newsfirstkannada.com

ಬಳ್ಳಾರಿಯಲ್ಲಿ ನೀರಿಗಾಗಿ ಪರದಾಟ.. ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಜನರ ನಿರ್ಧಾರ!

Share :

Published February 19, 2024 at 5:56am

    ನೀರರು ಬರುತ್ತಾ ಅಂತಾ ಎದುರು ನೋಡುತ್ತಿರೋ ಜನ

    ಕೆರೆ ನಿರ್ಮಾಣದ ಬಗ್ಗೆ ಸಚಿವ ಬಿ ನಾಗೇಂದ್ರ ಭರವಸೆ

    ಅಲ್ಲಿಪುರ ಕೆರೆಯಿಂದ ಪೈಪ್​ಲೈನ್​ ಮೂಲಕ ನೀರು

ಬಳ್ಳಾರಿ: ಬೇಸಿಗೆ ಮುನ್ನವೇ ಕರುನಾಡಿನಲ್ಲಿ ನೀರಿನ ಹಾಹಾಕಾರ ಎದುರಾಗಿದೆ. ಬಳ್ಳಾರಿಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಮಹಿಳೆಯರು-ಪುರುಷರು, ಶಾಲಾ ವಿದ್ಯಾರ್ಥಿನಿಗಳು ನೀರಿಗಾಗಿ ಟ್ಯಾಂಕರ್ ದಾರಿಯನ್ನೇ ಎದುರು ನೋಡೋ ಪರಿಸ್ಥಿತಿ ಬಳ್ಳಾರಿ ಜಿಲ್ಲೆಗೆ ಬಂದೊದಗಿದೆ.

ಸಚಿವ ಬಿ.ನಾಗೇಂದ್ರ ತವರು ಕ್ಷೇತ್ರದಲ್ಲಿ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಹರಗಿನ ಡೋಣಿ ಗ್ರಾಮದಲ್ಲಿ ಒಂದು ಹನಿ ನೀರು ಬರ್ತಿಲ್ಲ. ಗ್ರಾಮದ ಸುತ್ತ ಎಲ್ಲೂ ಕೆರೆ ಇಲ್ಲದ ಪರಿಣಾಮ ಅಂತರ್ಜಲ ಕುಸಿದಿದೆ. ಹೀಗಾಗಿ ಗ್ರಾಮದಲ್ಲಿ ಒಂದೇ ಒಂದು ಬೋರ್‌ವೆಲ್‌ನಲ್ಲಿ ನೀರು ಬರ್ತಿಲ್ಲ. ದಿನ ನಿತ್ಯದ ಬಳಕೆ ಹಾಗೂ ಕುಡಿಯುವ ನೀರಿಗಾಗಿ ಜನರು ಸಂಕಷ್ಟ ಪಡುವ ಸ್ಥಿತಿ ಎದುರಾಗಿದೆ.

ಜಾನುವಾರುಗಳಿಗೆ ನೀರಿಲ್ಲದ ಗ್ರಾಮಸ್ಥರು ಅವುಗಳನ್ನ ಈಗಾಗಲೇ ಮಾರಾಟ ಮಾಡಿದ್ದಾರೆ. ಪ್ರತಿವರ್ಷವೂ ಈ ಗ್ರಾಮದವ್ರು ನೀರಿನ ಸಮಸ್ಯೆಯನ್ನ ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸುವಂತೆ ಸಾಕಷ್ಟು ಮನವಿ ಮಾಡಿದ್ರೂ ಕೂಡ ಕ್ಯಾರೆ ಅಂದಿಲ್ಲ. ಕನಿಷ್ಠ ಕುಡಿಯುವ ನೀರು ಕೊಡದ ಸರ್ಕಾರದ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದು, ಲೋಕಸಭಾ ಚುನಾವಣೆಯಲ್ಲಿ ಮತದಾನದ ಬಹಿಷ್ಕಾರದ ಎಚ್ಚರಿಕೆಯನ್ನ ಕೊಟ್ಟಿದ್ದಾರೆ. ಈ ಹಿಂದೆಯೂ ಕೂಡ ನೀರಿಗಾಗಿ ಗ್ರಾಮಸ್ಥರು ವಿಧಾನಸಭಾ ಚುನಾವಣೆಯಲ್ಲಿ ಮತದಾನವನ್ನ ಬಹಿಷ್ಕರಿಸಿದ್ರು.

ಇನ್ನು, ಡೋಣಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಎಂದು ನ್ಯೂಸ್‌ಫಸ್ಟ್ ಸುದ್ದಿ ಬಿತ್ತರಿಸುತ್ತಿದ್ದಂತೆ, ಸಚಿವ ನಾಗೇಂದ್ರ ಎಚ್ಚೆತ್ತುಕೊಂಡಿದ್ದಾರೆ. ಅಲ್ಲಿಪುರ ಕೆರೆ ಮೂಲಕ ಸಚಿವ ನಾಗೇಂದ್ರ ಪೈಪ್‌ಲೈನ್ ಮೂಲಕ ಗ್ರಾಮಕ್ಕೆ ನೀರು ಪೂರೈಕೆ ಮಾಡಿದ್ದಾರೆ. ಪೈಪ್‌ನಿಂದ ನೀರು ಬರ್ತಿದ್ದಂತೆ ಮಕ್ಕಳು ಕುಣಿದು ಕುಪ್ಪಳಿಸಿದ್ದಾರೆ. ಗ್ರಾಮಕ್ಕೆ ಕೆರೆ ನಿರ್ಮಾಣದ ಬಗ್ಗೆ ಸಚಿವ ನಾಗೇಂದ್ರ ಭರವಸೆ ನೀಡಿದ್ದಾರೆ. ಜನರ ಸಂಕಷ್ಟಗಳಿಗೆ ಸ್ಪಂದಿಸೋದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕೆಲಸ. ಕೆರೆ ನಿರ್ಮಾಣದ ಭರವಸೆ ನೀಡಿರೋ ಸಚಿವರು ಅದೆಷ್ಟು ಕಾರ್ಯರೂಪಕ್ಕೆ ತರ್ತಾರೋ ಎಂದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಳ್ಳಾರಿಯಲ್ಲಿ ನೀರಿಗಾಗಿ ಪರದಾಟ.. ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಜನರ ನಿರ್ಧಾರ!

https://newsfirstlive.com/wp-content/uploads/2024/02/water-problem.jpg

Load More