/newsfirstlive-kannada/media/post_attachments/wp-content/uploads/2024/08/Australia.jpg)
ಹೆಲಿಕಾಪ್ಟರ್ವೊಂದು ಹೋಟೆಲ್ ಮೇಲ್ಛಾವಣಿಗೆ ಗುದ್ದಿದ ಪರಿಣಾಮ ಪೈಲಟ್ ಸಾವನ್ನಪ್ಪಿದ ಘಟನೆ ಉತ್ತರ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಹೆಲಿಕಾಪ್ಟರ್ ಗುದ್ದಿದ್ದಂತೆ ನಿಯಂತ್ರಣ ತಪ್ಪಿ ಹೋಟೆಲ್ ಮೇಲೆ ಬಿದ್ದಿದೆ. ಅಲ್ಲಿ ತಂಗಿದ್ದ ನೂರಾರು ಅತಿಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಟ್ವಿನ್ ಇಂಜಿನ್ ಹೆಲಿಕಾಪ್ಟರ್ ಹೋಟೆಲ್ ಮೇಲ್ಛಾವಣಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ.ಕೂಡಲೇ ಅಲ್ಲಿದ್ದವರನ್ನು ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಬಂದ ತುರ್ತು ನಿಗಮದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
Cairns hotel evacuated after a helicopter crashed into its roof in Cairns, QLD, Australia#breaking#Cairns#Queensland#Australiapic.twitter.com/A1H3GDni9j
— Bobby Ellison (@BobbyEllisonKY)
Cairns hotel evacuated after a helicopter crashed into its roof in Cairns, QLD, Australia#breaking#Cairns#Queensland#Australiapic.twitter.com/A1H3GDni9j
— Crime With Bobby (@CrimeWithBobby) August 11, 2024
">August 11, 2024
ಇದನ್ನೂ ಓದಿ: ತುಂಗಭದ್ರಾ ತೀರದ ಜನರೇ ಎಚ್ಚರ! ನಿನ್ನೆಗಿಂತ ಇಂದು ಹೊರಹರಿವಿನ ಪ್ರಮಾಣದಲ್ಲಿ ಏರಿಕೆ ಮಾಡಲು ಚಿಂತನೆ
ಹೆಲಿಕಾಪ್ಟರ್ ಅವಘಡದಲ್ಲಿ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಪೈಲಟ್ ಮತ್ತು ಹೆಲಿಕಾಪ್ಟರ್ ಅಪಘಾತದ ಕುರಿತು ತನಿಖೆ ಶುರು ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ