Advertisment

ನದಿಯಾಗಿ ಬದಲಾದ ರಸ್ತೆ, ಮನೆ ಮೇಲೆ ಮಣ್ಣು ಕುಸಿದು ಮಹಿಳೆ ಸಾವು.. ರಾಜ್ಯದಲ್ಲಿ ಮಳೆಯಿಂದ ಭಾರೀ ಅವಾಂತರ

author-image
AS Harshith
Updated On
ನದಿಯಾಗಿ ಬದಲಾದ ರಸ್ತೆ, ಮನೆ ಮೇಲೆ ಮಣ್ಣು ಕುಸಿದು ಮಹಿಳೆ ಸಾವು.. ರಾಜ್ಯದಲ್ಲಿ ಮಳೆಯಿಂದ ಭಾರೀ ಅವಾಂತರ
Advertisment
  • ಕರುನಾಡಿನಲ್ಲಿ ವರುಣಾರ್ಭಟ ಭಾರೀ ಜೋರು
  • ಎಡೆಬಿಡದೆ ಸುರಿಯುತ್ತಿರೋ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ-ಕೊಳ್ಳಗಳು
  • ಕೊಡಗಿನಾದ್ಯಂತ ಬೋರ್ಗರೆಯುತ್ತಿರುವ ಜಲಪಾತಗಳು.. ಪ್ರವೇಶಕ್ಕೆ ನಿಷೇಧ

ಕರುನಾಡನ್ನ ಮಳೆನಾಡಾಗಿಸುತ್ತಿರೋ ವರುಣ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಹಲವೆಡೆ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಅಂತ ಜನ ಕೂಲ್ ಕೂಲ್​ ಆಗ್ತಿದ್ರೆ, ಕೆಲವೆಡೆ ಮಳೆ ಕೊಡ್ತಿರೋ ಕಾಟಕ್ಕೆ ಜನ ಕಂಗಾಲಾಗಿದ್ದಾರೆ.

Advertisment

ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ವರುಣ ಮಲೆನಾಡನ್ನ ಮಳೆನಾಡಾಗಿಸಿದ್ದಾನೆ. ಬ್ರೇಕ್​ ತೆಗೆದುಕೊಳ್ಳದೇ ಆನ್​ ಡ್ಯೂಟಿ ಅಂತಿರೋ ಮಳೆರಾಯನ ಆರ್ಭಟ ಕಂಡು ಜನರು ಕಂಗಾಲಾಗಿ ಹೋಗಿದ್ದಾರೆ. ಎಡೆಬಿಡದೆ ಸುರಿಯುತ್ತಿರೋ ಮಳೆಯಿಂದ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಕೆಲವೆಡೆ ಪ್ರವಾಹ ಭೀತಿ ಎದುರಾಗಿದೆ.

publive-image

ಹೊನ್ನಾವರದ ವರ್ನಕೇರಿ ಬಳಿ ಗುಡ್ಡ ಕುಸಿತ.. ಸವಾರರ ಪರದಾಟ

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ-ಬೆಂಗಳೂರು ಹೆದ್ದಾರಿಯಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿತ್ತು. ಬಳಿಕ ಹಿಟಾಚಿ ಮೂಲಕ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ತೆರವುಗೊಳಿಸಿ ಒಂದು ಬದಿ ಸಂಚಾರಕ್ಕೆ ಅನುವು ಮಾಡಿಕೊಡಲಾಯ್ತು. ಗುಡ್ಡ ಕುಸಿದ ಪರಿಣಾಮ ಮೂರಕ್ಕೂ ಅಧಿಕ ವಿದ್ಯುತ್ ಕಂಬಗಳಿಗೂ ಹಾನಿಯಾಗಿತ್ತು. ಸ್ಥಳಕ್ಕೆ ಎಂಟ್ರಿಕೊಟ್ಟ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬಗಳನ್ನ ಸರಿಪಡಿಸಿ ವಿದ್ಯುತ್​ ಸಂಪರ್ಕ ಕಲ್ಪಿಸಲು ವ್ಯವಸ್ಥೆಮಾಡಿದ್ರು.

publive-image

ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66 ಜಲಮಯ

ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವರುಣಾರ್ಭಟಕ್ಕೆ ರಾಷ್ಟ್ರೀಯ ಹೆದ್ದಾರಿ 66 ನದಿಯಾಗಿ ಬದಲಾಗಿದೆ. ಮಳೆ ನೀರು ಹೆದ್ದಾರಿಗೆ ನುಗ್ಗಿದ ಪರಿಣಾಮ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಅಲ್ಲದೇ ಕೆಲ ಭಾಗಗಳಲ್ಲಿ ಮನೆಯೊಳಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪುರಸಭೆ ಸಿಬ್ಬಂದಿಗಳು ಚರಂಡಿಯಲ್ಲಿ ತುಂಬಿದ್ದ ಮಣ್ಣ ಮತ್ತು ಕಸವನ್ನ ತೆರವುಗೊಳಿಸಿದ್ರು.

Advertisment

ಮನೆಯ ಮೇಲೆ ಮಣ್ಣು ಕುಸಿದು ಮಹಿಳೆ ಸಾವು

ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪ ನಿರಂತರ ಮಳೆಯಿಂದ ಮನೆಯ ಮೇಲೆ ಮಣ್ಣು ಕುಸಿದು ಅಂಬಾ ಎಂಬ ಮಹಿಳೆ ಸಾವನ್ನಪ್ಪಿದ್ದಾಳೆ. ಭಾರೀ ಮಳೆ ಹಿನ್ನೆಲೆ ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಬ್ರಹ್ಮಾವರ ತಾಲೂಕಿನ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

publive-image

ಕೊಡಗಿನಾದ್ಯಂತ ಜಲಪಾತಗಳ ಪ್ರವೇಶಕ್ಕೆ ನಿಷೇಧ

ಕೊಡಗಿನಾದ್ಯಂತ ಜಲಪಾತ ಮತ್ತು ಕೆರೆಗಳ ಬಳಿ ಸಾರ್ವಜನಿಕರು ಪ್ರವೇಶಿಸದಂತೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ‌. ಮಳೆ ಹೆಚ್ಚುತ್ತಿರುವ ಹಿನ್ನಲೆ ಕೊಡಗಿನಾದ್ಯಂತ ಜಲಪಾತಗಳು ಬೋರ್ಗರೆಯುತ್ತಿವೆ. ಈ ಹಿನ್ನೆಲೆ ಯಾವುದೇ ಅನಾಹುತಗಳು ಸಂಭವಿಸದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಿದ್ದು, ಜಲಪಾತದ ಬಳಿ ಯಾರೂ ಹೋಗದಂತೆ ನಿರ್ಬಂಧ ಹೇರಿದೆ.

publive-image

ದೇವರಾಯನದುರ್ಗದಲ್ಲಿ ಹೆಚ್ಚಿದ ಪ್ರವಾಸಿಗರ ದಂಡು

ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ತುಮಕೂರಿನ ಪ್ರವಾಸಿ ತಾಣಗಳಾದ ನಾಮದ ಚಿಲುಮೆ ಹಾಗೂ ದೇವರಾಯನದುರ್ಗ ಸದ್ಯ ಪ್ರವಾಸಿಗರ ಸ್ವರ್ಗವಾಗಿ ಮಾರ್ಪಟ್ಟಿದೆ. ವರುಣನ ಕೃಪೆಯಿಂದಾಗಿ ಬೆಟ್ಟದ ತಪ್ಪಲು ಹಚ್ಚಹಸಿರಾಗಿ‌ ಕಂಗೊಳಿಸುತ್ತಿದೆ. ಬೆಟ್ಟದ ತಪ್ಪಲಿನಲ್ಲಿ ಮಂಜು ಕವಿದ ಮಲೆನಾಡಿನ ಅನುಭವ ನೀಡುತ್ತಿದೆ. ಸಣ್ಣನೆ ಜಿನುಗುವ ಮಳೆ ಮಲೆನಾಡಿನ ಅನುಭವ ನೀಡುತ್ತಿದೆ. ಹೀಗಾಗಿ ದೇವರಾಯನದುರ್ಗದ ಸೌಂದರ್ಯ ಸವಿಯಲು ಪ್ರವಾಸಿಗರ ದಂಡೇ ಕಲ್ಪತರುನಾಡಿನತ್ತ ಆಗಮಿಸ್ತಿದೆ.

Advertisment

ಒಟ್ನಲ್ಲಿ ಕರುನಾಡಿಗೆ ಕೃಪೆ ತೋರಿರೋ ವರುಣ ಅಬ್ಬರಿಸುತ್ತಿದ್ದಾನೆ. ಮುಂದಿನ ದಿನಗಳನ್ನು ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಜನರೂ ಕೂಡ ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment