/newsfirstlive-kannada/media/post_attachments/wp-content/uploads/2025/05/Klaasen-1.jpg)
ಹೆನ್ರಿಚ್ ಕ್ಲಾಸೆನ್ ಅವರ ಭರ್ಜರಿ ಸೆಂಚುರಿಯಿಂದ ಹೈದ್ರಾಬಾದ್ ತಂಡ ಈ ಸೀಸನ್ನ ಅಂತಿಮ ಪಂದ್ಯದಲ್ಲಿ 278 ರನ್ಗಳ ಬೃಹತ್ ಮೊತ್ತದ ಟಾರ್ಗೆಟ್ ಅನ್ನು ಕೋಲ್ಕತ್ತಾದ ನೈಟ್ ರೈಡರ್ಸ್ಗೆ ನೀಡಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹೈದ್ರಾಬಾದ್ ತಂಡದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ತಮ್ಮ ಯೋಜನೆಯಂತೆ ಬ್ಯಾಟಿಂಗ್ ಆರಂಭಿಸಿದ ಹೈದ್ರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ಮೇಲೆ ಅಬ್ಬರದ ಬ್ಯಾಟಿಂಗ್ ಮಾಡಿತು. ಆರಂಭಿಕರಾದ ಅಭಿಷೇಕ್ ಶರ್ಮಾ 32 ರನ್ ಹಾಗೂ ಟ್ರಾವಿಸ್ ಹೆಡ್ 76 ರನ್ಗಳಿಂದ ಭದ್ರ ಬುನಾದಿ ಹಾಕಿದರು.
3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಹೆನ್ರಿಚ್ ಕ್ಲಾಸೆನ್, ಎದುರಾಳಿ ಬೌಲರ್ಗಳ ಮೇಲೆ ಎರಗಿದರು. ಈ ಐಪಿಎಲ್ ಆರಂಭದಿಂದಲೂ ಬ್ಯಾಟಿಂಗ್ನಲ್ಲಿ ಕೊಂಚ ಹಿನ್ನಡೆ ಅನುಭವಿಸಿದ್ದ ಹೆನ್ರಿಚ್ ಕ್ಲಾಸೆನ್, ಈ ಪಂದ್ಯದಲ್ಲಿ ಅಕ್ಷರಶಃ ಬಿರುಗಾಳಿ ಎಬ್ಬಿಸಿದರು. ಕೇವಲ 37 ಎಸೆತಗಳಲ್ಲಿ 6 ಬೌಂಡರಿ ಹಾಗೂ 9 ಸಿಕ್ಸರ್ಗಳಿಂದ ಭರ್ಜರಿ ಸೆಂಚುರಿ ಸಿಡಿಸಿದರು. ಪಂದ್ಯದಲ್ಲಿ ಒಟ್ಟು 105 ರನ್ಗಳನ್ನು ಗಳಿಸಿದ ಹೆನ್ರಿಚ್ ಕ್ಲಾಸೆನ್ ಕೊನೆವರೆಗೂ ಅಜೇಯರಾಗಿ ಉಳಿದರು.
ಇದನ್ನೂ ಓದಿ: ಚೆನ್ನೈ ಗೆಲುವು, RCBಗೆ ದೊಡ್ಡ ವರದಾನ.. ಈ ಚಾನ್ಸ್ ಆದರೂ ಉಪಯೋಗ ಮಾಡಿಕೊಳ್ಳುತ್ತಾ ಬೆಂಗಳೂರು?
ಇದರಿಂದ ಹೈದ್ರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 278 ರನ್ಗಳ ಬೃಹತ್ ಟಾರ್ಗೆಟ್ ಅನ್ನು ಎದುರಾಳಿಗೆ ನೀಡಿದೆ. ಕಳೆದ ವರ್ಷದ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಆರ್ಸಿಬಿ ವಿರುದ್ಧ 22 ಸಿಕ್ಸರ್ಗಳನ್ನು ಹೈದ್ರಾಬಾದ್ ತಂಡ ಬಾರಿಸಿತ್ತು. ಅದರಂತೆ ಈ ಬಾರಿ ಕೆಕೆಆರ್ ವಿರುದ್ಧ 19 ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಒಂದು ಇನ್ನಿಂಗ್ಸ್ನಲ್ಲಿ 2ನೇ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಮಾಡಿದೆ.
ಕೆಕೆಆರ್ ವಿರುದ್ಧ 3 ವಿಕೆಟ್ಗೆ 278 ರನ್ ಗಳಿಸುವ ಮೂಲಕ ಇಡೀ ಐಪಿಎಲ್ನಲ್ಲೇ 3ನೇ ಅತ್ಯಧಿಕ ಬೃಹತ್ ಸ್ಕೋರ್ ಆಗಿದೆ. ಈ ಮೊದಲು ಇದೇ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ ವಿರುದ್ಧ 286 ರನ್ಗಳನ್ನು ಬಾರಿಸಿತ್ತು. 2024ರಲ್ಲಿ ಆರ್ಸಿಬಿ ವಿರುದ್ಧ 287 ರನ್ ಗಳಿಸಿರುವುದು ಐಪಿಎಲ್ನ ಇತಿಹಾಸದಲ್ಲೇ ದೊಡ್ಡ ರನ್ಗಳು ಆಗಿವೆ. ಈ ದಾಖಲೆಯನ್ನು ಇದುವರೆಗೂ ಯಾರೂ ಕೂಡ ಬ್ರೇಕ್ ಮಾಡಿ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ