆಯಲ್ಲಿ ಉಳಿದುಕೊಂಡಿದ್ದಾರೆ.
ಇದನ್ನೂ ಓದಿ:ಸಾಯಿ ಲೇಔಟ್‌ಗೆ ಜಲದಿಗ್ಭಂದನ.. ಮನೆ, ರಸ್ತೆಗಳ ತುಂಬೆಲ್ಲ ನೀರೋ ನೀರು, ವಿದ್ಯುತ್ ಸ್ಥಗಿತ
ಮುಂದಿನ ಮೂರು ಗಂಟೆ ಬೆಂಗಳೂರಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ಜೋರು ಮಳೆಯಾಗಿ ನೂರಾರು ಸಮಸ್ಯೆಗಳು ಸೃಷ್ಟಿಯಾಗಿವೆ. ಇದರ ಜೊತೆಗೆ ಇನ್ನು ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ನಗರದವರು ಎಚ್ಚರಿಕೆಯಿಂದ ಇರಬೇಕು. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಜೋರು ಮಳೆ ಸುರಿಯುವ ಸಾಧ್ಯತೆ ಇದೆ.
ಬೆಂಗಳೂರು ಮಾತ್ರವಲ್ಲ, ರಾಜ್ಯದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಕೋಲಾರ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಭಾರೀ ಗಾಳಿ ಸಹಿತ ಮಳೆಯ ಆರ್ಭಟ ಇದೆ ಎಂದು ಹೇಳಲಾಗುತ್ತಿದೆ. ಗಂಟೆಗೆ 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ರಾಜ್ಯ ಹವಾಮಾನ ಇಲಾಖೆ ಈ ಮಾಹಿತಿ ನೀಡಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ