newsfirstkannada.com

ಬೆಂಗಳೂರಲ್ಲಿ ಮಿತಿ ಮೀರಿದ ಟ್ರಾಫಿಕ್​ ಜಾಮ್​​.. ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

Share :

Published January 18, 2024 at 6:01am

    ವಾಹನಗಳ ಸಂಖ್ಯೆ ಹೆಚ್ತಾಗ್ತಿರೋದು ಬೆಂಗಳೂರಿಗೆ ಆಪತ್ತು ಆಗುತ್ತಾ?

    ಅಧಿಕ ಮಾಲಿನ್ಯಕ್ಕೆ ಕಾರಣ ಅಂತ ಪರಿಸರ ವಾದಿಗಳ ಭಾರೀ ಆಕ್ರೋಶ!

    ದಿನದಿಂದ ದಿನಕ್ಕೆ ಸಿಲಿಕಾನ್​ ಸಿಟಿಯಲ್ಲಿ ಹೆಚ್ಚಾಗುತ್ತಿದೆ ವಾಯುಮಾಲಿನ್ಯ

ಬೆಂಗಳೂರು: ಟ್ರಾಫಿಕ್‌ ಜಾಮ್, ವಾಯುಮಾಲಿನ್ಯ, ಮಿತಿಮೀರಿದ ಜನಸಂಖ್ಯೆಯ ನಡುವೆ ಸಿಲಿಕಾನ್‌ ಸಿಟಿ ಬೆಂಗಳೂರು ಹೊಸ ದಾಖಲೆಯೊಂದನ್ನ ಮಾಡಿದೆ. ಆದರೆ ದೆಹಲಿಯನ್ನೇ ಹಿಂದಿಕ್ಕೆ ಮಾಡಿರುವ ಈ ಸಾಧನೆ ಖುಷಿಯ ಬದಲು ಆತಂಕಕ್ಕೆ ಕಾರಣವಾಗಿದೆ.‌ ರಾಜ್ಯ ಸರ್ಕಾರದ ವಿಫಲತೆಯು ಎದ್ದು ಕಾಣ್ತಿದೆ. ಬೆಂಗಳೂರಿನ ಟ್ರಾಫಿಕ್ ಇಡೀ ವರ್ಲ್ಡ್​​ಗೆ ಫೇಮಸ್. ಕಿಲೋ ಮೀಟರ್ ಗಟ್ಟಲೇ ಜಾಮ್.. ಗಂಟ್ಟೆಗಟ್ಟಲೇ ಟ್ರಾಫಿಕ್​ಗೆ ರಾಜಧಾನಿಯ ಜನ ಹೈರಾಣಗಿದ್ದಾರೆ.‌ ಕಾರು-ಬೈಕ್ ಬಸ್​ಗಳು ಮಾತ್ರವಲ್ಲದೇ ಆ್ಯಂಬುಲೆನ್ಸ್​​ಗಳು ಜಾಮ್ ನಲ್ಲಿ ಸಿಲುಕಿ ರೋಗಿಗಳು ಪರದಾಡ್ತಿದ್ದಾರೆ. ಈ ಗೋಳಾಟದ ನಡುವೆ ರಾಜ್ಯ ರಾಜಧಾನಿ ಅನಗತ್ಯವಾಗಿ ಹೊಸ‌ದಾಖಲೆಗೆ ಸೇರಿಸಿಕೊಂಡಿದೆ.‌

ಬೆಂಗಳೂರು ಟ್ರಾಫಿಕ್​ನಲ್ಲಿ ವಿಶ್ವದ ಎರಡನೇ ನಗರ ಎಂಬ ಪಟ್ಟ ಅಲಂಕರಿಸಿಕೊಂಡಿದೆ‌. ಜೊತೆಗೆ ಇದೀಗ ಕಾರುಗಳ ಸಂಖ್ಯೆಯಲ್ಲಿ ರಾಷ್ಟ್ರ ರಾಜಧಾನಿಯನ್ನ ಸೈಡ್ ಹೊಡೆದು ಮೊದಲ ಸ್ಥಾನಕ್ಕೆ ಬಂದಿದೆ. ಹಿಂದೆ ದೆಹಲಿಯಲ್ಲಿ 33.8 ಲಕ್ಷ ಕಾರುಗಳಿದ್ದವು, ಆಗ ಎಚ್ಚೆತ್ತುಕೊಂಡ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವಾಹನಗಳ ಆಯಸ್ಸಿನ ಮಿತಿ ಜಾರಿ ಮಾಡ್ತು. ಅದರಂತೆ ದೆಹಲಿ ಸರ್ಕಾರ ಪೆಟ್ರೋಲ್ ವಾಹನ 10 ವರ್ಷ ಹಾಗೂ ಡಿಸೇಲ್ ವಾಹನ 15 ವರ್ಷ ಆಗಿದ್ರೆ, ರಸ್ತೆಗೆ ಇಳಿಸಿದಂತೆ ನೋಡಿಕೊಂಡು‌‌. ಸ್ಕ್ರ್ಯಾಪಿಂಗ್ ಪಾಲಿಸಿ ತರುವಲ್ಲಿ ಯಶಸ್ವಿಯಾಯ್ತು. ಇದರಿಂದ ಕಾರುಗಳ ಸಂಖ್ಯೆ 33.8 ಲಕ್ಷದಿಂದ 20.7 ಲಕ್ಷ ಇಳಿಕೆಯಾಗಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಗುಜರಿ‌ ನೀತಿ ಜಾರಿಯಲ್ಲಿ ದೃಡ ನಿರ್ಧಾರಕ್ಕೆ ಬಂದಿಲ್ಲ.

2023ರ ವಾಹನಗಳ ಸಂಖ್ಯೆ

ಒಟ್ಟು ವಾಹನ: 1,14,28,331
ದ್ವಿಚಕ್ರ ವಾಹನ: 76 ,77,541
ಕಾರುಗಳು: 23, 51, 437

2023ರ ಸಿಲಿಕಾನ್​ ಸಿಟಿಯ ವಾಹನಗಳ ಸಂಖ್ಯೆ ಗಮನಿಸೋದಾದ್ರೆ, ಒಟ್ಟು ವಾಹನ 1 ಕೋಟಿ 14 ಲಕ್ಷದ 28 ಸಾವಿರದ 331, ದ್ವಿಚಕ್ರ ವಾಹನ 76 ಲಕ್ಷದ 77 ಸಾವಿರದ 541, ಕಾರುಗಳು 23 ಲಕ್ಷದ 51 ಸಾವಿರದ 437 ಆಗಿದೆ. ಬೆಂಗಳೂರಿನಲ್ಲಿ ತಿಂಗಳಿಗೆ ಸರಾಸರಿ 50 ಸಾವಿರಕ್ಕೂ ಅಧಿಕ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಸಿಟಿಯಲ್ಲಿ ಸರಾಸರಿ ಪ್ರತಿ ಕಿಲೋ‌ಮೀಟರ್ ಗೆ 761 ಕಾರುಗಳಿವೆ. ದೆಹಲಿಯಲ್ಲಿ ಇದರ ಸಂಖ್ಯೆ 428 ಮಾತ್ರ. ಇದಕ್ಕೆಲ್ಲ ಕಾರಣ ಸರ್ಕಾರ 15 ವರ್ಷ ಮೇಲ್ಪಟ್ಟ ವಾಹನಗಳನ್ನ ಗುಜರಿಗೆ ಹಾಕಲು ಕಡ್ಡಾಯ ನಿಯಮ ಜಾರಿ ಮಾಡದೇ ಇರೋದು. ಸಿಟಿಯಲ್ಲಿ ಸುಮಾರು 15 ಲಕ್ಷ ವಾಹನಗಳು ಆಯಸ್ಸು 15 ವರ್ಷ ದಾಟಿದೆಯಂತೆ. ಒಟ್ಟಾರೆ ದಟ್ಟಣೆಯ ಕಾರಣವೊಡ್ಡಿ ಬೀದಿಬದಿ ವ್ಯಾಪರಿಗಳ ತೆರವು ಆಗ್ತಿದೆ. ಆದರೆ ಸರ್ಕಾರ ಹೆಚ್ಚಾಗ್ತಿರುವ ವಾಹನಗಳ ಸಂಖ್ಯೆಗೆ ಕಡಿವಾಣ ಹಾಕ್ತಿಲ್ಲ. ಇನ್ನಾದ್ರೂ ಸಾರ್ವಜನಿಕ ಸಾರಿಗೆ ಬಳಸುವಂತೆ ಅನುಕೂಲ ಮಾಡಕೋಡಿ ಅಂತ ಜನರು ಆಗ್ರಹಿಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಮಿತಿ ಮೀರಿದ ಟ್ರಾಫಿಕ್​ ಜಾಮ್​​.. ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2023/08/Traffic.jpg

Load More