Advertisment

ವರುಣಾರ್ಭಟಕ್ಕೆ 90 ಜನ ಸಾವು.. 12 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತ; ಇಂದು ಕೂಡ ಭಾರೀ ಮಳೆ ಎಚ್ಚರಿಕೆ

author-image
Bheemappa
Updated On
ವರುಣಾರ್ಭಟಕ್ಕೆ 90 ಜನ ಸಾವು.. 12 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತ; ಇಂದು ಕೂಡ ಭಾರೀ ಮಳೆ ಎಚ್ಚರಿಕೆ
Advertisment
  • ದಿನದಿಂದ ದಿನಕ್ಕೆ ಪ್ರವಾಹ ಪರಿಸ್ಥಿತಿ ಹೆಚ್ಚಳ, ಸ್ಥಳೀಯರಲ್ಲಿ ಭಾರೀ ಆತಂಕ
  • ಧಾರಾಕಾರ ಮಳೆಯಿಂದ ಜನವಸತಿ ಪ್ರದೇಶಗಳು ಸಂಪೂರ್ಣ ಜಲಾವೃತ
  • ರಸ್ತೆ ಮೇಲೆ ತುಂಡಾಗಿ ಬಿದ್ದ ಕರೆಂಟ್, ವೈರ್​​ ತುಳಿದು ಓರ್ವ ಮಹಿಳೆ ಸಾವು

ಉತ್ತರ ಭಾರತದಲ್ಲಿ ಮಳೆ ಅಬ್ಬರ ಜೋರಾಗಿದೆ.. ವಾಣಿಜ್ಯ ನಗರಿ ಮುಂಬೈನಲ್ಲಿ ಮಳೆ ರಗಳೆ ಮುಂದುವರೆದಿದೆ.. ರಾಷ್ಟ್ರರಾಜಧಾನಿ ನವದೆಹಲಿಯಲ್ಲೂ ಮಳೆರಾಯ ಅಬ್ಬರಿಸಿದ್ದಾನೆ. ಗುಜರಾತ್, ಉತ್ತರ ಪ್ರದೇಶ ಅಸ್ಸಾಂ ಸೇರಿದಂತೆ ಹಲವೆಡೆ ವರುಣ ಅನಾಹುತ ಸೃಷ್ಟಿಸಿದ್ದಾನೆ.

Advertisment

ಇದನ್ನೂ ಓದಿ: ಒಳಹರಿವಿನಲ್ಲಿ ಭಾರೀ ಇಳಿಕೆ.. KRSನಲ್ಲಿ ಎಷ್ಟು ಸಾವಿರ ಕ್ಯೂಸೆಕ್​ ನೀರು ಕಡಿಮೆ ಆಗಿದೆ ಗೊತ್ತಾ?

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವರುಣ ರೌದ್ರನರ್ತನಕ್ಕೆ ನಿಂತಿದ್ದಾನೆ. ಕೆಲ ದಿನಗಳಿಂದ ಬಿಸಿಲಿಗೆ ಬೆಂದು ತತ್ತರಿಸಿದ್ದ ರಾಜ್ಯಗಳಲ್ಲಿ ವರುಣದೇವ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾನೆ. ನಿರಂತರ ಮಳೆಯಿಂದಾಗಿ ಜನಜೀವನವೇ ಅಸ್ತವ್ಯಸ್ತವಾಗಿದೆ.

ಇದನ್ನೂ ಓದಿ: ಕಾವೇರಿ ನೀರಿಗಾಗಿ ಸಿದ್ದು ಒಗ್ಗಟ್ಟಿನ ತಂತ್ರ.. ಸರ್ವ ಪಕ್ಷ ಸಭೆಗೆ ಬಿಜೆಪಿ-ಜೆಡಿಎಸ್ ಸಾಥ್.. ಯಾರೆಲ್ಲ ಬರ್ತಿದ್ದಾರೆ..?

Advertisment

publive-image

ಮುಂಬೈನಲ್ಲಿ ಮುಂದುವರಿದ ‘ಮಹಾ’ ಮಳೆ

ಭಾರತದ ವಾಣಿಜ್ಯ ನಗರಿ ಮುಂಬೈನಲ್ಲಿ ಕೊಂಚ ದಿನಗಳ ಕಾಲ ಬ್ರೇಕ್​ ಕೊಟ್ಟು ಹೋಗಿದ್ದ ಮಳೆರಾಯ ನಿನ್ನೆ ಮಾಸ್​​ ಲುಕ್​​ನಲ್ಲೇ ಭರ್ಜರಿ ಎಂಟ್ರಿ ಕೊಟ್ಟಿದ್ದಾನೆ. ಮುಂಬೈನಲ್ಲಿ ನಿನ್ನೆ ಬೆಳಗ್ಗೆಯಿಂದ ಶುರುವಾದ ಮಳೆ ಮಂಥನ, ರಸ್ತೆಗಳನ್ನ ಜಲಾವೃತವಾಗಿಸಿದೆ. ವಾಹನ ಸವಾರರು ರಸ್ತೆಗಳಲ್ಲಿ ಕುಂಟಾಬಿಲ್ಲೆ ಆಡಿಸಿದ ವರುಣದೇವ, ಜನಜೀವನವನ್ನ ಸಂಕಟಕ್ಕೆ ದೂಡಿದ್ದ.. ಇನ್ನು 4-5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ಇದ್ದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಿದೆ.

ಅಸ್ಸಾಂನಲ್ಲಿ ಭೀಕರ ಪ್ರವಾಹ.. 90ರ ಗಡಿ ದಾಟಿದ ಸಾವಿನ ಸಂಖ್ಯೆ

ಮಳೆ ಅಬ್ಬರದಿಂದ ಸಪ್ತಸುಂದರಿಯರ ನಾಡಿನಲ್ಲಿ ಮಳೆ ಎಡೆಬಿಡದೇ ಗಾನ ಕುಸುರಿಯಲ್ಲಿ ಕೂರಿಸಿದೆ.. ಅಸ್ಸಾಂನ 24 ಜಿಲ್ಲೆಗಳು ಭೀಕರ ಪ್ರವಾಹಕ್ಕೆ ತುತ್ತಾಗಿದ್ದು, ಸಾವಿನ ಸಂಖ್ಯೆ 90ರ ಗಡಿ ದಾಟಿದೆ ಅಂತ ಅಸ್ಸಾಂ ಸರ್ಕಾರ ತಿಳಿಸಿದೆ. ದಿನದಿಂದ ದಿನಕ್ಕೆ ಪ್ರವಾಹ ಪರಿಸ್ಥಿತಿ ಹೆಚ್ಚಳವಾಗಿದ್ದು, ಈ ವರೆಗೂ ಸುಮಾರು 12 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ..

ದೆಹಲಿಯಲ್ಲಿ ಮಳೆ ಅಬ್ಬರ.. ಓರ್ವ ಮಹಿಳೆ ಸಾವು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವರುಣಾರ್ಭಟ ಮುಂದುವರಿದಿದೆ. ನಿನ್ನೆ ಮುಂಜಾನೆಯಿಂದ ಶುರುವಾದ ಮಳೆರಾಯ ಬೊಬ್ಬಿರಿದಿದೆ. ದೆಹಲಿಯ ಬಜನಾಪುರದಲ್ಲಿ ಜಲಾವೃತವಾದ ರಸ್ತೆಯ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ​​ ತುಳಿದು ಮಹಿಳೆವೊಬ್ಬರು ಸಾವನ್ನಪ್ಪಿದ್ದಾರೆ..

Advertisment

ಇದನ್ನೂ ಓದಿ:ಟ್ರಕ್ಕಿಂಗ್​ಗೆ ಹೋಗುವಾಗ ಬೊಲೆರೋ ವಾಹನಕ್ಕೆ ಬೈಕ್ ಡಿಕ್ಕಿ.. ಸ್ಥಳದಲ್ಲೇ ಯುವಕ ಸಾವು


">July 13, 2024

ಗುಜರಾತ್​​​ನಲ್ಲಿ ವರುಣಾರ್ಭಟ.. ಮನೆಗಳು ಜಲಾವೃತ

ಇತ್ತ ಗುಜರಾತ್​ನಲ್ಲಿ ಭಾರಿ ವರ್ಷಧಾರೆಗೆ ತತ್ತರಿಸಿ ಹೋಗಿದೆ.. ವಲ್ಸಾದ್​ ನಗರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜನ ಜಾಗರಣೆ ಮಾಡಿದ್ರು.. ಧಾರಾಕಾರ ಮಳೆಯಿಂದಾಗಿ ಜನವಸತಿ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿ ಜನರು ಮನೆಯಿಂದ ಹೊರಬಾರದ ಸ್ಥಿತಿಗೆ ತಂದಿಟ್ತು..

Advertisment

ಮತ್ತೊದೆಡೆ ಗುಜರಾತ್​​ನಲ್ಲಿ ಭಾರೀ ಮಳೆಯಿಂದಾಗಿ ಸೇತುವೆ ಜಲಾವೃತವಾಗಿದ್ದು, ಕಾರು ಚಾಲಕನೋರ್ವ ಸೇತುವೆ ದಾಟುವ ಸಾಹಸಕ್ಕೆ ಕೈ ಹಾಕಿದ್ದಾನೆ. ನೀರಿನ ರಭಸಕ್ಕೆ ಕಾರು ಕೊಚ್ಚಿ ಹೋಗಿದ್ದು, ಬಳಿಕ ಜೆಸಿಬಿ ಮೂಲಕ ಕಾರನ್ನು ಹೊರತರಲಾಗಿದೆ. ಉತ್ತರಪ್ರದೇಶ, ಉತ್ತರಾಖಂಡ್ ಹಾಗೂ ಸಿಕ್ಕಿಂ ಸೇರಿ ಹಲವೆಡೆ ಭಾರೀ ಮಳೆಯಾಗುತ್ತಿರುವ ವರದಿಯಾಗಿದೆ. ಮಳೆಯಿಂದಾಗಿ ಪರಿಸ್ಥಿತಿ ಅಯೋಮಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment