Helicopter crash: ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ.. ಭಾರೀ ದುರಂತದ ಆತಂಕ

author-image
Ganesh
Updated On
ಇರಾನ್ ಅಧ್ಯಕ್ಷ ರೈಸಿ ಇನ್ನಿಲ್ಲ.. ಹೆಲಿಕಾಪ್ಟರ್ ಅಪಘಾತದಲ್ಲಿ ವಿದೇಶಾಂಗ ಸಚಿವ ಸೇರಿ ಎಲ್ಲರೂ ಸಾವು
Advertisment
  • ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್
  • ಲ್ಯಾಂಡಿಂಗ್ ವೇಳೆ ನಿಯಂತ್ರಣ ಕಳ್ಕೊಂಡು ಅನಾಹುತ
  • ಪತನಗೊಂಡಿರುವ ಹೆಲಿಕಾಪ್ಟರ್​ ಪತ್ತೆಯಾಗಿದೆ, ಆದರೆ..

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿದೆ. ಇಬ್ರಾಹಿಂ ರೈಸಿ ಹಾಗೂ ಇರಾನ್ ವಿದೇಶಾಂಗ ಸಚಿವ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಅಜರ್‌ಬೈಜಾನ್ ಜೋಲ್ಪಾ ಪ್ರಾಂತ್ಯದಲ್ಲಿ ಅಫಘಾತಕ್ಕೀಡಾಗಿದೆ.

ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡು ಅಪಘಾತವಾಗಿದೆ. ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ಸಚಿವ ಹೂಸೈನ್ ಅಜರ್‌ ಬೈಜಾನ್‌ನಲ್ಲಿ ಜಲಾಶಯವೊಂದನ್ನು ಉದ್ಘಾಟನೆ ಮಾಡಲು ತೆರಳಿದ್ದರು. ಕಾರ್ಯಕ್ರಮದಿಂದ ವಾಪಸ್ ಬರುವಾಗ ಈ ದುರಂತ ಸಂಭವಿಸಿದೆ. ಪ್ರತಿಕೂಲ ಹವಾಮಾನ, ಲ್ಯಾಂಡಿಂಗ್ ವೇಳೆ ಎದುರಾದ ಮುಸುಕಿನ ವಾತಾವರಣದಿಂದ ಅಪಘಾತವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:RCB ವಿರುದ್ಧ ಬಲಿಷ್ಠ ತಂಡ ಕಣಕ್ಕೆ.. ಪ್ಲೇ-ಆಫ್​ನಲ್ಲಿ ಯಾರು, ಯಾರ ಜೊತೆ ಸೆಣಸಾಟ..!

ಇರಾನ್ ಸೇನೆ ಹಾಗೂ ಅಧ್ಯಕ್ಷರ ಭದ್ರತಾ ಪಡೆ ಜೊತೆ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಮಾಧ್ಯಮಗಳ ವರದಿಗಳ ಪ್ರಕಾರ.. ಹೆಲಿಕಾಪ್ಟರ್ ಪತನ ಆಗಿರುವ ಜಾಗವನ್ನು ಪತ್ತೆ ಹಚ್ಚಲಾಗಿದೆ. ಅಧ್ಯಕ್ಷರು ಹಾಗೂ ಹಣಕಾಸು ಸಚಿವರು ಪತ್ತೆಯಾಗಿಲ್ಲ.

ಇದನ್ನೂ ಓದಿ:ಕೇವಲ ಮೂರು ದಿನದಲ್ಲಿ 1 ಲಕ್ಷ ಸಿಗಲಿದೆ.. ನಿಯಮ ಬದಲಿಸಿದೆ EPFO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment