Advertisment

ಮಳೆ ನೀರಲ್ಲಿ ನಿಂತ ಇಡೀ ಗ್ರಾಮ.. ಭಾರತೀಯ ಕದಂಬ ನೌಕಾನೆಲೆ ಇದಕ್ಕೆ ಕಾರಣವಾಯ್ತಾ?

author-image
Bheemappa
Updated On
ಮಳೆ ನೀರಲ್ಲಿ ನಿಂತ ಇಡೀ ಗ್ರಾಮ.. ಭಾರತೀಯ ಕದಂಬ ನೌಕಾನೆಲೆ ಇದಕ್ಕೆ ಕಾರಣವಾಯ್ತಾ?
Advertisment
  • ಬಿಡುವು ಕೊಡದೇ ಮಳೆ ಸುರಿದ್ರೆ ದೊಡ್ಡ ಅನಾಹುತದ ಆತಂಕ
  • ನೀರು ಹೆಚ್ಚಾಗಿದ್ದರಿಂದ ಬೋಟ್ ಮೂಲಕ ಜನರ ಸ್ಥಳಾಂತರ
  • ಜಿಲ್ಲಾಧಿಕಾರಿಗಳು ಹೇಳಿದ್ರೂ ಯಾರು ಈ ಬಗ್ಗೆ ತಲೆ ಕೆಡಿಸಿಕೊಳ್ತಿಲ್ಲ

ಕರಾವಳಿಯಲ್ಲಿ ಮುಂಗಾರು ಮಳೆ ಹಾಡು ಆರಂಭಿಸಿದೆ.. ಮಳೆಯಿಂದ ಹಲೆವೆಡೆ ಹಾನಿಗಳು ಸಹ ಆಗ್ತಿವೆ. ಕಾರವಾರ ತಾಲೂಕಿನ ಇಡೂರು ಗ್ರಾಮದಲ್ಲಿ ಕದಂಬ ನೌಕಾನೆಲೆಯ ಎಡವಟ್ಟಿನಿಂದ, ಇಡೀ ಗ್ರಾಮವೇ ಮುಳುಗಡೆ ಭೀತಿಯಲ್ಲಿದೆ.

Advertisment

ಕಾರವಾರ ತಾಲೂಕಿನ ಇಡೂರು ಗ್ರಾಮದಲ್ಲಿ ಬೆಳಗ್ಗೆಯಿಂದ ಶುರುವಾದ ಮಳೆಯಿಂದ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಸುತ್ತೆಲ್ಲಾ ಮಳೆ ನೀರು ನಿಂತಿದ್ದು, ಇನ್ನೊಂದೆಡೆ ನೀರಿನ ಮಧ್ಯೆ ವೃದ್ಧರೊಬ್ಬರು ಹರಸಾಹಸ ಮಾಡಿಕೊಂಡು ದಡ ಸೇರುತ್ತಾರೆ. ನೀರಿನಲ್ಲಿ ಬೋಟ್ ಮೂಲಕ ಸದ್ಯ ಜನರನ್ನು ಸಾಗಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: ನೇಣು ಬಿಗಿದು ಸಾವಿಗೆ ಶರಣಾದ ನಿವೃತ್ತ ASI.. ಸಾವಿಗೆ 2 ಕಾರಣಗಳು..!

publive-image

ಇಡೂರು ಗ್ರಾಮದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಗುಡ್ಡದ ಪಕ್ಕದಲ್ಲೇ ಗ್ರಾಮವಿದ್ದು ಅಪಾರ ಪ್ರಮಾಣದಲ್ಲಿ ಗುಡ್ಡದ ಮೇಲಿನಿಂದ ನೀರು ಗ್ರಾಮಕ್ಕೆ ನುಗ್ಗಿದೆ. ನೀರು ಸಮುದ್ರಕ್ಕೆ ಸೇರಲು ಇರುವ ಮಾರ್ಗದಲ್ಲಿ ನೌಕಾನೆಲೆಯವರು ಕಾಂಪೌಂಡ್​ ಹಾಕಿದ್ದು ಗ್ರಾಮವನ್ನ ಜಲಾವೃತವಾಗಿಸಿದೆ. ಪ್ರತಿವರ್ಷ ಇದೇ ರೀತಿ ಸಮಸ್ಯೆ ಆಗ್ತಿದ್ರು ಕ್ರಮ ಕೈಗೊಳ್ಳಲು ಮಾತ್ರ ಯಾರು ಮುಂದಾಗ್ತಿಲ್ಲ ಅಂತ ಜನ ಆಕ್ರೋಶ ಹೊರ ಹಾಕಿದ್ದಾರೆ.

ಇಲ್ಲಿ ಎಲ್ಲ ಜನರು ಕೃಷಿಕರು ಆಗಿದ್ದು ಕೂಲಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಕದಂಬ ನೌಕಾನೆಲೆಯವರು ಬಂದು ಕಾಲಿಟ್ಟ ಮೇಲೆ ಆವಾಗಿನಿಂದ ನಮಗೆ ತೊಂದರೆ ಆಗುತ್ತಿದೆ. 1 ರಿಂದ 7ನೇ ದಿನಾಂಕವರೆಗೆ ಮಳೆ ಬಿದ್ದ ಕಾರಣ ಮನೆಗಳಿಗೆ ನೀರು ನುಗ್ಗಿ ಜನರಿಗೆ ಭಾರೀ ಸಮಸ್ಯೆ ಆಗಿದೆ.

ಈರಾಬಾಯಿ ಕಳಸ, ಗ್ರಾಮ ಪಂಚಾಯತ್ ಸದಸ್ಯೆ

Advertisment

ಇನ್ನು, ಕಳೆದ ನಾಲ್ಕೈದು ವರ್ಷದಿಂದ ಇದೇ ರೀತಿ ಕೃತಕ ನೆರೆ ಸೃಷ್ಟಿ ಆಗ್ತಿದೆ. ಗ್ರಾಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಬೋಟ್ ಮೂಲಕ ಜನರನ್ನ ಕರೆತರೋದು, ಬಳಿಕ ನೀರಿನ ಪ್ರಮಾಣ ಕಡಿಮೆಯಾದ ನಂತರ ವಾಪಾಸ್ ಮನೆಗಳಿಗೆ ಕಳಿಸೋದು, ಪ್ರತಿವರ್ಷದ ದಿನಚರಿ ಆಗಿದೆ.

ಇದನ್ನೂ ಓದಿ:ವಿಶ್ವ ದರ್ಜೆ ಬೌಲರ್​​ಗೆ ಕಾಡಿತ್ತು ಕೊಹ್ಲಿಯಿಂದ ಕೀಳರಿಮೆ -ನಿವೃತ್ತಿ ವೇಳೆ ಸತ್ಯ ಬಿಚ್ಚಿಟ್ಟ ಲೆಜೆಂಡ್..!

publive-image

ದೋಣಿಯಲ್ಲಿ ಜನರನ್ನು ಶಿಫ್ಟ್ ಮಾಡುವುದು ಕಳೆದ 12 ವರ್ಷದಿಂದ ಹೀಗೆ ನಡೆಯುತ್ತಿದೆ. ಜಿಲ್ಲಾಧಿಕಾರಿಗಳು ಹೇಳಿದರು ಯಾರೂ ತಲೆ ಕೆಡಿಸಿಕೊಳ್ಳದೇ ಸ್ಥಳಕ್ಕೆ ಬರುತ್ತಾರೆ, ಹೋಗುತ್ತಾರೆ. ನೌಕಾನೆಲೆಯವರು ನೀರು ಹೋಗದಂತೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.

ರಜತ ಪೆಡ್ನೇಕರ್, ರಕ್ಷಣೆ ಮಾಡಿದವರು

Advertisment

ಇನ್ನು, ಕೇವಲ ಇಡೂರು ಗ್ರಾಮ ಮಾತ್ರವಲ್ಲದೇ ತಾಲೂಕಿನ ಬಿಣಗಾ, ಚಂಡ್ಯಾ ಸೇರಿ ಹಲವು ಗ್ರಾಮದಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಆಗಿದೆ. ಕರಾವಳಿಯಲ್ಲಿ ಮಳೆ ಮುಂದುವರಿದ್ರೆ, ಬಿಡುವು ಕೊಡದೇ ಮಳೆ ಸುರಿದ್ರೆ ದೊಡ್ಡ ಅನಾಹುತದ ಆತಂಕ ಇಲ್ಲಿನ ಜನರನ್ನ ಕಾಡ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment