ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ.. ತುಂಬಿದ ನದಿಗಳು, ಗುಡ್ಡ ಕುಸಿಯುವ ಆತಂಕ

author-image
Bheemappa
Updated On
ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ.. ತುಂಬಿದ ನದಿಗಳು, ಗುಡ್ಡ ಕುಸಿಯುವ ಆತಂಕ
Advertisment
  • ಮುಂದಿನ 3 ದಿನ ಕಾಲ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ
  • ಈಗಾಗಲೇ ಮಣ್ಣು, ಕಲ್ಲು ತೆರವು ಮಾಡಿದ್ದು ಮತ್ತೆ ಗುಡ್ಡ ಕುಸಿಯುವ ಸಾಧ್ಯತೆ
  • ಮುಳುಗಿದ ಪಂಪ್ ವೆಲ್, ನೀರಲ್ಲಿ ರಸ್ತೆ ದಾಟಲು ಜನ ಹರಸಾಹಸ ಪಡ್ತಿದ್ದಾರೆ

ಧಾರಾಕಾರ ಮಳೆಗೆ ಕರಾವಳಿ ತೊಯ್ದು ತೊಪ್ಪೆಯಾಗಿದೆ. ಮನೆಗಳಿಗೆ ನೀರು ನುಗ್ಗಿದ್ದಲ್ಲದೇ ರಸ್ತೆಗಳೆಲ್ಲ ಹಳ್ಳದಂತಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಎಲ್ಲೆಂದರಲ್ಲಿ ಗೋಡೆ, ಗುಡ್ಡ ಕುಸಿಯುತ್ತಿದ್ದು ಜನರು ಆತಂಕದಲ್ಲಿದ್ದಾರೆ. ನದಿ ಪಾತ್ರಗಳು ತುಂಬಿ ಹರಿಯುತ್ತಿದ್ದು ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ.

ವರುಣನ ಆರ್ಭಟಕ್ಕೆ ಕಂಪೌಂಡ್ ಕುಸಿದು ಬೀಳುತ್ತಿವೆ. ಮಣ್ಣು ಗುಡ್ಡಗಳು ಕುಸಿದು ರಸ್ತೆಗೆ ಬೀಳುತ್ತಿವೆ. ನದಿಗಳು ಅಪಾಯ ಸೂಚಿಸುಚಂತೆ ತುಂಬಿ ಹರಿಯುತ್ತಿವೆ. ಮಂಗಳೂರಿನಲ್ಲಿ ಮನೆಗಳಿಗೆ, ರಸ್ತೆಗಳಿಗೆ ನೀರು ನುಗ್ಗಿ ಅಕ್ಷರಶಃ ಜಲಾವೃತವಾಗಿವೆ. ಪಂಪ್ ವೆಲ್ ರಸ್ತೆ ನೀರಿನಿಂದ ತುಂಬಿದ್ದು ಬಸ್​​ ಸಿಲುಕಿ ಪರದಾಡಿದೆ.

publive-image

ರಸ್ತೆ, ಮನೆಗಳಿಗೆ ನೀರು ನುಗ್ಗಿ ಮಂಗಳೂರು ಜಲಾವೃತ

ಮಂಗಳೂರಿನಲ್ಲಿ ಭಾರೀ ಮಳೆಯಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆ, ಮನೆಗಳಿಗೆ ನೀರು ನುಗ್ಗಿ ಜನ ಕಂಗಾಲಾಗಿದ್ದಾರೆ. ಅದರಲ್ಲೂ ಪಂಪ್‌ ವೆಲ್‌ ಜಂಕ್ಷನ್, ಕೊಟ್ಟಾರ ಚೌಕಿ ಸೇರಿ ಹಲವು ಪ್ರದೇಶಗಳು ಜಲಾವೃತವಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ NDRF ಹಾಗೂ SDRF ತಂಡದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ರಾತ್ರಿಯೇ 12 ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

ಭಾರೀ ಮಳೆಗೆ ಮಂಗಳೂರಿನ ಪಂಪ್​ವೆಲ್​ ರಸ್ತೆ ಮುಳುಗಡೆಯಾಗಿದ್ದು ನದಿಯಂತೆ ರಸ್ತೆ ಮೇಲೆ ನೀರು ಹರಿಯುತ್ತಿದೆ. ನೀರಲ್ಲಿ ರಸ್ತೆ ದಾಟಲು ಜನ ಹರಸಾಹಸಪಡ್ತಿದ್ದಾರೆ. ಇದರ ಮಧ್ಯೆ ಮುಳುಗಿದ ಪಂಪ್ ವೆಲ್​ನಲ್ಲಿ ಸಿಲುಕಿ ಬಸ್​​ ಕೂಡ ಪರದಾಡಿದೆ.

ಕಂಪೌಂಡ್ ಕುಸಿತಕ್ಕೆ ಹಾರಿ ಹೋದ ಮನೆಯ ಗೇಟ್​

ಧಾರಾಕಾರವಾಗಿ ಸುರಿಯುತ್ತಿರುವ ಮಹಾ ಮಳೆಗೆ ಕಡಲನಗರಿ ಮಂಗಳೂರು ಅಕ್ಷರಶಃ ಕಡಲಿನಂತೆ ಭಾಸವಾಗ್ತಿದೆ. ಭಾರೀ ಮಳೆಗೆ ಕಂಕನಾಡಿಯ ಸುವರ್ಣ ಲೇನ್ ಬಳಿ ಕಾಂಪೌಂಡ್ ಗೋಡೆ ಕುಸಿದು ರಸ್ತೆಯ ಮೇಲೆ ಬಿದ್ದಿದೆ. ಜಲಸ್ಫೋಟದ ರೀತಿ ಕಂಪೌಂಡ್ ಕುಸಿದಿದ್ದು ಎದುರು ಬದಿಯ ಕಾಂಪೌಂಡ್​ಗೂ ಹಾನಿಯಾಗಿದೆ. ಇದ್ರಿಂದ ಕಾಂಪೌಂಡ್​ಗೆ ಅಳವಡಿಸಿದ್ದ ಗೇಟ್ ಕಿತ್ತು ಹೋಗಿದೆ. ವಿದ್ಯುತ್ ಕಂಬ 2 ತುಂಡಾಗಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಅದೃಷ್ಟವಶಾತ್ ರಸ್ತೆಯಲ್ಲಿ ಜನ, ವಾಹನ ಸಂಚಾರ ಇಲ್ಲದ ಕಾರಣ ಭಾರೀ‌ ಅನಾಹುತ ತಪ್ಪಿದಂತೆ ಆಗಿದೆ.

ಭಾರಿ ಮಳೆಗೆ ಕದ್ರಿ ಶಿವಭಾಗ್ ಬಳಿಯ ಸುಂದರಿ ಅಪಾರ್ಟ್ಮೆಂಟ್​ನ ಹಿಂಭಾಗದ ತಡೆಗೋಡೆ ಕುಸಿದಿದೆ. ಮರ ಸಮೇತ ತಡೆಗೋಡೆ ಬಿದ್ದ ಪರಿಣಾಮ ಗೋಡೆಗೆ ಹಾನಿಯಾಗಿದ್ದು, ನಿವಾಸಿಗಳು ಆತಂಕದಲ್ಲಿದ್ದಾರೆ. ಸದ್ಯ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ ನಡೆಸಲಾಗಿದೆ.

ಇನ್ನು ವಾಮಂಜೂರಿನ ಕೆತ್ತಿಕಲ್ ಪ್ರದೇಶದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತವಾಗಿದೆ. ರಾತ್ರಿ ಗುಡ್ಡ ಕುಸಿದು, ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಮಣ್ಣು ಹಾಗೂ ಕಲ್ಲು ಬಂಡೆಗಳು ಬಿದ್ದಿವೆ. ಈಗಾಗಲೇ ಮಣ್ಣು, ಕಲ್ಲು ತೆರವು ಮಾಡಿದ್ದು ಮತ್ತೆ ಗುಡ್ಡ ಕುಸಿಯುವ ಸಾಧ್ಯತೆ ಇರೋದ್ರಿಂದ ಏಕಮುಖ ಸಂಚಾರಲ್ಲೆ ಅನುವು ಮಾಡಲಾಗಿದೆ.

ಇದನ್ನೂ ಓದಿ: ಕಾಂತಾರ- 1 ಶೂಟಿಂಗ್ ಮಾಡುವಾಗ ಅಸಲಿಗೆ ಏನಾಯಿತು.. ಸ್ಪಷ್ಟನೆ ಕೊಟ್ಟ ಚಿತ್ರತಂಡ, ಹೇಳಿದ್ದೇನು?

publive-image

ಭಾರೀ ಪ್ರಮಾಣದಲ್ಲಿ ಹಳ್ಳದಲ್ಲಿ ಹರಿಯುತ್ತಿರುವ ನೀರಿನಿಂದ ಆತಂಕ

ದಕ್ಷಿಣ ಕನ್ನಡ ಜಿಲ್ಲೆಯ 163 ಪ್ರದೇಶಗಳಲ್ಲಿ ನೆರೆ ಭೀತಿ ಸೃಷ್ಟಿಯಾಗಿದ್ದು ಮುಂದಿನ 3 ದಿನಗಳ ಕಾಲ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗ್ತಿದೆ. ಮಳವೂರು ಕಿಂಡಿ ಆಣೆಕಟ್ಟು ಪ್ರದೇಶದಲ್ಲಿ ನೀರು ಹೆಚ್ಚಾಗಿದೆ. ಫಲ್ಗುಣಿ ನದಿ ನೀರು ಉಕ್ಕಿ ಹರಿಯುತ್ತಿದ್ದು ರೈತರ ಕೃಷಿ ಭೂಮಿ, ತೋಟಗಳಿಗೆ ನುಗ್ಗುತ್ತಿದೆ. ಇತ್ತ ಹೊರವಲಯದ ಪಚ್ಚನಾಡಿಯಲ್ಲಿ ನೆರೆಯ ಆತಂಕವಿದ್ದು ಜನರಿಗೆ ಸುರಕ್ಷಿತ ಜಾಗಗಳಿಗೆ ಶಿಫ್ಟ್ ಆಗಲು ಸೂಚಿಸಲಾಗಿದೆ.

ಕೇವಲ ಮಂಗಳೂರು ಮಾತ್ರವಲ್ಲದೇ ಉಡುಪಿ ಜಿಲ್ಲೆಯಾದ್ಯಂತ ಕೂಡ ಮಳೆಯಬ್ಬರ ಜೋರಾಗಿದೆ. ಇಂದು ಮತ್ತು ನಾಳೆ ರೆಡ್ ಅಲರ್ಟ್ ‌ಎಚ್ಚರಿಕೆ ನೀಡಲಾಗಿದೆ. ನದಿ‌ ಹಾಗೂ ಸಮುದ್ರ ತೀರಕ್ಕೆ ಹೋಗದಂತೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ. ಒಟ್ಟಾರೆ ಭಾರೀ ಮಳೆಗೆ ಕರಾವಳಿ ತತ್ತರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment