newsfirstkannada.com

ನೋಡ ನೋಡುತ್ತಿದ್ದಂತೆಯೇ ಪತನಗೊಂಡ ಹೆಲಿಕಾಪ್ಟರ್​.. ಶಿವಸೇನಾ ಉಪನಾಯಕಿಗೆ ಏನಾಯ್ತು?

Share :

Published May 3, 2024 at 12:59pm

Update May 3, 2024 at 1:00pm

  ಚುನಾವಣೆಯ ಪ್ರಚಾರಕ್ಕೆಂದು ತೆರಳಬೇಕಿದ್ದ ಶಿವಸೇನಾ ಉಪನಾಯಕಿ

  ಮಹಿಳಾ ಸಮಾವೇಶಕ್ಕೆ ಕರೆದೊಯ್ಯಲು ಬಂದ ಹೆಲಿಕಾಪ್ಟರ್​ ಪತನ

  ನೋಡ ನೋಡುತ್ತಿದ್ದಂತೆಯೇ ನೆಲಕಪ್ಪಳಿಸಿದ ಹೆಲಿಕಾಪ್ಟರ್; ವಿಡಿಯೋ ಇಲ್ಲಿದೆ

ಶಿವಸೇನೆ ಉಪನಾಯಕಿ ಸುಷ್ಮಾ ಅಂಧಾರೆ ತೆರಳಬೇಕಿದ್ದ ಹೆಲಿಕಾಪ್ಟರ್​ ಪತನಗೊಂಡ ದೃಶ್ಯ ಸಮೇತ ಘಟನೆ ಮಹಾದ್​ನಲ್ಲಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್​​ ಯಾವುದೇ ಪ್ರಾಣಪಾಯವಾಗಿಲ್ಲ ಎಂದು ತಿಳಿದುಬಂದಿದೆ.

ಲೋಕಸಭಾ ಚುನಾವಣೆಯ ಪ್ರಚಾರಕ್ಕೆಂದು ಸುಷ್ಮಾ ಅವರನ್ನು ಕರೆದೊಯ್ಯಲು ಹೆಲಿಕಾಪ್ಟರ್​ ಬಂದಿದೆ. ಸುಷ್ಮಾ ಅವರು ಹೆಲಿಕಾಪ್ಟರ್ ಎರುವ ಮುನ್ನವೇ ಹೆಲಿಕಾಪ್ಟರ್​ ಪತನಗೊಂಡಿದೆ. ಲ್ಯಾಂಡ್​​ ಮಾಡುವ ವೇಳೆಯೇ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿದೆ. ಹೆಲಿಕಾಪ್ಟರ್​ನಲ್ಲಿದ್ದ ಪೈಲಟ್​ಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಬೆಳಗ್ಗೆ 9:30 ಸುಷ್ಮಾ ಅಂಧಾರೆ ಪ್ರಚಾರಕ್ಕಾಗಿ ಬಾರಾಮತಿಗೆ ತೆರಳಬೇಕಿತ್ತು. ಅಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಮಾವೇಶದಲ್ಲಿ ಸುಷ್ಮಾ ಅವರು ಮಹಾಡ್​ನಿಂದ ತೆರಳಬೇಕಿತ್ತು. ಆದರೆ ಈ ವೇಳೆ ಕರೆದೊಯ್ಯಲು ಬಂದ ಹೆಲಿಕಾಪ್ಟರ್​ ನೆಲಕಪ್ಪಳಿಸಿದೆ.

ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ಯಾವುದೇ ದೇಶದಲ್ಲಿದ್ರೂ ಹಿಡಿದು ತರುತ್ತೇವೆ: ಸಿಎಂ ಸಿದ್ದರಾಮಯ್ಯ

ಸುಷ್ಮಾ ಅಂಧಾರೆ ಯಾರು?

ಸುಷ್ಮಾ ಅಂಧಾರೆ ಮಹಾರಾಷ್ಟ್ರದ ರಾಜಕೀಯದಲ್ಲಿ ಗುರುತಿಸಿಕೊಂಡ ಮಹಿಳೆ. ಇವರು ಉತ್ತಮ ಬರಹಗಾರರು ಹೌದು. ಮೂಲತಃ ವಕೀಲರಾಗಿರುವ ಇವರು ಉಪನ್ಯಾಸಕಿಯೂ ಆಗಿದ್ದಾರೆ. 2022ರಿಂದ ಸುಷ್ಮಾ ಶಿವಸೇನಾ ಪಕ್ಷದಲ್ಲಿ ಉಪನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೋಡ ನೋಡುತ್ತಿದ್ದಂತೆಯೇ ಪತನಗೊಂಡ ಹೆಲಿಕಾಪ್ಟರ್​.. ಶಿವಸೇನಾ ಉಪನಾಯಕಿಗೆ ಏನಾಯ್ತು?

https://newsfirstlive.com/wp-content/uploads/2024/05/Helicopter-2.jpg

Load More