Advertisment

ಅಬ್ಬಾ! ಮಳೆ.. ಮಳೆ.. ಕೊಚ್ಚಿ ಹೋದ ಬೈಕ್‌ಗಳು, ಪಲ್ಟಿಯಾದ ಲಾರಿ; ರಾಜ್ಯದಲ್ಲಿ ಇಂದು ವರುಣಾರ್ಭಟ!

author-image
Bheemappa
Updated On
ಅಬ್ಬಾ! ಮಳೆ.. ಮಳೆ.. ಕೊಚ್ಚಿ ಹೋದ ಬೈಕ್‌ಗಳು, ಪಲ್ಟಿಯಾದ ಲಾರಿ; ರಾಜ್ಯದಲ್ಲಿ ಇಂದು ವರುಣಾರ್ಭಟ!
Advertisment
  • ಕಲಬುರಗಿ ಜಿಲ್ಲೆ ಆಳಂದ ತಾಲೂಕಿನಲ್ಲಿ ಅಬ್ಬರಿಸಿ ಬೊಬ್ಬಿರಿದ ವರುಣ
  • ಸಿಲಿಕಾನ್​ ಸಿಟಿಯಲ್ಲೂ ಮೇಘರಾಜನ ತಾಂಡವ ವಿವಿಧೆಡೆ ಸಿಂಚನ
  • ರಾಜ್ಯದ ಕೆಲವೆಡೆ ಸಾವು-ನೋವಿಗೂ ವರುಣಾರ್ಭಟ ಕಾರಣವಾಗಿದೆ

ನೆತ್ತಿ ಸುಡೋ ಬಿಸಿಲಿಗೆ ಹೈರಾಣಾಗಿದ್ದ ಜನರಿಗೆ ವರುಣರಾಯ ತಂಪೆರೆದಿದ್ದಾನೆ. ಕರುನಾಡಿನ ಹಲವೆಡೆ ಮಳೆರಾಯ ಸಂಚರಿಸಿದ್ದಾನೆ. ಕೆಲವೆಡೆ ಸಮಸ್ಯೆಯನ್ನೂ ಸೃಷ್ಟಿಸಿದ್ದಾನೆ. ಸಾವು-ನೋವಿಗೂ ವರುಣಾರ್ಭಟ ಕಾರಣವಾಗಿದೆ.

Advertisment

ಮಳೆ.. ಮಳೆ.. ಮಳೆ.. ರಾಜ್ಯದ ಹಲವೆಡೆ ಮಳೆ ಕಾಣಿಸಿಕೊಂಡಿದೆ. ಬೆಂಗಳೂರು ಸೇರಿ ರಾಜ್ಯದ ಹಲವೆಡೆ ವರುಣ ಅಬ್ಬರಿಸಿದ್ದಾನೆ. ಹಾಸನ, ಗದಗ, ಬೆಳಗಾವಿ, ದಾವಣಗೆರೆ, ಬೀದರ್, ಕೊಪ್ಪಳದಲ್ಲಿ ಮಳೆ ನರ್ತನ ಕಾಣಸಿಕ್ಕಿದೆ.

publive-image

ಕಲಬುರಗಿಯಲ್ಲಿ ಗಾಳಿ ಸಹಿತ ಮಳೆಯ ಅಬ್ಬರ

ಕಲಬುರಗಿಯ ಹಲವು ಭಾಗದಲ್ಲಿ ವರುಣನ ಅಬ್ಬರ ಕಾಣಸಿಕ್ಕಿದೆ. ಆಳಂದ ತಾಲೂಕಿನಲ್ಲಂತೂ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಆಳಂದ ಪಟ್ಟಣ, ಪಡಸಾವಳಿ, ಖಜೂರಿ, ನಿಂಬರ್ಗಾ ಸೇರಿ ಹಲವು ಗ್ರಾಮಗಳ ರಸ್ತೆಗಳು ಜಲಾವೃತವಾಗಿತ್ತು. ಮಳೆ ನೀರಿನ ರಭಸಕ್ಕೆ ಬೈಕ್​ಗಳೇ ಕೊಚ್ಚಿ ಹೋಗುವಂತಾಗಿತ್ತು. ಖಜೂರಿ ಬಳಿ ಭಾರೀ ಗಾಳಿಗೆ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾಗಿತ್ತು. ಮುಖ್ಯ ರಸ್ತೆ ಮೇಲೆ ಲಾರಿ ಪಲ್ಟಿಯಾಗಿದ್ರಿಂದ ಸಂಚಾರಕ್ಕೆ ಪರದಾಡುವಂತಾಗಿತ್ತು.

ಸಿಡಿಲು ಬಡಿದು 10 ವರ್ಷದ ಬಾಲಕ ಸಾವು

ಕಲಬುರಗಿಯ ನರೋಣಾ ಗ್ರಾಮದಲ್ಲಿ ಸಿಡಿಲು ಬಡಿದು 10 ವರ್ಷದ ಬಾಲಕ ಮಹೇಶ್ ಎಂಬಾತ ಜೀವ ಕಳೆದುಕೊಂಡಿದ್ದಾನೆ. ಎತ್ತಿನ ಬಂಡಿಯಲ್ಲಿ ಮನೆಗೆ ವಾಪಸ್ ಬರುವಾಗ ಅವಘಡ ಸಂಭವಿಸಿದೆ.

Advertisment

ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಳೆ ಸಿಂಚನ

ಕಾದು ಕೆಂಡವಾಗಿದ್ದ ಬೆಂಗಳೂರು ಕೊನೆಗೂ ತಂಪಾಗಿದೆ. ಜೋರಾಗಿ ಮಳೆರಾಯ ತನ್ನ ಕೃಪೆ ತೋರಿಸದೇ ಇದ್ರೂ ಕಾದ ಕಣ್ಣುಗಳಿಗೆ ಬಂದನಪ್ಪ ಮೇಘರಾಜ ಅಂತ ನಿಟ್ಟುಸಿರು ಬಿಡುವಂತೆ ಮಾಡಿದ್ದ. ವರುಣನನ್ನ ಕಂಡ ಮಕ್ಕಳು ಕುಣಿದು ಕುಪ್ಪಳಿಸಿದ್ರು. ರಾಜಧಾನಿಯ ವಿವಿಧ ಭಾಗಗಳಲ್ಲಿ ತುಂತುರು ಮಳೆಯಾಗಿದ್ದು ಜೆ.ಸಿ ರೋಡ್‌, ಮೇಖ್ರಿ ಸರ್ಕಲ್‌, ಆರ್‌ಟಿ ನಗರ, ಜಿಟಿ ಮಾಲ್‌, ಹೆಬ್ಬಾಳ, ವೈಟ್ ಫೀಲ್ಡ್, ಸರ್ಜಾಪುರ, ಹೆಚ್‌ಎಸ್‌ಆರ್ ಲೇಔಟ್‌, ಯಲಹಂಕ, ಬೊಮ್ಮನಹಳ್ಳಿ ಸೇರಿ ನಗರದ ಹಲವೆಡೆ ಮಳೆಯಾಗಿದೆ.

ಇದನ್ನೂ ಓದಿ: VIDEO: ಮದುವೆ ಮಾಡಿಸಲು ಬಂದಿದ್ದ ಪುರೋಹಿತರಿಗೆ ಭಾರೀ ಅವಮಾನ; ಅಸಲಿಗೆ ಆಗಿದ್ದೇನು?

publive-image

ಬಾಗಲಕೋಟೆಯಲ್ಲಿನ ಬೇಗೆಗೆ ತಂಪೆರೆದ ವರುಣ

ಬಿಸಿಲಿನಿಂದ ಕಂಗೆಟ್ಟಿದ್ದ ಬಾಗಲಕೋಟೆ ಮಂದಿಗೆ ವರುಣನ ಆಗಮನ ಸಂತಸ ಕೊಟ್ಟಿತ್ತು. ಹಳೇ ಬಾಗಲಕೋಟೆ ಪಟ್ಟಣ, ನವನಗರ, ವಿದ್ಯಾಗಿರಿ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಕೂಲ್ ಕೂಲ್ ವಾತವರಣ ನಿರ್ಮಾಣವಾಗಿದೆ.

Advertisment

ತುಮಕೂರಲ್ಲೂ ಕೆಲವೆಡೆ ಸಾಧಾರಣ ಮಳೆ

ತುಮಕೂರಿನ ಗುಬ್ಬಿ, ತುರುವೇಕೆರೆ ತಾಲೂಕಿನ ಕೆಲ ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಕಾದ ಕೆಂಡದಂತಾಗಿದ್ದ ವಾತಾವರಣವರುಣ ಕೃಪೆಯಿಂದ ತಣ್ಣಗಾಗಿದೆ. ಚುಮು ಚುಮು ಚಳಿಯ ವಾತಾವರಣ ಸೃಷ್ಟಿಯಾಗಿದ್ದು, ತಾಪಮಾನವೂ ಇಳಿಕೆಯಾಗಿದೆ.

ಏಪ್ರಿಲ್ 21 ಅಂದ್ರೆ ಇಂದೂ ಕೂಡ ರಾಜ್ಯದ ಹಲವಡೆ ಗುಡುಗು, ಮಿಂಚು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆ ಈ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment