ಬೆಂಗಳೂರಲ್ಲಿ ಧಾರಾಕಾರ ಮಳೆ.. ವರ್ಷಧಾರೆಯಿಂದ ಹಲವೆಡೆ ಜನರ ಪರದಾಟ; ಎಲ್ಲೆಲ್ಲಿ ಏನಾಯ್ತು?

author-image
admin
Updated On
ಆಲಿಕಲ್ಲು ಮಳೆಯ ಆರ್ಭಟ.. ಒಂದೇ ಗಂಟೆಗೆ ಬೆಂಗಳೂರು ನಗರದಲ್ಲಿ ಹಲವು ಅವಾಂತರ; ಆಗಿದ್ದೇನು?
Advertisment
  • ಸಂಜೆ ಆಗುತ್ತಿದ್ದಂತೆ ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆ
  • ಮಲ್ಲೇಶ್ವರಂ, ಯಶವಂತಪುರ ಸೇರಿದಂತೆ ಹಲವೆಡೆ ವರುಣನ ಆರ್ಭಟ
  • ಬೆಂಗಳೂರು ನಗರದ ಹಲವು ಕಡೆ ಗುಡುಗು ಸಹಿತ ಭಾರೀ ಮಳೆ

ಸಂಜೆ ಆಗುತ್ತಿದ್ದಂತೆ ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆಯಾಗಿದೆ. ರಸ್ತೆಯಲ್ಲೇ ಹರಿಯುತ್ತಿರುವ ಮಳೆ ನೀರಿಗೆ ಸಿಲುಕಿದ ವಾಹನ ಸವಾರರು ಹೈರಾಣಾಗಿದ್ದಾರೆ. ರಾಜ್ಯದ ಹಲವೆಡೆ ಇನ್ನೂ ಒಂದು ವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.

ಬೆಂಗಳೂರಿನ ಟೌನ್ ಹಾಲ್, ಮೈಸೂರು ಬ್ಯಾಂಕ್‌ ಸರ್ಕಲ್, ಮೆಜೆಸ್ಟಿಕ್‌, ಕೆ.ಆರ್‌. ಮಾರ್ಕೆಟ್, ಲಾಲ್ ಬಾಗ್ ಸುತ್ತಾಮುತ್ತ ಭರ್ಜರಿ ಮಳೆ ಆಗಿದೆ. ಮಲ್ಲೇಶ್ವರಂ, ಯಶವಂತಪುರ ಸೇರಿದಂತೆ ಹಲವೆಡೆ ವರುಣನ ಆರ್ಭಟ ಜೋರಾಗಿದೆ.

publive-image

ವಸಂತನಗರ, ಕಬ್ಬನ್ ಪಾರ್ಕ್ ರಸ್ತೆ, ರಿಚ್ಮಂಡ್ ಸರ್ಕಲ್ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಮಳೆಗೆ ವಾಹನ ಸವಾರರ ಪರದಾಡುವ ದೃಶ್ಯ ಕಂಡು ಬಂದಿದೆ.

ಇದನ್ನೂ ಓದಿ: ನಕ್ಕು ನಲಿಸಿದ್ದ ರಾಕೇಶ್ ಪೂಜಾರಿ ನೆನಪು; ರಾಕಿ ಕಂಡ ಕನಸಿಗೆ ಪಣ ತೊಟ್ಟ ಸ್ನೇಹಿತರು; ಏನಂದ್ರು? 

ಎಲ್ಲೆಲ್ಲಿ ಮಳೆಯ ಮುನ್ಸೂಚನೆ? 
ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಸಿಲಿಕಾನ್ ಸಿಟಿಯಲ್ಲಿ ನಿನ್ನೆಯ ಮಳೆರಾಯ ತಂಪೆರೆದಿದ್ದ. ಇಂದು ಸಹ ನಗರದ ಹಲವಾರು ಕಡೆ ಗುಡುಗು ಸಹಿತ ಭಾರೀ ಮಳೆಯಾಗಿದೆ.

ಮೇ 13 ರಿಂದ 19ರವರೆಗೆ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು ಮೇ 15ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮೇ 14ರಂದು ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಿಗೆ ಹಾಗೂ ಮೇ 15ರಂದು ವಿಜಯಪುರ, ಬೆಳಗಾವಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮೇ 13ರಿಂದ 19ರವರೆಗೆ ಮಳೆಯಾಗಲಿದ್ದು, ಮೊದಲ 2 ದಿನ ಹೊರತು ಪಡಿಸಿ ಉಳಿದ ಎಲ್ಲಾ ದಿನ ವ್ಯಾಪಕ ಮಳೆಯಾಗಲಿದೆ. ಮೇ 13ರಂದು ಚಿತ್ರದುರ್ಗ, ಹಾಸನ, ಕೊಡಗು. ಮೈಸೂರು ಹಾಗೂ ಮೇ 14ರಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

Advertisment