/newsfirstlive-kannada/media/post_attachments/wp-content/uploads/2025/02/shrikant-jichkar.jpg)
ಶಿಕ್ಷಣ ಎಂಬುದು ಎಲ್ಲಿರಿಗೂ ಕಡ್ಡಾಯವಾಗಿ ಸಿಗಲೇಬೇಕಾದ ಒಂದು ಪ್ರಮುಖ ಹಕ್ಕು. ಎಲ್ಲರೂ ಶಿಕ್ಷಿತರಾದರೆ ದೇಶವೂ ಪ್ರಗತಿಯ ದಾರಿಯಲ್ಲಿ ಸಾಗುತ್ತದೆ. ಸಭ್ಯ ಸಮಾಜದ ಒಂದು ಭಾಗವಾಗುತ್ತದೆ. ಶಿಕ್ಷಣರಹಿತ ದೇಶ ಎಂದಿಗೂ ಕೂಡ ಉತ್ತಮ ಸಮಾಜವನ್ನು ಸೃಷ್ಟಿಸಲಾರದು. ಹೀಗಾಗಿಯೇ ಸಾಕ್ಷರತೆಯ ಅರಿವನ್ನು ಈ ದೇಶದಲ್ಲಿ ಹಿಂದಿನಿಂದಲೂ ಕೂಡ ಮೂಡಿಸುತ್ತಲೇ ಬಂದಿದ್ದಾರೆ. ಹಾಗೆ ಈ ದೇಶದಲ್ಲಿ ಅನೇಕ ಜನರು ಶೈಕ್ಷಣಿಕ ವಿಚಾರದಲ್ಲಿ ಒಂದು ಇತಿಹಾಸವನ್ನೇ ಸೃಷ್ಟಿ ಮಾಡಿದ್ದಾರೆ. ಅದಕ್ಕೆ ದೊಡ್ಡ ನಿದರ್ಶನವೆಂದರೆ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಬಾಬಾಸಾಹೇಬ್ ಅವರ ತಮ್ಮ ಜೀವನದಲ್ಲಿ ಒಟ್ಟು 32 ಡಿಗ್ರಿಗಳನ್ನು ಸಂಪಾದಿಸಿದ್ದರು ಎಂದರೆ ಎಂತವರೂ ಕೂಡ ಬೆಕ್ಕಸ ಬೆರಗಾಗುತ್ತಾರೆ. ಅವರನ್ನು ಬಿಟ್ಟರೆ ಅತಿಹೆಚ್ಚು ಡಿಗ್ರಿ ಪಡೆದ ಮತ್ತೊಬ್ಬರಿದ್ದಾರೆ.
ಇವರು ಕೂಡ ತಮ್ಮ ಜೀವಮಾನದಲ್ಲಿ ಅತಿಹೆಚ್ಚು ದೊಡ್ಡ ದೊಡ್ಡ ಪದವಿಗಳನ್ನು ಮುಗಿಸಿ ಸರ್ವಶ್ರೇಷ್ಠ ಶಿಕ್ಷಣ ಪಡೆದ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಂಬಿಬಿಎಸ್ ಪದವಿಯನ್ನು ಪಡೆದಿರಲಿಲ್ಲ ಆದ್ರೆ ಇವರು ಎಂಬಿಬಿಎಸ್ ಪದವಿಯ ಜೊತೆಗೆ ಒಟ್ಟು 20 ಡಿಗ್ರಿಗಳನ್ನು ಪಡೆದಿದ್ದಾರೆ. ಎಂಬಿಬಿಎಸ್, ಎಂಬಿಎ, ಎಂಎಲ್ಬಿ ಸೇರಿ ಒಟ್ಟು 20 ದೊಡ್ಡ ದೊಡ್ಡ ಪದವಿಯನ್ನು ಪಡೆದ ಈ ವ್ಯಕ್ತಿಯ ಹೆಸರು ಶ್ರೀಕಾಂತ್ ಜೀಚ್ಕರ್
ಇದನ್ನೂ ಓದಿ: KPCC ಕುರ್ಚಿ ಕದನ; ವರಸೆ ಬದಲಿಸಿದ ಸತೀಶ್ ಜಾರಕಿಹೊಳಿ.. ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋ ತಂತ್ರ!
ಶ್ರೀಕಾಂತ್ ಜೀಚಕರ್ ಅವರನ್ನು ದೇಶದಲ್ಲಿ ಅತಿಹೆಚ್ಚು ವಿದ್ಯೆಯನ್ನು ಪಡೆದ ವ್ಯಕ್ತಿಯೆಂದು ಗುರುತಿಸಲಾಗುತ್ತದೆ. ಇವರ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿಯೂ ಕೂಡ ದಾಖಲಾಗಿದೆ. ಇವರು ಭಾರತದ ಅತ್ಯಂತ ಯೋಗ್ಯ ಶಿಕ್ಷಣವಂತ ಎಂಬ ಹೆಸರಿನಲ್ಲಿ ಇವರ ಹೆಸರು ದಾಖಲಾಗಿದೆ.
ಇನ್ನು ಇವರ ಪುಸ್ತಕ ಪ್ರೇಮವನ್ನು ನೋಡಿದರೆ ಅಥವಾ ಕೇಳಿದರೆ ಎಂತವರು ಕೂಡ ದಂಗಾಗಬೇಕು ಅಷ್ಟು ಪುಸ್ತಕಗಳನ್ನು ಓದಿ ಮುಗಿಸಿದ್ದಾರೆ. ಇವರು ತಮ್ಮ ಜೀವಮಾನದಲ್ಲಿ ಒಟ್ಟು 52 ಸಾವಿರ ಓದಿ ಮುಗಿಸಿದ್ದಾರೆ. ಈ ಎಲ್ಲಾ ಪುಸ್ತಕಗಳನ್ನು ಸಂಗ್ರಹಿಸಿರುವ ಅವರದೇ ಆದ ಸ್ವಂತ ಗ್ರಂಥಾಲಯವನ್ನು ಇವರು ಹೊಂದಿದ್ದರು.
ಇನ್ನು ಇವರು ಐಎಎಸ್ ಮತ್ತು ಐಪಿಎಸ್ ಪದವಿಯನ್ನು ಕೂಡ ಹೊಂದಿದ್ದರು ಎಂದರೆ ನೀವು ಅಚ್ಚರಿಗೆ ಬೀಳುತ್ತಿರಿ. ಆದ್ರೆ ಇವರು ತಮ್ಮ ಎರಡು ಸೇವೆಗೆ ರಾಜೀನಾಮೆ ನೀಡಿ ಆಚೆ ಬಂದಿದ್ದರು.ಇನ್ನು ಇವರು ರಾಜಕೀಯದಲ್ಲೂ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ. ಮಹಾರಾಷ್ಟ್ರದ ಮಂತ್ರಿಯಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯರಾಗಿದ್ದ ಶ್ರೀಕಾಂತ್, ವಿಧಾನಸಭಾ ಸದಸ್ಯರು ಕೂಡ ಆಗಿ ಸೇವೆ ಸಲ್ಲಿಸಿದ್ದಾರೆ.