newsfirstkannada.com

ಧಾರಾಕಾರ ಮಳೆಗೆ ಸೋರುತ್ತಿರೋ ತಹಶೀಲ್ದಾರ್ ಕಚೇರಿ.. ಅಪಾಯದ ಮಟ್ಟ ಮೀರಿದ ರಾಜ್ಯದ ನದಿಗಳು, ಆತಂಕ

Share :

Published July 27, 2024 at 6:51am

    ಐತಿಹಾಸಿಕ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆ

    ಮಾಚಕನೂರು ಗ್ರಾಮದ ಹೊಳೆ ಬಸವೇಶ್ವರ ದೇವಸ್ಥಾನ ಜಲಾವೃತ

    ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭಾ ನದಿ, ಆತಂಕ

ರಾಜ್ಯದ ಹಲವೆಡೆ ಮುಂಗಾರು ಮಳೆ ಆರ್ಭಟದ ಜೊತೆಗೆ ಅವಾಂತರಗಳು ಕೂಡ ಮುಂದುವರಿದಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆ ಅಬ್ಬರಕ್ಕೆ ಜನ ಬೆಚ್ಚಿಬಿದ್ದಿದ್ದಾರೆ. ಉತ್ತರ ಕರ್ನಾಟಕದಲ್ಲಿ ನದಿಗಳ ಭೋರ್ಗರೆತ ಜನರನ್ನ ತಲ್ಲಣಗೊಳಿಸುತ್ತಿದೆ.

ಮೈದುಂಬಿದ ಘಟಪ್ರಬಾ.. ಇಡೀ ಗ್ರಾಮವೇ ಶಿಫ್ಟ್​!

ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಪ್ರವಾಹ ಭೀತಿಯಿಂದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ಕುಟುಂಬಗಳನ್ನ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡುತ್ತಿರೋ ಹಿನ್ನೆಲೆ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊಳೆ ಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ.

ಇದನ್ನೂ ಓದಿ: ಮೊಬೈಲ್ ಬಳಸುವವರೇ ಎಚ್ಚರ.. ಒಂದು ಕಾಲ್ ರಿಸೀವ್ ಮಾಡಿದ್ದಕ್ಕೆ ₹1 ಕೋಟಿ ಮಾಯ; ಆಗಿದ್ದೇನು?

ಅಪಾಯದ ಮಟ್ಟ ಮೀರಿದ ‘ಹೇಮಾವತಿ’!

ಹೇಮಾವತಿ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡ್ತಿರೋ ಹಿನ್ನೆಲೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಚಿಕ್ಕಮಂದಗೆರೆ ಗ್ರಾಮದ ಭಾಗಶಃ ಜಲಾವೃತವಾಗಿದೆ. ಹತ್ತಾರು ಎಕರೆ ಜಮೀನು ಸಹ ಮುಳುಗಡೆಯಾಗಿದ್ದು ಅನ್ನದಾತರು ಕಂಗಾಲಾಗಿದ್ದಾರೆ.

ಗೋಕಾಕ್​ನ ಲೋಳಸೂರ ಸೇತುವೆ ಮುಳುಗಡೆ

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆ ಗೋಕಾಕ್​ನ ಬೃಹತ್ ಲೋಳಸೂರ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಸಂಪೂರ್ಣ ಮುಳುಗಡೆಯಾದ ಹಿನ್ನೆಲೆ ಯರಗಟ್ಟಿ ಹಾಗೂ ಸಂಕೇಶ್ವರ ನಡುವಿನ ರಾಜ್ಯ ಹೆದ್ದಾರಿ ಬಂದ್​ ಆಗಿದೆ.

ಹಂಪಿಯ ಪುರಂದರದಾಸರ ಮಂಟಪ ಮುಳುಗಡೆ

ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಬಿಟ್ಟ ಹಿನ್ನೆಲೆ ವಿಜಯನಗರ ಜಿಲ್ಲೆಯ ಹಂಪಿಯ ಐತಿಹಾಸಿಕ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ.

ಕಡಲ ಕಿನಾರೆಗೆ ಅಪ್ಪಳಿಸುತ್ತಿವೆ ಬೃಹತ್ ಗಾತ್ರದ ಅಲೆಗಳು

ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಸಮುದ್ರ ಪ್ರಕ್ಷುಬ್ದಕೊಂಡಿದ್ದು, ಬೃಹತ್ ಗಾತ್ರದ ಅಲೆಗಳು ಕಿನಾರೆಗೆ ಬಂದು ಅಪ್ಪಳಿಸುತ್ತಿವೆ.. ಅಲೆಗಳ ಅಬ್ಬರಕ್ಕೆ ಸಮುದ್ರದ ತೀರದಲ್ಲಿ ಮತ್ತೇ ಭಾರೀ ಕಡಲ ಕೊರೆತ ಉಂಟಾಗುತ್ತಿದೆ.. ಮಂಗಳೂರು ಹೊರವಲಯದ ಉಳ್ಳಾಲದ ಸೋಮೇಶ್ವರ ಉಚ್ಚಿಲ ಭಾಗದಲ್ಲಿ ಕಡಲ ಕೊರೆತ ತೀವ್ರ ಗೊಂಡಿದ್ದು, ರಸ್ತೆ ಮತ್ತು ಮನೆಗಳು ಅಪಾಯದ ಸ್ಥಿತಿ ತಲುಪಿವೆ.

ಸೋರುತಿಹುದು ಹಾವೇರಿ ತಹಶೀಲ್ದಾರ್ ಕಚೇರಿ ಮಾಳಿಗೆ!

ಧಾರಾಕಾರ ಮಳೆಗೆ ಹಾವೇರಿ ತಹಶೀಲ್ದಾರ್ ಕಚೇರಿಯಲ್ಲಿ ನೀರಿನ ಸೋರಿಕೆಯಾಗ್ತಿದ್ದು, ಸಿಬ್ಬಂದಿಗಳು ಛತ್ರಿ ಹಿಡಿದು ಕೆಲಸ ಮಾಡುವ ದುಸ್ಥಿತಿ ಎದುರಾಗಿದೆ. ಮಳೆ ನೀರಿನಿಂದ ಆದಾಯ, ಜಾತಿ, ಆಸ್ತಿ ಪತ್ರಗಳು ಹಾಗೂ ಕಚೇರಿ ದಾಖಲೆಗಳು ನಾಶವಾಗೋ ಆತಂಕ ಎದುರಾಗಿದೆ. ಕಚೇರಿಯನ್ನ ಬೇರೆ ಕಟ್ಟಡಕ್ಕೆ ಶಿಫ್ಟ್​ ಮಾಡಿ ಅಂತ ನೌಕರರು ಮನವಿಮಾಡ್ತಿದ್ದಾರೆ.

ತುಂಗಭದ್ರಾ ತೀರದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

ರಾಯಚೂರಿನ ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿ ಬೃಹತ್​ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದೆ. ದಿನೇ ದಿನೇ ನದಿ ತೀರದಲ್ಲಿ ಮೊಸಳೆಗಳ ಕಾಟ ಹೆಚ್ಚಳವಾಗ್ತಿದ್ದು ಗ್ರಾಮಕ್ಕೆ ಮೊಸಳೆ ನುಗ್ಗುವ ಭೀತಿ ಎದುರಾಗಿದೆ.

ಇದನ್ನೂ ಓದಿ: ನೆಟ್​ನಲ್ಲಿ ಅಬ್ಬರದ ಬ್ಯಾಟಿಂಗ್.. ಸಿಂಹಳೀಯರ ನಾಡಲ್ಲಿ ಘರ್ಜನೆ ಮಾಡ್ತಾರಾ KL ರಾಹುಲ್?

ಮಳೆ ಅಬ್ಬರಕ್ಕೆ ಹಳದಿ ಬಣ್ಣಕ್ಕೆ ತಿರುಗಿದ ಬೆಳೆ

10-15 ದಿನಗಳಿಂದ ಧಾರವಾಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗ್ತಿರೋ ಹಿನ್ನೆಲೆ ಜಿಲ್ಲೆಯಾದ್ಯಂತ 2 ದಿನಗಳ ಕಾಲ ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ಕೂಡ ಘೋಷಣೆ ಮಾಡಲಾಗಿದೆ.. ಅಲ್ಲದೇ ಧಾರಾಕಾರ ಮಳೆಗೆ ರೈತರು ಬೆಳೆದ ಬೆಳೆಗಳಿಗೆ ರೋಗದ ಭೀತಿ ಎದುರಾಗಿದೆ.. ಹಚ್ಚ ಹಸಿರಿನಿಂದ ಕಂಗೊಳಿಸಬೇಕಿದ್ದ ಬೆಳೆ ಮಳೆಯಿಂದ ಹಳದಿ ಬಣ್ಣಕ್ಕೆ ತಿರುಗುತ್ತಿವೆ.

ಹತ್ತು ಹಲವು ಅವಾಂತರಕ್ಕೆ ಕಾರಣವಾಗಿರೋ ವರುಣ ಸಂಕಷ್ಟಗಳ ದಶಾವತಾರ ತೋರಿ ಜನರ ಎದೆಯನ್ನ ಜಲ್ಲೆನ್ನಿಸುತ್ತಿದ್ದಾನೆ. ಮಳೆ ಇನ್ನಷ್ಟು ದಿನ ಮುಂದುವರೆದರೆ ಮತ್ತಷ್ಟು ಸಂಕಷ್ಟಗಳು ಜನರನ್ನ ಕಾಡಿ ಕಂಗೆಡಿಸೋ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧಾರಾಕಾರ ಮಳೆಗೆ ಸೋರುತ್ತಿರೋ ತಹಶೀಲ್ದಾರ್ ಕಚೇರಿ.. ಅಪಾಯದ ಮಟ್ಟ ಮೀರಿದ ರಾಜ್ಯದ ನದಿಗಳು, ಆತಂಕ

https://newsfirstlive.com/wp-content/uploads/2024/07/RAIN_STATE.jpg

Load More