/newsfirstlive-kannada/media/post_attachments/wp-content/uploads/2024/04/Kalburgi-Rain-1.jpg)
ಕಲಬುರಗಿ: ನೆತ್ತಿ ಸುಡುವ ಸೂರ್ಯನ ಶಾಖ, ರಣ ಬಿಸಿಲಿಗೆ ಬಸವಳಿದಿದ್ದ ಮಂದಿಗೆ ಕೊನೆಗೂ ಮಳೆರಾಯ ಕೃಪೆ ತೋರಿದ್ದಾನೆ. ಸೂರ್ಯನಗರಿ ಕಲಬುರಗಿ ಜಿಲ್ಲೆಯ ಕೆಲವೆಡೆ ಇಂದು ಉತ್ತಮ ಮಳೆ ಆಗಿದೆ. ಖಡಕ್ ಬಿಸಿಲಿಗೆ ಬಸವಳಿದಿದ್ದ ಕಲಬುರಗಿ ಜನತೆಗೆ ವರುಣದೇವ ತಂಪೆರೆದಿದ್ದಾನೆ.
ಇತ್ತೀಚೆಗೆ ಕಲಬುರಗಿ ಜಿಲ್ಲೆಯಲ್ಲಿ 43-44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಸೂರ್ಯನ ಶಾಖಕ್ಕೆ ಜನ ತತ್ತರಿಸಿ ಹೋಗಿದ್ದರು. ಇಂದು ಮಳೆಗಾಲದಂತೆ ಸುರಿಯುವ ಗುಡುಗು, ಮಿಂಜು, ಬಿರುಗಾಳಿ ಸಹಿತ ಮಳೆಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಗಾಳಿ ಸಹಿತ ಮಳೆ ಅಬ್ಬರಿಸಿದೆ. ಜಿಲ್ಲೆಯ ಕೆಲವೆಡೆ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ವರುಣನ ಕೃಪೆಗೆ ಜನತೆ ಸಂತಸಗೊಂಡಿದ್ದಾರೆ.
ಬಾಗಲಕೋಟೆ ಬಿಸಿಲಿಗೆ ತಂಪು!
ಕಲಬುರಗಿ ಜಿಲ್ಲೆಯ ಜೊತೆಗೆ ಇಂದು ಬಿಸಿಲಿನ ಬೇಗೆಗೆ ಬೆಂದಿದ್ದ ಬಾಗಲಕೋಟೆ ಜಿಲ್ಲೆಯ ಸುತ್ತಮುತ್ತ ತುಂತುರು ಮಳೆಯಾಗಿದೆ. ಬಾಗಲಕೋಟೆಯ ಜಮಖಂಡಿ, ಬಾದಾಮಿ ಭಾಗದಲ್ಲೂ ಸುರಿದ ತುಂತುರು ಮಳೆಯಿಂದ ತಂಪಾದ ವಾತಾವರಣ ಸೃಷ್ಟಿಯಾಗಿದೆ.
ಇದನ್ನೂ ಓದಿ: ಈ ಬಾರಿ ರಾಜ್ಯಕ್ಕೆ ಭರ್ಜರಿ ಮಳೆ ಗ್ಯಾರಂಟಿ.. ಹುಬ್ಬಳ್ಳಿ ಸೇರಿ ರಾಜ್ಯದ ಯಾವ್ಯಾವ ಭಾಗದಲ್ಲಿ ಮಳೆ ಆಗಿದೆ ಗೊತ್ತಾ?
ವಿಜಯಪುರಕ್ಕೂ ತಂಪೆರೆದ ಮಳೆರಾಯ
ವಿಜಯಪುರ ಜಿಲ್ಲೆಯ ಹಲವೆಡೆ ಇಂದು ಗಾಳಿ ಸಹಿತ ಮಳೆಯಾಗಿದೆ. ವಿಜಯಪುರ ನಗರ ಸೇರಿದಂತೆ ಹಲವೆಡೆ ಜಿಟಿ ಜಿಟಿ ಮಳೆಯಾಗಿದೆ. ತಿಕೋಟಾ ತಾಲೂಕಿನ ಬಾಬಾನಗರ, ಬಿಜ್ಜರಗಿ, ದೇವರ ಹಿಪ್ಪರಗಿ ಸೇರಿದಂತೆ ಹಲೆವೆಡೆ ತಂಪಾದ ಗಾಳಿ ಬೀಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ