newsfirstkannada.com

‘ಆದಿವಾಸಿಗಳ ಮೇಲೆ ಮೋದಿ ಸರ್ಕಾರದ ಪಿತೂರಿ’- ಅಸೆಂಬ್ಲಿಯಲ್ಲಿ ಹೇಮಂತ್ ಸೋರೆನ್ ಗಂಭೀರ ಆರೋಪ

Share :

Published February 5, 2024 at 1:34pm

    ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಸಿಎಂ ಬಂಧನ

    ಬಹಳ ಸುದೀರ್ಘ ಸಮಯದಿಂದ ತಮ್ಮ ಬಂಧನಕ್ಕೆ ರಣತಂತ್ರ

    ಸಾಕ್ಷ್ಯ ಆಧಾರ ತೋರಿಸಿದರೆ ರಾಜಕೀಯ ಸನ್ಯಾಸ ಸ್ವೀಕರಿಸುವೆ

ರಾಂಚಿ: ಹಲವು ರಾಜಕೀಯ ವಿದ್ಯಾಮಾನಗಳ ಬಳಿಕ ಜಾರ್ಖಂಡ್ ವಿಧಾನಸಭೆಯಲ್ಲಿ ಸಿಎಂ ಚಂಪೈ ಸೊರೇನ್ ಅವರು ವಿಶ್ವಾಸಮತ ಯಾಚಿಸಿದ್ದಾರೆ. ವಿಶ್ವಾಸಮತ ಯಾಚನೆ ವೇಳೆ ನಿರ್ಗಮಿತ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಜೈಲಿನಿಂದ ಬಂದು ಅಧಿವೇಶನಕ್ಕೆ ಹಾಜರಾಗಿದ್ದಾರೆ. ಸದನದಲ್ಲಿ ಮಾತನಾಡಿದ ಅವರು ರಾಜ್ಯಪಾಲರು, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ವಿಶ್ವಾಸ ಮತಯಾಚನೆ ಮೇಲೆ ಭಾಷಣ ಆರಂಭಿಸಿದ ಸಿಎಂ ಚಂಪೈ ಸೋರೆನ್ ಅವರು ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮಾಡದ ಅಪರಾಧಕ್ಕಾಗಿ ಹೇಮಂತ್ ಸೋರೆನ್ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಇದಾದ ಬಳಿಕ ವಿಧಾನಸಭೆಯಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನವಾಗಿರುವ ಮಾಜಿ ಸಿಎಂ ಹೇಮಂತ್ ಸೋರೆನ್ ಅವರು ಭಾಷಣ ಮಾಡಿದರು. ತಮ್ಮ ಬಂಧನದಲ್ಲಿ ರಾಜಭವನ ಕೂಡ ಶಾಮೀಲಾಗಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಸಿಎಂ ಅನ್ನು ಬಂಧಿಸಲಾಗಿದೆ. ಕೇಂದ್ರ ಸರ್ಕಾರ, ರಾಜ್ಯಪಾಲರು ಷಡ್ಯಂತ್ರ ಮಾಡಿ ತಮ್ಮ ಬಂಧನವಾಗುವಂತೆ ಮಾಡಿದ್ದಾರೆ. ಬಹಳ ಸುದೀರ್ಘ ಸಮಯದಿಂದ ತಮ್ಮ ಬಂಧನಕ್ಕೆ ಪ್ಲ್ಯಾನ್ ಮಾಡಲಾಗಿತ್ತು ಎಂದು ಆರೋಪಿಸಿದರು.

ಇದನ್ನೂ ಓದಿ: ಜಾರ್ಖಂಡ್​ ಸಿಎಂ ಹೇಮಂತ್​ ಸೊರೇನ್​ ಬಂಧನ.. ನೂತನ ಸಿಎಂ ಆಗಿ ಚಂಪೈ ಸೊರೇನ್ ಆಯ್ಕೆ! ಇವರ ಹಿನ್ನೆಲೆ ಗೊತ್ತಾ?

ಭಾಷಣ ಮುಂದುವರಿಸಿದ ಹೇಮಂತ್ ಸೊರೇನ್ ಅವರು ಆದಿವಾಸಿಗಳನ್ನು ಇಷ್ಟೊಂದು ನಿಕೃಷ್ಟವಾಗಿ ಯಾಕೆ ಕಾಣಲಾಗುತ್ತಿದೆ. ಮುಂದೆಯೂ ಆದಿವಾಸಿಗಳ ಜೊತೆಗೆ ಇದೇ ರೀತಿ ವ್ಯವಹರಿಸಲಾಗುತ್ತೆ. ಆದಿವಾಸಿಗಳು ಕಾಡಿನಲ್ಲಿದ್ದವರು, ಕಾಡಿನಲ್ಲೇ ಇರಲಿ ಎಂಬ ಆಲೋಚನೆ ಬಿಜೆಪಿಗೆ ಇದೆ. ಬಿಜೆಪಿಯವರು ನಮ್ಮನ್ನು ಕಾಡಿಗೆ ಕಳಿಸಲು ಬಯಸಿದ್ದಾರೆ. ಇದರಿಂದ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದರು. ಕೇಂದ್ರದ ತನಿಖಾ ಏಜೆನ್ಸಿಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ನಾವು ಸೋಲು ಒಪ್ಪಿಕೊಳ್ಳುವುದಿಲ್ಲ. ಜಮೀನು ನನ್ನ ಹೆಸರಿನಲ್ಲಿದೆ ಎಂದು ಸಾಬೀತುಪಡಿಸಲಿ. ಇ.ಡಿ ಸಾಕ್ಷ್ಯ ಆಧಾರ ತೋರಿಸಿದರೆ, ತಮ್ಮ ವಿರುದ್ಧದ ಆರೋಪ ಸಾಬೀತಾದರೇ ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಹೇಮಂತ್ ಸೋರೆನ್ ಸವಾಲು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಆದಿವಾಸಿಗಳ ಮೇಲೆ ಮೋದಿ ಸರ್ಕಾರದ ಪಿತೂರಿ’- ಅಸೆಂಬ್ಲಿಯಲ್ಲಿ ಹೇಮಂತ್ ಸೋರೆನ್ ಗಂಭೀರ ಆರೋಪ

https://newsfirstlive.com/wp-content/uploads/2024/02/Hemant-Soren.jpg

Load More