newsfirstkannada.com

ಇಂದು ರಾತ್ರಿ ಬೆಂಗಳೂರಲ್ಲಿ ಭರ್ಜರಿ ಮಳೆ; ಈ ರಸ್ತೆಗಳಲ್ಲಿ ಭಾರೀ ಟ್ರಾಫಿಕ್​​ ಜಾಮ್!

Share :

Published May 4, 2024 at 4:25pm

  ನಗರದಲ್ಲಿ ಇಂದಿನ ರಾತ್ರಿಯಿಂದ ಮೂರು ದಿನಗಳ ಕಾಲ ಭಾರೀ ಮಳೆ'

  ಬೆಂಗಳೂರಿನ ಈ ಪ್ರಮುಖ ರಸ್ತೆಗಳಲ್ಲಿ ಭಾರೀ ಜಾಮ್​ ಆಗೋ ಸಾಧ್ಯತೆ

  ವಾಹನ ಸವಾರರು ಈ ರಸ್ತೆಗಳಲ್ಲಿ ಓಡಾಡೋ ಮುನ್ನ ಎಚ್ಚರವಹಿಸಲೇಬೇಕು!

ಬೆಂಗಳೂರು: ರಾಜ್ಯ ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆಯಂತೆ ಇಂದು ರಾತ್ರಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ. ಇಷ್ಟೇ ಅಲ್ಲ ಜೊತೆಗೆ ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆರ್​​​ಸಿಬಿ, ಗುಜರಾತ್​​ ಟೈಟನ್ಸ್​ ಮಧ್ಯೆ ಐಪಿಎಲ್​ ಪಂದ್ಯ ನಡೆಯುತ್ತಿದೆ. ಜತೆಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿ ಇರಲಿದೆ.

ಇನ್ನು, ಬೆಂಗಳೂರು ಮಳೆ ವಾಹನ ಸವಾರರ ಮೇಲೆ ನೇರ ಪರಿಣಾಮ ಬೀರಲಿದೆ. ಇದಕ್ಕೆ ಕಾರಣ ಮಳೆಯಿಂದ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗುವುದು. ಇದರಿಂದ ವಾಹನ ಸವಾರರು ಪರದಾಡುವುದು.

ಹೊಸೂರು, ಮೈಸೂರು ರೋಡ್​​, ಎಲೆಕ್ಟ್ರಾನಿಕ್ ಸಿಟಿ, ಮೆಜೆಸ್ಟಿಕ್​, ಕೆ.ಆರ್​ ಮಾರ್ಕೆಟ್, ರಾಜಾಜಿನಗರ, ಮಲ್ಲೇಶ್ವರಂ, ಕೆ.ಆರ್​ ಪುರಂ, ಹೊಸಕೋಟೆ, ಆರ್​.ಆರ್​ ನಗರ, ಕೆಂಗೇರಿ, ನಾಗರಬಾವಿ, ವಿಜಯನಗರ, ಕುರುಬರಹಳ್ಳಿ, ಯಶವಂತಪುರ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಟ್ರಾಫಿಕ್​ ಜಾಮ್​ ಆಗಲಿದೆ. ಹಾಗಾಗಿ ಈ ಏರಿಯಾಗಳಿಗೆ ಹೋಗೋ ಪ್ರಮುಖ ರಸ್ತೆಗಳಲ್ಲಿ ಓಡಾಡೋ ಜನ ಎಚ್ಚರಿಕೆ ವಹಿಸಬೇಕಿದೆ.

ನಗರದಲ್ಲಿ ಇಂದಿನ ರಾತ್ರಿಯಿಂದ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜತೆಗೆ ಇಡೀ ರಾಜ್ಯದ ಹಲವು ಕಡೆ ಮಳೆ ಸುರಿಯಲಿದೆ.

ಇದನ್ನೂ ಓದಿ: ಇಂದು ನಡೆಯಬೇಕಿದ್ದ ಆರ್​​​ಸಿಬಿ, ಗುಜರಾತ್​ ನಡುವಿನ ಐಪಿಎಲ್​​ ಪಂದ್ಯ ರದ್ದು? ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ರಾತ್ರಿ ಬೆಂಗಳೂರಲ್ಲಿ ಭರ್ಜರಿ ಮಳೆ; ಈ ರಸ್ತೆಗಳಲ್ಲಿ ಭಾರೀ ಟ್ರಾಫಿಕ್​​ ಜಾಮ್!

https://newsfirstlive.com/wp-content/uploads/2024/05/Heavy-Rains-1.jpg

Load More