ಇಂದಿನಿಂದ 5 ದಿನ ಭರ್ಜರಿ ಮಳೆ; ಬೆಂಗಳೂರಲ್ಲಿ ಭಾರೀ ಟ್ರಾಫಿಕ್​; ನೀವು ಓದಲೇಬೇಕಾದ ಸ್ಟೋರಿ!

author-image
Ganesh Nachikethu
Updated On
ಬೆಂಗಳೂರಿಗರೇ.. ಇಂದು ಗುಡುಗು ಸಹಿತ ಮಳೆ ಬರುವ ಸಾಧ್ಯತೆ.. ಬೇಗ ಗೂಡು ಸೇರಿಕೊಳ್ಳಿ
Advertisment
  • ಇಂದಿನಿಂದ ಮುಂದಿನ ಐದು ದಿನಗಳ ಕಾಲ ಬೆಂಗಳೂರಲ್ಲಿ ಭಾರೀ ಮಳೆ..!
  • ಭಾರೀ ಮಳೆಯ ಹಿನ್ನೆಲೆ ಹವಾಮಾನ ಇಲಾಖೆಯಿಂದ ಹೈ ಅಲರ್ಟ್​ ಘೋಷಣೆ
  • ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಭಾರೀ ಟ್ರಾಫಿಕ್​ ಇರೋ ಕಾರಣ ರೆಡ್​ ಅಲರ್ಟ್​​

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಭಾರೀ ಮಳೆ ಅಲರ್ಟ್ ಇದೆ. ಜತೆಗೆ ಆಗಸ್ಟ್ 15 ರಿಂದ 18 ರವರೆಗೂ ಸಾಲು ಸಾಲು ರಜೆ ಇದೆ. ಹಾಗಾಗಿ ಊರಿಗೆ ಹೋಗುವ ಬರುವ ವಾಹನಗಳು ಹೆಚ್ಚಾಗಿರೋ ಕಾರಣ ಇಡೀ ಬೆಂಗಳೂರಲ್ಲಿ ಭಾರೀ ಟ್ರಾಫಿಕ್​ ಇರಲಿದೆ ಎಂದು ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತ ಎಮ್‌ ಎನ್‌ ಅನುಚೇತ್ ಹೇಳಿದ್ದಾರೆ.

ಮಳೆ ಬಂದರೆ ರಸ್ತೆಯಲ್ಲಿ ನೀರು ನಿಲ್ಲಲಿದೆ. ಇದರಿಂದ ವಾಹನ ಸಂಚಾರಕ್ಕೆ ಜಾಗವಿಲ್ಲದೆ ಎಲ್ಲರೂ ಪರದಾಡಬೇಕಾಗುತ್ತದೆ. ಕಚೇರಿಗೆ ಹೋಗುವ ಬರುವ ವಾಹನಗಳೂ ಇದ್ದರೆ ಟ್ರಾಫಿಕ್ ಕಿರಿಕಿರಿ ಆಗಲಿದೆ. ಉದ್ಯೋಗಿಗಳು ಕಚೇರಿ ತಲುಪುವುದು ಕೂಡ ತಡ ಆಗುತ್ತದೆ. ಹಾಗಾಗಿ ವರ್ಕ್‌ ಫ್ರಂ ಹೋಂ ನೀಡಿ ಎಂದು ಪ್ರೈವೇಟ್​ ಕಂಪನಿಗಳ ಅಸೋಸಿಯೇಷನ್‌ಗೆ ಎಮ್‌ ಎನ್‌ ಅನುಚೇತ್ ಅವರು ವಿಶೇಷ ಮನವಿ ಮಾಡಿದ್ದಾರೆ.

ಐದು ದಿನ ಭಾರೀ ಮಳೆ

ಇಂದಿನಿಂದ ಐದು ದಿನಗಳ ಕಾಲ ಬೆಂಗಳೂರು ನಗರ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಭಾರೀ ಮಳೆ ಬರಲಿದೆ. ಆಗಸ್ಟ್ 14 ರಿಂದ 18 ರವರೆಗೆ ಭಾರೀ ಮಳೆ ಹಿನ್ನೆಲೆ ಯೆಲ್ಲೋ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ. ಭಾರೀ ಮಳೆಯಿಂದ ರಸ್ತೆಗಳಲ್ಲಿ ನೀರು ನಿಲ್ಲಲಿದೆ. ತಗ್ಗು ವಸತಿ ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ:ಸ್ಯಾಂಡಲ್‌ವುಡ್‌ ಕಲಾವಿದರ ಸಂಘದ ಪೂಜೆ ಬಳಿಕ ದರ್ಶನ್ ಭೇಟಿಗೆ ಹೊರಟ ಅಭಿಷೇಕ್, ಧನ್ವೀರ್‌, ಚಿಕ್ಕಣ್ಣ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment