ಹೀಲಿಯಂ ಸಿಸ್ಟಂ ಸೋರಿಕೆ! ಬಾಹ್ಯಾಕಾಶದಲ್ಲಿ ಅಪಾಯದಲ್ಲಿ ಸಿಲುಕಿದ ಭಾರತ ಮೂಲದ ವಿಜ್ಞಾನಿ ಸುನಿತಾ ವಿಲಿಯಮ್ಸ್!

author-image
AS Harshith
Updated On
ಸುನೀತಾರನ್ನು ಕರೆತರಲು ನಭಕ್ಕೆ ದೇವದೂತರು.. ತಿಂಗಳ​ ಅಂತ್ಯದಲ್ಲಿ ಸಿಹಿ ಸುದ್ದಿ ಹಂಚಲಿದೆ NASA
Advertisment
  • ಬಾಹ್ಯಾಕಾಶದಲ್ಲೇ ಸಿಲುಕಿಕೊಂಡ ಸುನಿತಾ ವಿಲಿಯಮ್ಸ್
  • ದಿನ ಕಳೆದಂತೆ ಕಡಿಮೆಯಾಗುತ್ತಿದೆ ಇಂಧನ.. ಮುಂದೇನು ಕತೆ?
  • ಎಮರ್ಜೆನ್ಸಿ ಮೆಸೇಜ್ ಪಾಸ್ ಮಾಡಿದ ನಾಸಾ.. ಭೂಮಿಗೆ ಕರೆತರಲು ಸರ್ಕಸ್​

ಭೂಮಂಡಲ ಮಾತ್ರವಲ್ಲದೇ ಬಾಹ್ಯಕಾಶದಲ್ಲೂ ಚರಿತ್ರೆ ಬರೆದಿರುವ ಭಾರತ ಮೂಲದ ವಿಜ್ಞಾನಿ ಸುನಿತಾ ವಿಲಿಯಮ್ಸ್​ ಬಾಹ್ಯಾಕಾಶದಲ್ಲಿ ಸಂಕಷ್ಟದ ಸಿಲುಕಿದ್ದಾರೆ. ಗಗನನೌಕೆಯಲ್ಲಿ ತಾಂತ್ರಿಕದೋಷ ಕಂಡು ಬಂದ ಹಿನ್ನೆಲೆ ವಾಪಸ್ ಬರಲಾರದೇ ಅಲ್ಲೇ ಸಿಲುಕಿದ್ದಾರೆ ಈ ಬೆನ್ನಲ್ಲೇ ಎಮರ್ಜೆನ್ಸಿ ಮೆಸೇಜ್ ಪಾಸ್ ಮಾಡಿದೆ.

ವಿಳಂಬವಾಗ್ತಿದ್ದಂತೆ ನಾಸಾ ಎಮರ್ಜೆನ್ಸಿ ಮೆಸೇಜ್ ಪಾಸ್

ಸುನಿತಾ ವಿಲಿಯಮ್ಸ್ ಭೂಮಂಡಲ ಮಾತ್ರವಲ್ಲ, ಅಂತರಿಕ್ಷದಲ್ಲಿ‌ ಚರಿತ್ರೆಯ ತಮ್ಮದೇ ಮುದ್ರೆವೊತ್ತಿದ್ದ ಭಾರತ‌ ಮೂಲದ ಹೆಮ್ಮೆಯ ವಿಜ್ಞಾನಿ. ಬಟ್ ನಾಸಾದ ಈ ಗಗನಯಾತ್ರಿಗೆ ಬಾಹ್ಯಾಕಾಶದಲ್ಲಿಯೇ ಆಪತ್ತು ಎದುರಾಗಿದೆ. ಕಳೆದ ಜೂನ್ 5 ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಸುನಿತಾ ಗಗನಯಾನ ಕೈಗೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟೊತ್ತಿಗಾಗಲೇ ಭೂಮಿಗೆ ವಾಪಸ್ ಆಗಬೇಕಿತ್ತು.. ಬಟ್ ಗಗನನೌಕೆಯಲ್ಲಿ ತಾಂತ್ರಿಕದೋಷ ಕಂಡು ಬಂದಿದ್ದು ಅವರಿಬ್ಬರೂ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಳ್ಳಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ನಾಸಾ ಎಮರ್ಜೆನ್ಸಿ ಮೆಸೇಜ್ ಪಾಸ್ ಮಾಡಿದೆ.

publive-image

ಇಂಧನ ಸೋರಿಕೆಯಾದ್ರೆ ಅಪಾಯ

ಗಗನನೌಕೆಯಲ್ಲಿ ಉಂಟಾದ ಸಣ್ಣ ಹೀಲಿಯಂ ಸಿಸ್ಟಮ್ ಸೋರಿಕೆಯಿಂದಾಗಿ ಭೂಮಿಗೆ ಮರಳುವುದು ವಿಳಂಬವಾಗಿದೆ. ನೌಕೆಯಲ್ಲಿ 45 ದಿನಕ್ಕಾಗುವಷ್ಟು ಇಂಧನ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ಇಂಧನ ಸೋರಿಕೆಯಾದ್ರೆ ಮುಂದೆ ಅಪಾಯ ಸಂಭವಿಸುವ ಸಾಧ್ಯತೆ ಇದೆ.

ಸ್ಪೇಸ್ ಮಾಡ್ಯೂಲ್ ಹಾಗೂ ಸರ್ವಿಸ್ ಮಾಡ್ಯೂಲ್​ನಲ್ಲಿರೋ 28 ಟ್ರಸ್ಟ್ ಇಂಜಿನ್​ಗಳಲ್ಲಿ ಕೆಲವು ಕೆಲಸ ನಿಲ್ಲಿಸಿರೋದು ಕೂಡ ಆತಂಕ ಸೃಷ್ಟಿಸಿದೆ.

ರಷ್ಯಾದ ಸ್ಯಾಟ್ ಲೈಟ್ ಪೀಸ್​ಗಳ ಸಮಸ್ಯೆ

ಇದೆಲ್ಲದರ ನಡುವೆ ಹೊಸ ಆತಂಕವೂ ಎದುರಾಗಿದೆ ಬಾಹ್ಯಾಕಾಶದಲ್ಲಿ ತುಂಡಾಗಿ ಬಿದ್ದಿರುವ ರಷ್ಯಾದ ಸ್ಯಾಟ್ ಲೈಟ್ ಪೀಸ್​ಗಳು ಸಮಸ್ಯೆ ತಂದಿಟ್ಟಿದೆ. ಈ ಪೀಸ್​ಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಅಥವಾ ಗಗನಯಾತ್ರಿಗಳಿಗೆ ಅಪ್ಪಳಿಸಿದ್ರೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ಒಟ್ಟಿನಲ್ಲಿ ಬಾಹ್ಯಾಕಾಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ ಕರೆತರಲು ನಾಸಾ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಆದಷ್ಟು ಬೇಗ ಈ ಗಗನಯಾತ್ರಿಗಳು ಸುರಕ್ಷಿತವಾಗಿ ವಾಪಸ್ ಬರಲಿ ಅನ್ನೋದೆ ಎಲ್ಲರ ಪ್ರಾರ್ಥನೆ‌.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment