ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ SRH.. ಕೊನೆ ಪಂದ್ಯದಲ್ಲಿ ಕೆಕೆಆರ್​ಗೆ ಭಾರೀ ಮುಖಭಂಗ!

author-image
Bheemappa
Updated On
ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ SRH.. ಕೊನೆ ಪಂದ್ಯದಲ್ಲಿ ಕೆಕೆಆರ್​ಗೆ ಭಾರೀ ಮುಖಭಂಗ!
Advertisment
  • 9 ಸಿಕ್ಸರ್​ಗಳಿಂದ ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಹೆನ್ರಿಚ್ ಕ್ಲಾಸೆನ್
  • ಕೊನೆ ಪಂದ್ಯದಲ್ಲಿ ತೀವ್ರ ಅವಮಾನಕ್ಕೆ ಒಳಗಾದ ಕೋಲ್ಕತ್ತಾ ತಂಡ
  • ಬ್ಯಾಟಿಂಗ್, ಬೌಲಿಂಗ್​ನಲ್ಲಿ ಯಶಸ್ವಿಯಾದ ಹೈದ್ರಾಬಾದ್ ಟೀಮ್

ಸೀಸನ್​- 18ರ ಲೀಗ್​​ನ ಕೊನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಸೋಲುಂಡರೇ, ಹೈದ್ರಾಬಾದ್ ತಂಡ ಅತ್ಯದ್ಭುತವಾದ ಗೆಲುವಿನೊಂದಿಗೆ ಅಂತಿಮ ವಿದಾಯ ಹೇಳಿದೆ. ಹೆನ್ರಿಚ್ ಕ್ಲಾಸೆನ್ ಅವರ ಸಿಡಿಲಬ್ಬರದ ಬ್ಯಾಟಿಂಗ್​​​ನಿಂದ 110 ರನ್​ಗಳಿಂದ ಎಸ್​​​ಆರ್​ಹೆಚ್​ ಭರ್ಜರಿ ವಿಜಯ ಸಾಧಿಸಿತು.

ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಲೀಗ್​ನ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡ ಹೈದ್ರಾಬಾದ್ ತಂಡದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್​ ಅವರು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಹೈದ್ರಾಬಾದ್ ಪರವಾಗಿ ಭರ್ಜರಿ ಓಪನಿಂಗ್ ಬ್ಯಾಟಿಂಗ್ ಆರಂಭಿಸಿದ ಅಭಿಷೇಕ್ ಶರ್ಮಾ 4 ಫೋರ್, 2 ಸಿಕ್ಸರ್​​ಗಳಿಂದ 32 ರನ್ ಚಚ್ಚಿದರು. ಮತ್ತೊಬ್ಬ ಓಪನರ್​ ಟ್ರಾವಿಸ್​ ಹೆಡ್​ ಕೇವಲ 40 ಬಾಲ್​ಗಳಲ್ಲಿ 6 ಬೌಂಡರಿ, 6 ಸಿಕ್ಸರ್​​ನಿಂದ 76 ರನ್​ಗಳನ್ನ ಸಿಡಿಸಿದರು.

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಹೆನ್ರಿಚ್ ಕ್ಲಾಸೆನ್, ಕೋಲ್ಕತ್ತಾ ಬೌಲರ್​ಗಳನ್ನು ಧೂಳೀಪಟ ಮಾಡಿದರು. ಪಂದ್ಯದಲ್ಲಿ ಅಕ್ಷರಶಃ ಬಿರುಗಾಳಿ ಎಬ್ಬಿಸಿದ ಕ್ಲಾಸೆನ್, ಕೇವಲ 37 ಎಸೆತಗಳಲ್ಲಿ 6 ಬೌಂಡರಿ ಹಾಗೂ 9 ಸಿಕ್ಸರ್​ಗಳಿಂದ ಸಿಡಿಲಬ್ಬರದ ಸೆಂಚುರಿ ಸಿಡಿಸಿದರು. ಪಂದ್ಯದಲ್ಲಿ ಒಟ್ಟು 105 ರನ್ ಗಳಿಸಿದ ಹೆನ್ರಿಚ್ ಕ್ಲಾಸೆನ್ ಅಜೇಯರಾಗಿ ಉಳಿದರು. ಇದರಿಂದ ಹೈದ್ರಾಬಾದ್ ತಂಡ 20 ಓವರ್​​ಗಳಲ್ಲಿ ಕೇವಲ 3 ವಿಕೆಟ್​ಗೆ​ 278 ರನ್​ಗಳ ಬೃಹತ್ ಟಾರ್ಗೆಟ್ ಅನ್ನು ಕೆಕೆಆರ್​ಗೆ ನೀಡಿತ್ತು.

ಇದನ್ನೂ ಓದಿ:ಚೆನ್ನೈ ಗೆಲುವು, RCBಗೆ ದೊಡ್ಡ ವರದಾನ.. ಈ ಚಾನ್ಸ್​ ಆದರೂ ಉಪಯೋಗ ಮಾಡಿಕೊಳ್ಳುತ್ತಾ ಬೆಂಗಳೂರು?

publive-image

278 ರನ್​ಗಳ ದೊಡ್ಡ ಗುರಿ ಬೆನ್ನು ಬಿದ್ದ ಕೆಕೆಆರ್​ ಆರಂಭದಲ್ಲೇ ದೊಡ್ಡ ಆಘಾತಕ್ಕೆ ಒಳಗಾಯಿತು. ಸ್ಫೋಟಕ ಓಪನರ್ ಸುನೀಲ್ ನರೈನ್​ ಅವರು ಕೇವಲ 31 ರನ್​ಗೆ ಆಟ ಮುಗಿಸಿದರು. ಕ್ಯಾಪ್ಟನ್​ ಅಜಿಂಕ್ಯಾ ರಹಾನೆ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಇರಲಿಲ್ಲ. 15 ರನ್​ಗೆ ಕ್ಯಾಚ್ ಕೊಟ್ಟು ನಿರಾಸೆಗೆ ಒಳಗಾದರು. ಇವರಾದ ಮೇಲೆ ಡಿಕಾಕ್​ ಕೇವಲ 9 ರನ್​ಗೆ ಪೆವಿಲಿಯನ್​ಗೆ ನಡೆದರು.

ರಘುವಂಶಿ 14, ರಿಂಕು ಸಿಂಗ್ 9, ಆಂಡ್ರೆ ರಸೆಲ್ ಡಕೌಟ್, ರಮಣದೀಪ್ ಸಿಂಗ್ 13 ರನ್​ಗೆ ವಿಕೆಟ್​ ಒಪ್ಪಿಸಿದರು. ಹೀಗೆ ಬ್ಯಾಕ್​ ಟು ಬ್ಯಾಕ್​ ವಿಕೆಟ್​ಗಳನ್ನು ಕಳೆದುಕೊಂಡ ಕೆಕೆಆರ್​ ಕೊನೆಗೆ ಸೋಲೋಪ್ಪಿಕೊಂಡಿತು. 18.4 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡ ಕೋಲ್ಕತ್ತಾ ಟೀಮ್ 168 ರನ್​ ಮಾತ್ರ ಗಳಿಸಿತು. ಇದರಿಂದ ಹೈದ್ರಾಬಾದ್​ 110 ರನ್​ಗಳಿಂದ ಭರ್ಜರಿಯಾಗಿ ಗೆಲುವು ಪಡೆಯಿತು. ಈ ಎರಡು ತಂಡಗಳಿಗೂ ಇದು ಐಪಿಎಲ್​ ಲೀಗ್​ನ 14ನೇ ಪಂದ್ಯವಾಗಿದ್ದು ಹೈದ್ರಾಬಾದ್ ಗೆಲುವಿನೊಂದಿಗೆ ವಿದಾಯ ಹೇಳಿದರೆ, ಕೆಕೆಆರ್​ ಸೋಲಿನೊಂದಿಗೆ ಅಭಿಯಾನ ಮುಗಿಸಿತು.

ಡೆಲ್ಲಿ ಕ್ಯಾಪಿಟಲ್ಸ್​, ಆರ್​ಸಿಬಿ ವಿರುದ್ಧ ಕಳೆದ ಸೀಸನ್​ನಲ್ಲಿ 22 ಸಿಕ್ಸರ್​ಗಳನ್ನು ಹೈದ್ರಾಬಾದ್ ತಂಡ ಬಾರಿಸಿತ್ತು. ಅದರಂತೆ ಈ ಬಾರಿ ಕೆಕೆಆರ್ ವಿರುದ್ಧ 19 ಸಿಕ್ಸರ್ ಸಿಡಿಸುವ ಮೂಲಕ ಒಂದು ಇನ್ನಿಂಗ್ಸ್​​ನಲ್ಲಿ 2ನೇ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ದಾಖಲೆ ಮಾಡಿದೆ. ಕೆಕೆಆರ್​ ವಿರುದ್ಧ 3 ವಿಕೆಟ್​ಗೆ 278 ರನ್​ ಗಳಿಸುವ ಮೂಲಕ ಇಡೀ ಐಪಿಎಲ್​ನಲ್ಲೇ 3ನೇ ಅತ್ಯಧಿಕ ಬೃಹತ್​​ ಸ್ಕೋರ್ ಆಗಿದೆ. ಈ ಮೊದಲು ಇದೇ ಸೀಸನ್​ನಲ್ಲಿ ರಾಜಸ್ಥಾನ್​ ರಾಯಲ್ ವಿರುದ್ಧ 286 ರನ್​ಗಳನ್ನು ಬಾರಿಸಿತ್ತು. 2024ರಲ್ಲಿ ಆರ್​ಸಿಬಿ ವಿರುದ್ಧ 287 ರನ್​ ಗಳಿಸಿರುವುದು ಐಪಿಎಲ್​ನ ಇತಿಹಾಸದಲ್ಲೇ ದೊಡ್ಡ ರನ್​ಗಳು ಆಗಿವೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment